Top

ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿ

ಸಾವಿರ ರನ್ ಪೂರೈಸಿದ ವಿರಾಟ್ ಕೊಹ್ಲಿ
X

ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಭಾರತ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಮೊದಲು ಫೀಲ್ಡಿಂಗ್​​ ಆಯ್ಕೆ ಮಾಡಿಕೊಂಡ ಟೀಮ್​​ ಇಂಡಿಯಾ, ವಿಕೆಟ್​​ ಕೀಪರ್​​ ಜೋಸ್​​ ಬಟ್ಲರ್​​​ ಅಬ್ಬರದ ಬ್ಯಾಟಿಂಗ್​​​ ನಿಂದ ನಿಗದಿತ 20 ಓವರ್ ಗಳಲ್ಲಿ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.

ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 18. 2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 163 ರನ್ ಗಳಿಸುವ ಮೂಲಕ ಗೆಲುವಿನ ಕೇಕೆ ಹಾಕಿತು.

ಆರಂಭಿಕ ಆಟಗಾರ ಶಿಖರ್ ಧವನ್ ಕೇವಲ 4 ರನ್ ಔಟಾಗುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ನಂತರ ಜೊತೆಗೂಡಿದ ಕೆ. ಎಲ್ . ರಾಹುಲ್ 101 ಮತ್ತು ರೋಹಿತ್ ಶರ್ಮಾ 30 ಎಸೆತಗಳಲ್ಲಿ 32 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನ 100ರ ಗಡಿ ದಾಟಿಸಿದ್ರು.

ರೋಹಿತ್ ಶರ್ಮಾ ನಿರ್ಗಮಿಸಿದ ಬಳಿಕ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ಕನ್ನಡಿಗ ಕೆ.ಎಲ್. ರಾಹುಲ್ ಆಕರ್ಷಕ ಶತಕ ಬಾರಿಸಿದರು. ವಿರಾಟ್ ಕೊಹ್ಲಿ 20 ರನ್ ಗಳಿಸುವ ಮೂಲಕ ಟಿ-20 ಕ್ರಿಕೆಟ್​​ನಲ್ಲಿ ಸಾವಿರ ರನ್ ಪೂರೈಸಿದ ಖ್ಯಾತಿಗೂ ಪಾತ್ರರಾದರು.

Next Story

RELATED STORIES