Top

ಒಂದೇ ದಿನ ಅಖಾಡಕ್ಕಿಳಿದ್ರು ಡಿ ಬಾಸ್-ಯಶ್ ಬಾಸ್​​..!

ಒಂದೇ ದಿನ ಅಖಾಡಕ್ಕಿಳಿದ್ರು ಡಿ ಬಾಸ್-ಯಶ್ ಬಾಸ್​​..!
X

ಶ್ರೀಧರ್ ಶಿವಮೊಗ್ಗ ಜೊತೆ ಅರ್ಚನಾ ಶರ್ಮಾ, ಎಂಟರ್​ಟೈನ್ಮೆಂಟ್ ಬ್ಯೂರೋ-TV5

ಸದ್ಯ ಸ್ಯಾಂಡಲ್​ವುಡ್​ನಲ್ಲಿ ಜೋರ್​ದಾರಾಗಿ ಓಡುತ್ತಿರುವ ಸ್ಟಾರ್ ಕುದುರೆಗಳೆಂದ್ರೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್​ ಸ್ಟಾರ್ ಯಶ್.. ಇಬ್ಬರಿಗೂ ಸಾಗರದಷ್ಟು ಅಭಿಮಾನಿ ಸಮೂಹವಿದೆ.. ಈ ಇಬ್ಬರು ಒಂದೇ ದಿನ ಅಖಾಡಕ್ಕಿಳಿದ್ರೆ ಹುಣ್ಣಿಮೆ ದಿನ ಸಮುದ್ರ ಉಕ್ಕಿದಂತೆ, ಅಭಿಮಾನಿ ಸಾಗರ ಕಿಕ್ಕಿರಿದು ಕುಣಿಯುತ್ತದೆ.. ಅಷ್ಟಕ್ಕು ಒಟ್ಟಿಗೆ ಯಾಕೆ ದಚ್ಚು_ಯಶ್ ಅಖಾಡಕ್ಕಿಳಿದ್ರು..? ಅಂತಹ ವಿಶೇಷವೇನಿತ್ತು..? ಈ ಪ್ರಶ್ನೆಗಳಿಗೆ ರಸವತ್ತಾದ ಉತ್ತರ.. ಇದೋ ನಿಮ್ಮಮುಂದೆ..

ಇಬ್ಬರು ಬಾಸ್​​ಗಳ ಆಗಮನಕ್ಕೆ ಸ್ಯಾಂಡಲ್​ವುಡ್​ ಖುಷ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಇಬ್ಬರಿಗೂ ಸಾಗರದಷ್ಟು ಅಭಿಮಾನಿಗಳಿದ್ದಾರೆ.. ಇವ್ರು ಬರ್ತಾರೆ , ಎಲ್ಲರೊಟ್ಟಿಗೆ ಮಾತನಾಡ್ತಾರೆ ಅಂದ್ರೆ ಜನ ಜಂಗೂಳಿ ಜಮಾಯಿಸಿ ಬಿಡುತ್ತೆ.. ಇಂತಹ ಕರುನಾಡ ಬೆಳ್ಳಿಮೊಡದ ಧ್ರುವ ತಾರೆಯರು ಒಂದೇ ದಿನ ಅಖಾಡಕ್ಕೆ ಇಳಿದ್ದಿದ್ದಾರೆ.. ಅಷ್ಟಕ್ಕೂ ದರ್ಶನ್ ಮತ್ತು ಯಶ್ ಎಲ್ಲಿ..? ಯಾಕೆ..? ಅದೂ ಬೆಳ್ಳಂ ಬೆಳಗ್ಗೆನೇ ಬಂದಿದ್ರು ಅನ್ನೊದಕ್ಕೆ ಉತ್ತರ .. ಸಿನಿಮಾಗಳ ಶುಭ ಮುಹೂರ್ತ..

ಮರಿ ಟೈಗರ್ ಸಿನಿ ಮುಹೂರ್ತಕ್ಕೆ ಚಾಲನೆ ನೀಡಿದ ದಚ್ಚು

ಅಂದಕಾಲತ್ತಲ್ ಟೈಗರ್ ಪ್ರಭಾಕರ್ ಹಾಗೂ ತೂಗದೀಪ ಶ್ರೀನಿವಾಸ್ ಇಬ್ಬರು ಸ್ನೇಹಿತರು.. ಇಂದ ಕಾಲತ್ತಲ್ ವಿನೋದ್ ಪ್ರಭಾಕರ್ ಮತ್ತು ಚಾಲೆಂಜಿಂಗ್ ಸ್ಟಾರ್​ ದರ್ಶನ್ ಬೆಸ್ಟ್​​ ಫ್ರೆಂಡ್ಸ್.. ದರ್ಶನ್ ,ವಿನೋದ್​ರವರನ್ನು ಟೈಗರ್ ಎಂದು ಕರೆದ್ರೆ , ವಿನೋದ್ ದರ್ಶನ್​​ರನ್ನು ಬಾಸ್ ಎಂದು ಕರೆಯುತ್ತಾರೆ.. ಅಷ್ಟರ ಮಟ್ಟಿಗೆ ಇಬ್ಬರು ಸ್ನೇಹಿತರು.. ಮರಿ ಟೈಗರ್ ನಟನೆಯ ಎಲ್ಲಾ ಸಿನಿಮಾಗಳನ್ನು ಬೆಂಬಲಿಸುತ್ತ ಬಂದಿದ್ದಾರೆ..ವಿನೋದ್ ಪ್ರಭಾಕರ್​ ನಟನೆಯ ಹಿಂದಿನ ಎರಡು ಚಿತ್ರಗಳಿಗೆ ದರ್ಶನ್ ಕ್ಲಾಪ್ ಕೂಡ ಮಾಡಿದ್ದಾರೆ.. ಈ ಬಾರಿ ಫೈಟರ್​ ಚಿತ್ರಕ್ಕೂ ದರ್ಶನ್ ತುಂಬು ಹೃದಯದಿಂದ ಕ್ಲಾಪ್ ಮಾಡಿದ್ದಾರೆ..

ವಿನೋದ್ ಪ್ರಭಾಕರ್ ಪಾಲಿಗೆ ದರ್ಶನ್ ಅಚ್ಚು-ಮೆಚ್ಚು..!

ಇನ್ನು ವಿನೋದ್ ಪ್ರಭಾಕರ್ ನಟಿಸಲಿರುವ ಫೈಟರ್ ಚಿತ್ರದ ಬಗ್ಗೆ ಚಿಕ್ಕ ಚೊಕ್ಕದಾಗಿ ಹೇಳಬೇಕಂದ್ರೆ.. ಫೈಟರ್ ಒಂದು ಮಾಸ್ ಆಂಡ್​ ಕ್ಲಾಸ್ ಎಂಟರ್​​ಟೈನ್ಮೆಂಟ್ ಸಿನಿಮಾ.. ಜೀವನದಲ್ಲಿ ಎಲ್ಲಾತರದ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುವ ಸ್ವಭಾವವಿರುವ ನಾಯಕನ ಬಗ್ಗೆ ಹೇಣೆದಿರುವ ಸಿನಿಕಥಾನಕ.., ಕೃಷ್ಣನ್ ಮ್ಯಾರೇಜ್ ಸ್ಟೋರಿ ಖ್ಯಾತಿಯ ನೂತನ್ ಉಮೇಶ್ ಈ ಚಿತ್ರದ ನಿರ್ದೇಶಕ.

ಮುರುಳಿ ಮಾಸ್ಟರ್ ಕಲ್ಪನೆಗೆ ರಾಕಿಂಗ್ ಸ್ಟಾರ್ ಸಾಥ್..!

ಈಗಿನ ಜನರೇಷನೇ​​ ಬೇರಿ.. ಇಲ್ಲಿ ಎಲ್ಲವೂ ಇಂಟರ್​ನೇಟ್ ಮಯ.. ಅಂಗೈಯಲ್ಲೆ ಪೂರ್ತೀ ಪ್ರಪಂಚ ನೋಡ್ತಿದ್ದಾನೆ ಜನಸಾಮಾನ್ಯ.. ಕೆಲವೊಂದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಯಾವುದೋ ಕಾರಣಕ್ಕೆ ವೈರಲ್ ಆಗಿ ಬಿಡುತ್ತೆ. ಅಂತಹ ವೈರಲ್ ಸಮಾಚಾರವನ್ನು ಸಿನಿಮಾವನ್ನಾಗಿ ಮಾಡಲು ಬರುತ್ತಿದ್ದಾರೆ ಖ್ಯಾತ ನೃತ್ಯ ನಿರ್ದೇಶಕ ಮುರುಳಿ ಮಾಸ್ಟರ್..

ಕಂಪ್ಲೀಟ್ ಎಂಟರ್​​ಟೈನರ್ ವೈರಲ್​ಗೆ ಯಶ್ ಕ್ಲಾಪ್

ವೈರಲ್.. ಕೊರಿಯೋಗ್ರಫರ್ ಮುರುಳಿ ಮಾಸ್ಟರ್ ನಿರ್ದೇಶನದ ಹೊಸ ಸಿನಿಮಾ ಹೆಸರು.. ಸಂಪೂರ್ಣ ಹೊಸಬರೇ ಸೇರಿ ಮಾಡುತ್ತಿರುವ ಸಿನಿಮಾ ಇದು.. ಶ್ರೀನಿವಾಸ್, ಮಾನ್ವಿತಾ ರಾಜ್, ಸಚಿನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಕ್ರೈಂ, ಥ್ರಿಲ್ಲರ್, ಸಸ್ಪೆನ್ಸ್ , ಲವ್ , ಸೆಟಿಮೆಂಟ್, ಆ್ಯಕ್ಷನ್ ಈ ಎಲ್ಲಾ ಅಂಶಗಳನ್ನು ಮಿಕ್ಸ್ ಮಾಡಿಕೊಂಡು ವೈರಲ್ ಸಿದ್ದವಾಗಲಿದೆ.. ಮುರುಳಿ ಮಾಸ್ಟರ್​​ರವರ ನೂತನ ಸಿನಿಕಲ್ಪನೆಗೆ ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡದ್ರು..

ಈಗಾಲೇ ಯಶ್ ನಟನೆಯ ಕೆಜಿಎಫ್​ಗಾಗಿ ಇಡೀ ಪ್ರೇಕ್ಷಕರ ಗಣ ಬಕಪಕ್ಷಿಗಳಂತೆ ಕಾದು ಕುಳಿತ್ತಿದ್ದಾರೆ. ಕೆಜಿಎಫ್​ಗಾಗಿ ಯಶ್ ಬಿಟ್ಟ ಗಡ್ಡ ಅರ್ಧ ಮಾರು ಉದ್ದು ಬೆಳೆದಿದ್ದೆ.. ಆದ್ರೂ ಕೆಜಿಎಫ್​ಗೆ ಕುಂಬಾಳ ಕಾಯಿ ಪ್ರಾಪ್ತಿಯಾಗಿಲ್ಲ. ಇಂತಹ ಬ್ಯುಸಿ ಟೈಮ್​​ನಲ್ಲೇ ಯಶ್ ಹೊಸಬರ ಹೊಸ ಸಿನಿಮಾಕ್ಕೆ ಬಂದು ಕ್ಲಾಪ್ ಮಾಡಿ ವಿಶ್ ಮಾಡಿದ್ದು ಸಂತೋಷದ ವಿಷಯವೇ ಸರಿ..

ಯಶ್ ಮತ್ತು ದರ್ಶನರಂತಹ ಬಿಗ್ ಸ್ಟಾರ್ ಮಹೋದಯರು ಹೊಸಬರ ಹೊಸ ಸಿನಿಮಾಗಳಿಗೆ ಬಂದು ಹಾರೈಸುವುದ್ರಿಂದ, ಹೊಸ ಹೊಸ ಪ್ರತಿಭಗಳು ಬೆಳಕಿಗೆ ಬರುತ್ತಾರೆ. ಎಲ್ಲಾ ನಟರ ಫ್ಯಾನ್ಸ್​ಗಳು ಎಲ್ಲಾ ನಟರ ಕನ್ನಡ ಸಿನಿಮಾಗಳನ್ನು ನೋಡ್ತಾರೆ. ದರ್ಶನ್ ಮತ್ತು ಯಶ್​ರವರ ಈ ಪ್ರೋತ್ಸಾಹ ಕಾರ್ಯಕ್ಕೆ ಒಂದು ಸೆಲ್ಯೂಟ್​

Next Story

RELATED STORIES