ಟೆಸ್ಟ್ ಕ್ರಿಕೆಟ್ನಲ್ಲಿ ಬಾಂಗ್ಲಾಗೆ ಮುಖಭಂಗ: 43 ರನ್ಗೆ ಆಲೌಟ್!

X
TV5 Kannada5 July 2018 8:46 AM GMT
ಆ್ಯಂಟಿಗುವಾ: ವೆಸ್ಟ್ ಇಂಡೀಸ್ನ ಮಧ್ಯಮ ವೇಗಿ ಕೇಮರ್ ರೋಚ್ ಅವರ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದಲ್ಲಿ 43 ರನ್ಗಳಿಗೆ ಆಲೌಟಾಗಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಬಾಂಗ್ಲಾದ ಅತೀ ಕಳಪೆ ಮೊತ್ತವಾಗಿದೆ.
ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಬಾಂಗ್ಲಾದೇಶ ಮೊದಲ ಇನಿಂಗ್ಸ್ನಲ್ಲಿ 43 ರನ್ಗಳಿಗೆ ಆಲೌಟಾಗಿದೆ. ದಿನದಾಂತ್ಯಕ್ಕೆ ವೆಸ್ಟ್ ಇಂಡೀಸ್ 2 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿದ್ದು, ಮೊದಲ ದಿನವೇ 158 ರನ್ಗಳ ಬೃಹತ್ ಮುನ್ನಡೆ ಗಳಿಸಿದೆ.
ಬಾಂಗ್ಲಾದೇಶದ ಬ್ಯಾಟಿಂಗ್ ಎಷ್ಟು ಕಳಪೆಯಾಗಿತ್ತು ಅಂದರೆ ಮೊದಲ ಅವಧಿಯ ಆಟವನ್ನೂ ತಂಡ ಪೂರೈಸಲಿಲ್ಲ. ಇದು 44 ವರ್ಷಗಳ ಟೆಸ್ಟ್ ಕ್ರಿಕೆಟ್ನ ಇತಿಹಾಸದಲ್ಲಿ ಎರಡನೇ ಅತೀ ವೇಗದ ಪತನವಾಗಿದೆ.
ವೆಸ್ಟ್ ಇಂಡೀಸ್ ಪರ ಕ್ರೇಗ್ ಬ್ರಾಥ್ ವೇಟ್ 204 ಎಸೆತಗಳಲ್ಲಿ 88 ರನ್ ಬಾರಿಸಿ ತಂಡಕ್ಕೆ ಮಹತ್ವದ ಮುನ್ನಡೆ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರ್
- ಬಾಂಗ್ಲಾದೇಶ ಮೊದಲ ಇನಿಂಗ್ಸ್ 18.4 ಓವರ್ 43 (ಲಿಟಿಯನ್ ದಾಸ್ 25, ರೋಚ್ 8/5, ಕಮಿನ್ಸ್ 11/3, ಹೋಲ್ಡರ್ 10/2).
- ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ 68 ಓವರ್ 2 ವಿಕೆಟ್ಗೆ 201 (ಬ್ರಾಥ್ವೇಟ್ ಅಜೇಯ 88, ಡ್ವೈನ್ ಸ್ಮಿತ್ 58, ಕೀರನ್ ಪೊವೆಲ್ 48, ಮೊಹಮದುಲ್ಲಾ 6/1).
Next Story