Top

ಒಂದೇ ಊರು.. ಎಲ್ಲವೂ ಎರಡೆರಡು.!!

ಒಂದೇ ಊರು.. ಎಲ್ಲವೂ ಎರಡೆರಡು.!!
X

ಚಿತ್ರದುರ್ಗ : ಆ ಊರು ಒಂದೇ, ಆದರೆ ರಾಜಕೀಯವಾಗಿ ಎರಡು ಗ್ರಾಮಗಳು, ಆ ಗ್ರಾಮ ಮೂರುಬತಾಲ್ಕೂಕು ಕೇಂದ್ರಗಳಿಗೆ ಸೇರುತ್ತೇ, ಒಂದೇ ಗ್ರಾಮಕ್ಕೆ ಇಬ್ಬಿಬ್ಬರು ಶಾಸಕರು. 500ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿರೋ ಒಂದೇ ಊರಿಗೆ ಎರಡೆರೆಡು ಅಂಗನವಾಡಿ, ಶಾಲೆಗಳು, ಶಾಸಕರು ಇಬ್ಬರು ಅಂದರೆ ಇನ್ನೂ ಗ್ರಾಮ ಪಂಚಾಯಿತಿ ಸದಸ್ಯರು ಕೇಳಬೇಕೆ, ಇನ್ನೂ ತಹಶೀಲ್ದಾರ್ ಕಛೇರಿಗಳಲ್ಲಿ ಕೆಲಸ ಮಾಡಿಕೋಳ್ಳಲು ಈ ಗ್ರಾಮದ ಜನರಿಗೆ ದೊಡ್ಡ ತಲೆ ನೋವು ಅರೇ ಕೇಳತ್ತಾ ಇದ್ದರೇನೆ ತಲೆಕೆಡುತ್ತಿದ್ಯಾ.? ಮುಂದೆ ಓದಿ..

ಒಂದೇ ಗ್ರಾಮ ಆ ಊರಿಗೆ ಎರಡು ಹೆಸರು ಟಿ ಉಪ್ಪಾರಹಟ್ಟಿ ಮತ್ತು ಎನ್ ಉಪ್ಪಾರಹಟ್ಟಿ. ಈ ಗ್ರಾಮಗಳು ಇರುವುದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಮತ್ತು ತೂರುವನೂರು ಹೋಬಳಿಗಳಿಗೆ ಸೇರಿದೆ. ಈ ಗ್ರಾಮದಲ್ಲಿ 500ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿದ್ದು ಅನೂನ್ಯವಾಗಿದ್ದರೂ ಮಧ್ಯೆ ಹಾದು ಹೋಗಿರುವ ರಸ್ತೆ ಇವರನ್ನು ಬೇರೆ ಮಾಡಿದೆ.

ಒಂದು ಊರು ರಸ್ತೆ ಇಚ್ಚೇಗೆ, ಇನ್ನೂಂದು ಊರು ರಸ್ತೆಯ ಆಚೆಗೆ. ಈ ಗ್ರಾಮದಲ್ಲಿ ಎಲ್ಲಾವೂ ಎರಡೆರಡು. ಅಂಗನಾವಾಡಿ, ಶಾಲೆಗಳು. ಗ್ರಾಮ ಪಂಚಾಯಿತಿ ಸದಸ್ಯರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ, ಅಷ್ಟೇ ಯಾಕೆ ಶಾಸಕರು ಕೂಡ ಇಬ್ಬರು. ಮತ ನೀಡುವುದು ಮೊಳಕಾಲ್ಮೂರು, ಚಳ್ಳಕೆರೆ ಕ್ಷೇತ್ರಕ್ಕೆ. ಆದರೆ, ಕಛೇರಿಗಳಿಗೆ ಮಾತ್ರ ಟಿ ಉಪ್ಪಾರಹಟ್ಟಿ ಚಳ್ಳಕೆರೆಗೆ ಸೇರಿದರೆ, ಎನ್ ಉಪ್ಪಾರಹಟ್ಟಿ ಮೊಳಕಾಲ್ಮೂರಿಗೆ ಸೇರುತ್ತದೆ.

ಜಾತಿ ಆದಾಯ ಪ್ರಮಾಣ ಪತ್ರ, ಜಮೀನುಗಳ ಖಾತೆಗಳನ್ನು ಸರಿಪಡಿಸಿಕೊಳ್ಳಲು, ಹೀಗೆ ಅನೇಕ ಕೆಲಸಗಳಿಗೆ ಎರಡು ತಾಲ್ಲೂಕು ಕೇಂದ್ರಗಳಿಗೆ ಅಲೆಯಬೇಕು. ಒಂದು ರೀತಿಯಲ್ಲಿ ಒಂದೇ ಮನೆಯಲ್ಲಿ ಹುಟ್ಟಿದ ದಾಯಾದಿಗಳ ರೀತಿಯಲ್ಲಿ ಈ ಗ್ರಾಮ ಇದೆ. ಹೀಗಾಗಿ ಈ ಗ್ರಾಮ ಒಂದು ರೀತಿಯಲ್ಲಿ ಅಭಿವೃದ್ದಿ ಕಾಣದೆ ದೂರನೇ ಉಳಿದಿದೆ. ಈ ಗ್ರಾಮವನ್ನು ಒಂದೇ ತಾಲ್ಲೂಕು ಕಚೇರಿ ಆಡಳಿತಕ್ಕೆ ಸೇರಿಸಿ ಎಂದು ಸಾಕಷ್ಟು ಮನವಿಗಳನ್ನು ಮಾಡಿದರೂ ಯಾರೊಬ್ಬ ಅಧಿಕಾರಿ ಜನಪ್ರತಿನಿಧಿಗಳು ಕ್ಯಾರೆ ಅನ್ನುತ್ತಿಲ್ಲ.

ಈಗಾಗಲೇ ಈ ಗ್ರಾಮದಲ್ಲಿ ಎರಡು ಪ್ರಾಥಮಿಕ ಶಾಲೆಗಳಿದೆ. ಆದರೇ ಪ್ರೌಢಶಾಲೆಯಿಲ್ಲ. ಒಂದು ಶಾಲೆಯನ್ನು ಪ್ರಾಥಮಿಕ ಶಾಲೆ ಮಾಡಿ, ಮತ್ತೊಂದನ್ನು ಪ್ರೌಢ ಶಾಲೆ ಮಾಡಿ ಅಂತ ಗ್ರಾಮಸ್ಥರೂ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದೂ, ಪ್ರಯೋಜನವಾಗಿಲ್ಲ. ಪ್ರೌಢಶಾಲೆಗಾಗಿ ದೂರದ ಮತ್ತೊಂದು ಊರಿಗೆ ಹೋಗೋದು ತಪ್ಪಿಲ್ಲ. ಟಿ ಉಪ್ಪಾರಹಟ್ಟಿಯವರು ಚಳ್ಳಕೆರೆ ಕ್ಷೇತ್ರಕ್ಕೆ ಮತ ನೀಡಿ ಚಿತ್ರದುರ್ಗ ತಾಲ್ಲೂಕು ಕಛೆರಿಗೆ ಹೋಗಬೇಕು ಎನ್ ಉಪ್ಪಾರಹಟ್ಟಿಯವರು ಮೊಳಕಾಲ್ಮೂರು ಕ್ಷೇತ್ರಕ್ಕೆ ಮತ ನೀಡಿ ಚಳ್ಳಕೆರೆ ಕಛೇರಿಗೆ ಅಲೆದಾಡಬೇಕು ಇದು ಯಾವ್ಯಾ ನ್ಯಾಯ ಸ್ವಾಮಿ ಎನ್ನುತ್ತಾರೆ ಗ್ರಾಮಸ್ಥರು.

ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಶಾಸಕರ ವರೆಗೆ ಇಬ್ಬಿಬ್ಬರು ಜನಪ್ರತಿನಿಧಿಗಳಿದ್ದರೂ ಈ ಗ್ರಾಮ ಮಾತ್ರ ಮೂಲಭೂತ ಸೌಕರ್ಯಗಳಿಂದ ದೂರನೇ ಉಳಿದಿದೆ. ಇತ್ತಿಚ್ಚೆಗಷ್ಟೆ ಜನರ ಸಮಸ್ಯೆಗಳನ್ನು ತಿಳಿಯಲು ಬಂದ ಶಾಸಕ ಶ್ರೀರಾಮುಲು ಸಹ ಬಂದರೂ ರಸ್ತೆಯ ಇಚ್ಚೇಗಿನ ಜನರ ಸಮಸ್ಯೆ ಏನು ಅನ್ನೂದನ್ನ ಸಹ ಕೇಳದೆ ಹೊರಟು ಹೋಗಿದ್ದು ವಿಪರ್ಯಾಸವೇ ಸರಿ. ಇನ್ನಾದರೂ ಅಧಿಕಾರಿ ವರ್ಗದವರು ಮತ್ತು ಜನಪ್ರತಿನಿಧಿಗಳು ಈ ಗ್ರಾಮದ ಅಭಿವೃದ್ದಿ ಶ್ರಮಿಸಲಿ. ಈ ಮೂಲಕ ಮುಂದಿನ ಪೀಳಿಗೆಗಾಗಿಯಾದರೂ ಒಂದೇ ಕ್ಷೇತ್ರದ ಕಛೇರಿಗೆ ಒಳಪಡಿಸುವಂತೆ ಮಾಡಬೇಕಿದೆ.

ವರದಿ : ವೀರೇಶ್ ವಿ ಚಳ್ಳಕೆರೆ, ಟಿವಿ5 ಚಿತ್ರದುರ್ಗ

Next Story

RELATED STORIES