Top

ಹಸೆಮಣೆ ಏರಲು ರೆಡಿಯಾದ ಡಾ.ರಾಜ್‌ ಮೊಮ್ಮಗ

ಹಸೆಮಣೆ ಏರಲು ರೆಡಿಯಾದ ಡಾ.ರಾಜ್‌ ಮೊಮ್ಮಗ
X

ಬೆಂಗಳೂರು: ಚಿತ್ರರಂಗದ ದೊಡ್ಮನೆ ಮತ್ತೊಂದು ಶುಭಕಾರ್ಯಕ್ಕೆ ಸಜ್ಜಾಗುತ್ತಿದೆ. ಸದ್ಯದಲ್ಲೇ ಡಾ.ರಾಜ್‌ ಕುಟುಂಬದಲ್ಲೊಬ್ಬರು ಹಸೆಮಣೆ ಏರಲು ರೆಡಿಯಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಗುರು ರಾಜ್‌ಕುಮಾರ್‌ ಆಗಿದ್ದ ರಾಘವೇಂದ್ರ ರಾಜ್‌ಕುಮಾರ್ ಮಗ, ತಮ್ಮ ಜನ್ಮನಾಮ ಬದಲಿಸಿಕೊಂಡು ಯುವರಾಜ್‌ಕುಮಾರ್‌ ಆಗಿದ್ದಾರೆ. ಈಗ ಈ ಯುವರಾಜ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇನ್ನು ಯುವರಾಜನ ಕೈಹಿಡಿಯಲಿರುವ ಹುಡುಗಿ ಯಾರೂ ಎಂಬ ಪ್ರಶ್ನೆಗೆ ಉತ್ತರ, ಶ್ರೀದೇವಿ.

ಮೈಸೂರಿನವರಾದ ಶ್ರೀದೇವಿ ಡಾ.ರಾಜ್ ಕುಟುಂಬಕ್ಕೆ ಹತ್ತಿರದವರಾಗಿದ್ದು, ಕಳೆದ ಕೆಲ ವರ್ಷದಿಂದ ಯುವರಾಜ್ ಮತ್ತು ಶ್ರೀದೇವಿ ಸ್ನೇಹಿತರಾಗಿದ್ದರು, ಈ ಸ್ನೇಹ ಮುಂದುವರೆದು ಪ್ರೀತಿಯಾಗಿ, ಇದೀಗ ಇಬ್ಬರು ವಿವಾಹವಾಗಲು ನಿರ್ಧರಿಸಿದ್ದಾರೆ.

ಇನ್ನು ಯುವರಾಜ್‌, ಡಾ.ರಾಜ್‌ಕುಮಾರ್‌ ಸಿವಿಲ್ ಸರ್ವೀಸಸ್ ಆಕಾಡೆಮಿ ನಡೆಸುತ್ತಿದ್ದು, ಅಣ್ಣ ವಿನಯ್ ರಾಜ್‌ಕುಮಾರ್‌ಗೂ ಮೊದಲೇ ಯುವರಾಜ್‌ಕುಮಾರ್‌ಗೆ ಕಂಕಣ ಕೂಡಿ ಬಂದಿರುವುದು ವಿಶೇಷ.ನಾಳೆ ಮೈಸೂರಿನ ರಿಗಾಲಿಸ್ ಖಾಸಗಿ ಹೋಟೆಲ್​ನಲ್ಲಿ ಯುವ-ಶ್ರೀದೇವಿ ನಿಶ್ಚಿತಾರ್ಥ ನಡೆಯಲಿದ್ದು, ದೊಡ್ಮನೆ ಕುಟುಂಬ ಇಂದೇ ಮೈಸೂರಿನಲ್ಲಿ ಬೀಡುಬಿಡಲಿದೆ.

Next Story

RELATED STORIES