Top

ಸರಣಿ ಜಯದ ಮೇಲೆ ಭಾರತ ಕಣ್ಣು: ಇಂಗ್ಲೆಂಡ್​ಗೆ ತಿರುಗೇಟು ನೀಡುವ ಗುರಿ

ಸರಣಿ ಜಯದ ಮೇಲೆ ಭಾರತ ಕಣ್ಣು: ಇಂಗ್ಲೆಂಡ್​ಗೆ ತಿರುಗೇಟು ನೀಡುವ ಗುರಿ
X

ಕಾರ್ಡಿಫ್: ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತ ತಂಡ ಶುಕ್ರವಾರ ನಡೆಯುವ ಎರಡನೇ ಟಿ-20 ಪಂದ್ಯವನ್ನು ಗೆದ್ದೂ ಸರಣಿಯನ್ನು ವಶಪಡಿಸಿಕೊಳ್ಳುವ ವಿಶ್ವಾಸ ಹೊಂದಿದ್ದರೆ ಆತಿಥೇಯ ಇಂಗ್ಲೆಂಡ್ ತಿರುಗೇಟು ನೀಡುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ಗುರಿ ಹೊಂದಿದೆ.

ಭಾರತ ಮೊದಲ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಮಾರಕ ದಾಳಿ ಹಾಗೂ ಕೆ.ಎಲ್​. ರಾಹುಲ್ ಅವರ ಶತಕದ ಸಹಾಯದಿಂದ 8 ವಿಕೆಟ್​ಗಳ ಭರ್ಜರಿ ಜಯ ದಾಖಲಿಸಿತ್ತು. ಉತ್ತಮ ಆರಂಭದ ಹೊರತಾಗಿಯೂ ಇಂಗ್ಲೆಂಡ್ ಎರಡೂ ವಿಭಾಗಗಳಲ್ಲಿ ಎಡವಿತ್ತು.

ಇದೀಗ ಮೊದಲ ಪಂದ್ಯದಲ್ಲಿನ ತಪ್ಪಿನಿಂದ ಎಚ್ಚೆತ್ತುಕೊಂಡು ತಿರುಗೇಟು ನೀಡಲು ಆತಿಥೇಯ ಇಂಗ್ಲೆಂಡ್ ಸಜ್ಜಾಗಿದೆ. ಆಸ್ಟ್ರೇಲಿಯಾ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ್ದರೂ ಭಾರತ ವಿರುದ್ಧ ಹೀನಾಯ ಸೋಲು ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿದೆ. ಮಧ್ಯಮ ವೇಗಿ ಜೇಮ್ಸ್ ಆ್ಯಂಡರ್ಸನ್ ಭಾರತ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ತಂಡಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿರುವುದು ತಂಡದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ಭಾರತ ಈ ಸರಣಿಯನ್ನು 2-1ಯಿಂದ ಗೆದ್ದರೆ ಐಸಿಸಿ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ನಡುವಿನ ಅಂತರ ತಗ್ಗಿಸಿಕೊಳ್ಳಲಿದೆ. ಒಂದು ವೇಳೆ 3-0ಯಿಂದ ಕ್ಲೀನ್​ಸ್ವೀಪ್ ಮಾಡಿದರೆ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿ ಪಾಕಿಸ್ತಾನ ನಂತರದ 2ನೇ ಸ್ಥಾನಕ್ಕೆ ಲಗ್ಗೆ ಹಾಕಲಿದೆ. ಇಂಗ್ಲೆಂಡ್ ಸೋಲುಂಡರೆ 7ನೇ ಸ್ಥಾನಕ್ಕೆ ಕುಸಿಯಲಿದೆ.

Next Story

RELATED STORIES