Top

ಸಿದ್ದು ಸರಕಾರದ ಎಲ್ಲಾ ಯೋಜನೆ ಮುಂದುವರಿಕೆ: ಕುಮಾರಸ್ವಾಮಿ ಘೋಷಣೆ

ಸಿದ್ದು ಸರಕಾರದ ಎಲ್ಲಾ ಯೋಜನೆ ಮುಂದುವರಿಕೆ: ಕುಮಾರಸ್ವಾಮಿ ಘೋಷಣೆ
X

ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿನ ಎಲ್ಲಾ ಜನಪರ ಯೋಜನೆಗಳನ್ನು ಮುಂದುವರಿಸುವುದಾಗಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸಮ್ಮಿಶ್ರ ಸರಕಾರದ ಮೊದಲ ಬಜೆಟ್ ಮಂಡಿಸಿದ ಕುಮಾರಸ್ವಾಮಿ, ಅಂಗನವಾಡಿ ಶಾಲಾ ಮಕ್ಕಳಿಗೆ 5 ದಿನ ಬಿಸಿಯೂಟ, ಪೌಷ್ಠಿಕಾಂಶ ಕ್ಷೀರಭಾಗ್ಯ 2067 ಕೋಟಿ ಹೆಚ್ಚು ಮಾಡಲಾಗಿದ್ದು, ಅದನ್ನು ಮುಂದುವರಿಸುವುದಾಗಿ ತಿಳಿಸಿದರು.

ಒಣಭೂಮಿ ಕೃಷಿ ಭಾಗ್ಯ ಮುಂದುವರಿಕೆ, ಕೃಷಿ ಹೊಂಡ ಯೋಜನೆ ಮುಂದುವರಿಕೆ, 2 ಲಕ್ಷ ಪಂಪ್ ಸೆಟ್ ಖರೀದಿ, 2098 ಕೋಟಿ ಆರ್ಥಿಕ ನೆರವು, ತೋಟಗಾರಿಕಾ ಯೋಜನೆ- 19 ಲಕ್ಷದಿಂದ 22 ಲಕ್ಷಕಕೆ 191 ಲಕ್ಷ ಟನ್​ಗೆ ಏರಿಕೆ, ಹನಿ ನೀರಾವರಿಯಿಂದ ಮಿತ ಬಳಕೆಗೆ ಉತ್ತೇಜನ, ಸರ್ವರಿಗೂ ಆರೋಗ್ಯ ನೀತಿ-2017ನೀತಿ ಹೆಮ್ಮೆಯ ಕೊಡುಗೆ, ಸರಕಾರಿ ಆಸ್ಪತ್ರೆಗಳ ಸಂಖ್ಯೆ 1429 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಅದನ್ನು ಮುಂದುವರಿಸಲಾಗುವುದು ಎಂದರು.

ನೇರ ನೇಮಕಾತಿ, ಗುತ್ತಿಗೆ ಆಧಾರದ ಮೇಲೆ 2805 ಸಾಮಾನ್ಯ ವೈದ್ಯರ ನೇಮಕ ಮಾಡಲಾಗಿದ್ದು, ಆಶಾ ಕಾರ್ಯಕರ್ತರ ಏರಿಕೆ 39 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ದಿ 88395 ಕೋಟಿ ರೂ. ಅನುದಾನ, ಮಕ್ಕಳ ಶೈಕ್ಷಣಿಕ ಅಭಿವೃದ್ದಿ ಅಭಿವೃದ್ಧಿಯಡಿ ಹೋಬಳಿಗೊಂದು ಶಾಲೆಯ ಅಭಿವೃದ್ಧಿ ಮಾಡಲಾಗಿದೆ ಎಂದರು.

Next Story

RELATED STORIES