Top

ರಾಜ್ಯದ ಜನರಿಗೆ ಬೆಲೆ ಏರಿಕೆಯ ಬರೆ: ಗಗನಕ್ಕೇರಿದ ತೈಲಬೆಲೆ

ರಾಜ್ಯದ ಜನರಿಗೆ ಬೆಲೆ ಏರಿಕೆಯ ಬರೆ: ಗಗನಕ್ಕೇರಿದ ತೈಲಬೆಲೆ
X

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಚೊಚ್ಚಲ ರಾಜ್ಯ ಬಜೆಟ್ ಮಂಡನೆಯಲ್ಲಿ, ರಾಜ್ಯದ ಜನರಿಗೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಲಾಗಿದ್ದು, ಶೇ.30ರಷ್ಟಿದ್ದ ಸೆಸ್ ತೆರಿಗೆ 32ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಕರ್ನಾಟಕದಲ್ಲಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗಿದ್ದು, ಪೆಟ್ರೋಲ್‌, ಡಿಸೇಲ್ ದರ ಲೀಟರ್‌ಗೆ 1.14 ರೂ. ಹೆಚ್ಚಳವಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಸೆಸ್ ತೆರಿಗೆ ಕಡಿತಗೊಳಿಸಲು ಜನರು ಆಗ್ರಹಿಸಿದ್ರೆ, ರಾಜ್ಯ ಬಜೆಟ್‌ನಲ್ಲಿ ಮಾತ್ರ ಸೆಸ್ ತೆರಿಗೆ ಹೆಚ್ಚಿಗೆ ಮಾಡಲಾಗಿದೆ. ರೈತರ ಸಾಲಮನ್ನಾ ಮಾಡುವ ಅನಿವಾರ್ಯತೆ ಇರುವ ಕಾರಣ, ಈ ಸೆಸ್ ತೆರಿಗೆ ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ.

Next Story

RELATED STORIES