Top

2 ಲಕ್ಷದವರೆಗಿನ ಕೃಷಿ ಸಾಲಮನ್ನ, ಇಸ್ರೇಲ್ ಮಾದರಿ ಕೃಷಿ ಜಾರಿ....

2 ಲಕ್ಷದವರೆಗಿನ ಕೃಷಿ ಸಾಲಮನ್ನ, ಇಸ್ರೇಲ್ ಮಾದರಿ ಕೃಷಿ ಜಾರಿ....
X

ನಿರೀಕ್ಷೆಯಂತೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್​ನಲ್ಲಿಯೇ ರೈತರ 2 ಲಕ್ಷದವರೆಗಿನ ಸಾಲಮನ್ನಾ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಬಜೆಟ್​ ಮಂಡಿಸಿದ ಕುಮಾರಸ್ವಾಮಿ, ಸಹಕಾರಿ ಬ್ಯಾಂಕ್ ಗಳಲ್ಲಿರುವ ರೈತರ ಸುಮಾರು 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲಾಗುವುದು. ಇದರಿಂದ ಸರಕಾರಕ್ಕೆ 34 ಸಾವಿರ ಕೋಟಿ ರೂ.ಗಳ ವರೆಗಿನ ಹೊರೆಯಾಗಲಿದೆ ಎಂದು ಪ್ರಕಟಿಸಿದರು.

ಈಗಾಗಲೇ 2 ಲಕ್ಷ ರೂ ವರೆಗಿನ ಸಾಲ ಪಾವತಿ ಮಾಡಿರುವ ರೈತರ ಖಾತೆಗಳಿಗೆ ರಾಜ್ಯ ಸರ್ಕಾರ ಸಾಲದ ಮೊತ್ತವನ್ನು ಮರುಪಾವತಿ ಮಾಡಲಿದೆ ಎಂದೂ ಕುಮಾರಸ್ವಾಮಿ ಪ್ರಕಟಿಸಿದರು.

ಇದೇ ವೇಳೆ ಇಸ್ರೇಲ್ ಮಾದರಿಯಲ್ಲಿ ಕಡಿಮೆ ನೀರಿನೊಂದಿಗೆ ಉತ್ತಮ ಬೆಳೆ ಪಡೆಯುವ ಯೋಜನೆ ಜಾರಿಗೆ ತರಲಾಗುವುದು. ಈ ಹಿನ್ನೆಲೆಯಲ್ಲಿ ಕೋಲಾರ, ಚಿತ್ರದುರ್ಗ, ಕೊಪ್ಪಳ ಮತ್ತು ಗದಗದಲ್ಲಿ 5000 ಹೆಕ್ಟೇರ್ ಪ್ರದೇಶದ ಖುಷ್ಕಿ ಭೂಮಿಯಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಇದಕ್ಕಾಗಿ 150 ಕೋಟಿ ರೂ.ವನ್ನು ಮುಖ್ಯಮಂತ್ರಿ ಘೋಷಿಸಿದರು.

ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಚಿವರನ್ನೊಳಗೊಂಡ ಕರ್ನಾಟಕ ರಾಜ್ಯ ರೈತರ ಸಲಹಾ ಸಮಿತಿ ರಚಿಸಿ 3 ತಿಂಗಳಿಗೊಮ್ಮೆ ಸಭೆ ಸೇರಿ ಪರಿಣಾಮಗಳ ಮೌಲ್ಯಮಾಪನ ಮಾಡಲಾಗುವುದು ಎಂದು ಕುಮಾರಸ್ವಾಮಿ ಪ್ರಕಟಿಸಿದರು.

Next Story

RELATED STORIES