Top

ಸರ್ಬಿಯಾದಲ್ಲಿ ಜೋರಾಗಿದೆ ಕೋಟಿಗೊಬ್ಬನ ದರ್ಬಾರ್.!

ಸರ್ಬಿಯಾದಲ್ಲಿ ಜೋರಾಗಿದೆ ಕೋಟಿಗೊಬ್ಬನ ದರ್ಬಾರ್.!
X

ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ ಕೋಟಿಗೊಬ್ಬ-3.. ಕಳೆದ ಇಪ್ಪತ್ತು ದಿನಗಳಿಂದ ಈ ಹೈವೋಲ್ಟೇಜ್ ಆ್ಯಕ್ಷನ್ ಎಂಟ್ರಟ್ರೈನರ್ ಶೂಟಿಂಗ್​ಗಾಗಿ ಸರ್ಬಿಯಾ ರಾಜಧಾನಿ ಬೆಲ್ ಗ್ರೇಡ್ ನಲ್ಲಿ ಬೀಡು ಬಿಟ್ಟಿದೆ ಚಿತ್ರತಂಡ .. ಸದ್ಯ ಚಿತ್ರದ ಮೋಸ್ಟ್ ಎಕ್ಸ್​ಪೆನ್ಸೀವ್ ಆಕ್ಷನ್ ಎಪಿಸೋಡ್​​ನ ಅಲ್ಲಿ ಶೂಟ್ ಮಾಡಲಾಗ್ತಿದೆ.

ಎರಡು ವರ್ಷಗಳ ಹಿಂದೆ ಸೌತ್ ಸಿನಿದುನಿಯಾದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕಂಡ ಸಿನಿಮಾ ಕೋಟಿಗೊಬ್ಬ 2.. ಕೆ. ಎಸ್ ರವಿಕುಮಾರ್ ನಿರ್ದೇಶನದ ಈ ಆಕ್ಷನ್ ಎಂಟ್ರಟ್ರೈನರ್ ಏಕಕಾಲಕ್ಕೆ ಕನ್ನಡ ಮತ್ತು ತಮಿಳಿನಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು.. ಎರಡು ಶೇಡ್​​​ಗಳ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಮಾಲ್ ಮಾಡಿದ್ರು.. ಅದ್ರಲ್ಲೂ ಸುದೀಪ್ ಸ್ಟೈಲಿಶ್​ ಸ್ಟಂಟ್ಸ್ ಬೇಜಾನ್ ಸೌಂಡ್ ಮಾಡಿತ್ತು.

ಕೋಟಿಗೊಬ್ಬ- 3 ಮೇಕಿಂಗ್ ನೋಡಿದ್ರೆ ಶಾಕ್ ಆಗ್ತೀರಾ..!

ಯೆಸ್.. ಸರ್ಬಿಯಾ ರಾಜಧಾನಿ ಬೆಲ್ ಗ್ರೇಡ್ ನಲ್ಲಿ ಸದ್ಯ ಚಿತ್ರತಂಡ ಬೀಡು ಬಿಟ್ಟಿದ್ದು, ಆಕ್ಷನ್ ಸೀಕ್ವೆನ್ಸ್​​ನ ಶೂಟ್ ಮಾಡ್ತಿದೆ.. ಇದೇ ಮೊದಲ ಬಾರಿಗೆ ವಿದೇಶದಲ್ಲಿ 30 ದಿನಗಳ ದೊಡ್ಡ ಶೆಡ್ಯೂಲ್​ನ ಶೂಟಿಂಗ್ ನಡೀತಿದೆ.. ನಿರ್ಮಾಪಕ ಸೂರಪ್ಪ ಬಾಬು ಸಿಕ್ಕಾಪಟ್ಟೆ ಅದ್ದೂರಿಯಾಗಿ ಚಿತ್ರವನ್ನ ಕಟ್ಟಿಕೊಡ್ತಿದ್ದು, ಸ್ವತ: ಸುದೀಪ್ ಕಥೆ ಬರೆದಿದ್ದಾರೆ.. ಹೊಸ ನಿರ್ದೇಶಕ ಶಿವ ಕಾರ್ತಿಕ್ ಕೋಟಿಗೊಬ್ಬ-3 ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಕೋಟಿಗೊಬ್ಬ-3 ಚಿತ್ರದ ಬಹುತೇಕ ಕಥೆ ಸರ್ಬಿಯಾದಲ್ಲೇ ನಡೆಯಲಿದೆ.. ಅದಕ್ಕೆ ತಕ್ಕಂತೆ ಒಂದಷ್ಟು ಆಕ್ಷನ್ ಸೀಕ್ವೆನ್ಸ್​ ಸದ್ಯ ಅಲ್ಲಿ ಶೂಟ್ ಮಾಡಲಾಗ್ತಿದೆ.. ಅದಕ್ಕೆ ಸಂಬಂಧಿಸಿದ ಮೇಕಿಂಗ್ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.. ಕಾರ್ ಛೇಸ್ ಸೇರಿದಂತೆ ಒಂದಷ್ಟು ಹೈವೋಲ್ಟೇಜ್ ಆಕ್ಷನ್​ ಸೀನ್​ ಶೂಟ್ ಮಾಡ್ತಿದ್ದು, ಅದ್ರ ಮೇಕಿಂಗ್ ನೋಡಿದ್ರೆ, ಶಾಕ್ ಆಗುವಂತಿದೆ..ಸ್ವತ: ಸುದೀಪ್ ರೆಡ್ ಕಾರನ್ನ ವೇಗವಾಗಿ ಓಡಿಸಿಕೊಂಡು ಬಂದು ಹತ್ತಾರು ಅಡಿ ಮೇಲಿಂದ ಹಾರಿರೋ ಸ್ಟಂಟ್ ಮೈ ಜುಮ್​ ಅನ್ನಿಸುವಂತಿದೆ..

ಸ್ಟೈಲಿಶ್​​ ಆ್ಯಕ್ಷನ್​​ಗೆ ಅಭಿನಯ ಚಕ್ರವರ್ತಿ ಫೇಮಸ್

ಕಾಲಿವುಡ್​ನ ಸ್ಟಂಟ್ ಮಾಸ್ಟರ್ ಅನಲರಸು ಈ ಆಕ್ಷನ್ ಸೀಕ್ವೆನ್ಸ್​ನ ಕಂಪೋಸ್ ಮಾಡ್ತಿದ್ದಾರೆ.. ಸುದೀಪ್ ಕಾರ್ ಸ್ಟಂಟ್ ನೋಡಿ ಸ್ವತ: ಅನಲರಸು ಶಾಕ್ ಆಗಿದ್ಧಾರೆ..ಕಳೆದ 11 ದಿನಗಳಿಂದ ಸರ್ಬಿಯಾ ರಾಜಧಾನಿ ಬೆಲ್ ಗ್ರೇಡ್ ನಲ್ಲಿ ಶೂಟಿಂಗ್ ನಡೀತಿದೆ.

ಸುದೀಪ್ ಸ್ಟಂಟ್ ನೋಡಿ ಸ್ಟಂಟ್ ಮಾಸ್ಟರ್ ಶಾಕ್

ನಿಜ.. ಕನ್ನಡದಲ್ಲಿ ಸ್ಟೈಲಿಶ್​ ಸ್ಟಂಟ್ಸ್​ ಅಂದಾಕ್ಷಣ ಸುದೀಪ್ ಕಣ್ಮುಂದೆ ಬರ್ತಾರೆ.. ಕೋಟಿಗೊಬ್ಬ-2 ಚಿತ್ರದ ಸುದೀಪ್ ಸ್ಟಂಟ್ಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ರು.. ಅದನ್ನ ಮೀರಿಸುವಂತ ಆಕ್ಷನ್ ಎಪಿಸೋಡ್​ನ ಸೀಕ್ವೆಲ್​​ನಲ್ಲಿ ಕಂಪೋಸ್ ಮಾಡಲಾಗ್ತಿದೆ.. ಬೆಲ್ ಗ್ರೇಡ್​​ನ ಫ್ಲೈ ಓವರ್ ಮೇಲೆ ಸ್ಟಂಟ್ ಸೀಕ್ವೆನ್​ ಕಂಪೋಸ್ ಮಾಡಿದ್ದು,​ ಕ್ಯಾಮರಾಮನ್ ಶೇಖರ್ ಚಂದ್ರ ಅದನ್ನ ಸೆರೆಹಿಡಿದಿದ್ದಾರೆ.

ಬೆಲ್​ಗ್ರೇಡ್​ನ ಲೋಕಲ್ ಟೆಕ್ನೀಷಿಯನ್ಸ್​ನ ಬಳಸಿಕೊಂಡು ಬಹಳ ಅದ್ಭುತವಾಗಿ ಸೆರೆಹಿಡಿದಿದೆ ಚಿತ್ರತಂಡ.. ಸ್ವತ: ಸುದೀಪ್ ಟ್ವೀಟ್ ಮಾಡಿ ಈ ಆಕ್ಷನ್ ಸೀಕ್ವೆನ್ಸ್ ಮೇಕಿಂಗ್​​ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ..

ಕೋಟಿಗೊಬ್ಬ-3 ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಮಡ್ಡೋನ ಸೆಬಾಸ್ಟಿಯನ್ ಬಣ್ಣ ಹಚ್ಚಿದ್ದಾರೆ..ಶ್ರದ್ಧಾ ದಾಸ್ ಇಂಟರ್​ ಪೋಲ್ ಆಫೀಸರ್​​ ಪಾತ್ರದಲ್ಲಿ ಮಿಂಚಿದ್ದಾರೆ.. ಬಾಲಿವುಡ್ ನಟ ಅಪ್ತಾಬ್ ಶಿವದಾಸಿನಿ, ರವಿಶಂಕರ್, ತಬಲಾ ನಾಣಿ ಸೇರಿದಂತೆ ಭಾರಿ ತಾರಾಗಣ ಚಿತ್ರದಲ್ಲಿದೆ.. ಎಲ್ಲಾ ಅಂದುಕೊಂಡಂತೆ ಆದ್ರೆ, ಕೋಟಿಗೊಬ್ಬ-3 ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Next Story

RELATED STORIES