Top

ಮದ್ಯ, ವಿದ್ಯುತ್​, ತೈಲ ಬೆಲೆಗಳ ಏರಿಕೆ: ಬಸ್ ದರ ಏರಿಕೆ ಇಲ್ಲ!

ಮದ್ಯ, ವಿದ್ಯುತ್​, ತೈಲ ಬೆಲೆಗಳ ಏರಿಕೆ: ಬಸ್ ದರ ಏರಿಕೆ ಇಲ್ಲ!
X

ರೈತರ ಸಾಲಮನ್ನ ಹಾಗೂ ಹಿಂದಿನ ಕಾಂಗ್ರೆಸ್ ಸರಕಾರದ ಯೋಜನೆಗಳ ಮುಂದುವರಿಕೆಗೆ ವಿತ್ತಿಯ ಕೊರತೆ ನೀಗಿಸಿಕೊಳ್ಳಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ, ಅಬಕಾರಿ, ವಿದ್ಯುತ್​, ಪೆಟ್ರೋಲ್ ಮತ್ತು ಡೀಸೆಲ್ ಮುಂತಾದ ಆದಾಯ ತರುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿದ್ದಾರೆ. ಇದರೊಂದಿಗೆ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಪೆಟ್ರೊಲ್ ಮೇಲಿನ ತೆರಿಗೆಯನ್ನು ಶೇ.30ರಿಂದ ಶೇ.32ಕ್ಕೆ ಏರಿಸಲಾಗಿದೆ. ಡೀಸೆಲ್ ಮೇಲಿನ ತೆರಿಗೆಯನ್ನು ಶೇ.19ರಿಂದ 21ಕ್ಕೇರಿಸಲಾಗಿದೆ. ಇದರಿಂದ ಪೆಟ್ರೋಲ್ ಪ್ರತಿ ಲೀಟರ್​ಗೆ 1.14ರೂ. ಮತ್ತು ಡೀಸೆಲ್ ಬೆಲೆ 1.12ರೂ.ಗೆ ಹೆಚ್ಚಳವಾಗಲಿದೆ. ಇದರಿಂದ 18.750 ಕೋಟಿ ರೂ. ರಾಜಸ್ವ ಸಂಗ್ರಹ ನಿರೀಕ್ಷಿಸಲಾಗಿದೆ.

ಅಬಕಾರಿ ಮೇಲಿನ ತೆರಿಗೆಯನ್ನು ಹೆಚ್ಚಿಸಲಿದ್ದು, ಮದ್ಯದ ಮೇಲಿನ ತೆರಿಗೆಯನ್ನು ಶೇ.4ಕ್ಕೇರಿಸಲಿದೆ. ಇದರಿಂದ 19,750 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೊಂದಲಾಗಿದೆ.

ವಿದ್ಯುತ್ ಮೇಲಿನ ತೆರಿಗೆಯನ್ನು ಶೇ.6ರಿಂದ 9ಕ್ಕೇರಿಸುವ ಪ್ರಸ್ತಾಪವನ್ನು ಕುಮಾರಸ್ವಾಮಿ ಬಜೆಟ್​ನಲ್ಲಿ ಮುಂದಿಟ್ಟಿದ್ದಾರೆ. ಸ್ವಂತ ಬಳಕೆ ವಿದ್ಯುತ್ ಮೇಲಿನ ತೆರಿಗೆಯನ್ನು ಪ್ರತಿ ಯೂನಿಟ್​ಗೆ 10ಪೈಸೆಯಿಂದ 20ಪೈಸೆಗೆ ಏರಿಸಲಾಗಿದೆ.

Next Story

RELATED STORIES