Top

ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ರಬ್ಬರ್ ಅಕ್ಕಿ ಮಾರಾಟ..!

ಶಾಕಿಂಗ್ ನ್ಯೂಸ್: ರಾಜ್ಯದಲ್ಲಿ ರಬ್ಬರ್ ಅಕ್ಕಿ ಮಾರಾಟ..!
X

ಮಂಡ್ಯ: ಇಷ್ಟು ದಿನ ಎಲ್ಲೆಡೆ ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಸಕ್ಕರೆ ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಚೀನಾದಿಂದ ಈ ಪ್ಲಾಸ್ಟಿಕ್ ಅಕ್ಕಿ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಸುದ್ದಿಯಾಗಿತ್ತು. ಇದೀಗ ರಬ್ಬರ್ ಅಕ್ಕಿ ಕೂಡ ಮಾರಾಟ ಮಾಡಲಾಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ರಬ್ಬರ್ ಅಕ್ಕಿ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ರಬ್ಬರ್ ರೀತಿಯಲ್ಲಿ ಅಕ್ಕಿ ಧಗಧಗನೇ ಹೊತ್ತಿ ಉರಿದಿದೆ. ಇನ್ನು ಈ ಅಕ್ಕಿ ಕಿರಾಣಿ ಅಂಗಡಿಯಿಂದ ತಂದ ಅಕ್ಕಿಯಲ್ಲ, ಬದಲಾಗಿ ಸರ್ಕಾರ ನೀಡಿದ ಅನ್ನಭಾಗ್ಯದ ಅಕ್ಕಿ. ಇಲ್ಲಿನ ಗ್ರಾಮಸ್ಥರು ಪಡಿತರ ಅಂಗಡಿಯಿಂದ ಅಕ್ಕಿ ತಂದಿದ್ದು, ನೆನೆಸಿಟ್ಟ ಅಕ್ಕಿ ರುಬ್ಬಿದಾಗ, ಅಕ್ಕಿ ರಬ್ಬರ್ ತುಂಡುಗಳಾಗಿ ಮಾರ್ಪಟ್ಟಿದೆ.

ಇನ್ನು ಚೊಟ್ಟನಹಳ್ಳಿ ಗ್ರಾಮಸ್ಥರು ಅನ್ನಭಾಗ್ಯ ಅಕ್ಕಿಯನ್ನೇ ಪ್ರತಿನಿತ್ಯ ಆಹಾರದಲ್ಲಿ ಬಳಸುತ್ತಿದ್ದು, ಸರ್ಕಾರ ನೀಡಿದ ಅನ್ನಭಾಗ್ಯ ಅಕ್ಕಿಯೇ ಹೀಗೆ ಆದರೆ, ಬಡವರು ಬದುಕುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES