Top

ಪ್ರಾಣಿ ಬಲಿ ಕೊಟ್ಟು ರಕ್ತ ಕುಡಿಯುವ ನರಮಾನವ

ಪ್ರಾಣಿ ಬಲಿ ಕೊಟ್ಟು ರಕ್ತ ಕುಡಿಯುವ ನರಮಾನವ
X

ಚಾಮರಾಜನಗರ : ಗ್ರಾಮೀಣ ಹಬ್ಬಗಳಲ್ಲಿ ಕುರಿ ಕೋಳಿ, ಕೋಣಗಳನ್ನು ಬಲಿಕೊಡುವುದನ್ನು ಕಂಡಿದ್ದೀವಿ ಆದ್ರೆ ಹಂದಿಗಳನ್ನು ಬಲಿ ಕೊಟ್ಟು ಹಂದಿ ರಕ್ತ ಕಡುಯುವ ಘಟನೆಯನ್ನು ಎಲ್ಲಾದ್ರೂ ಕೇಳಿದ್ದೀರಾ..? ಇಂಥಾ ಪೈಶಾಚಿಕ ಕೃತ್ಯ ಗಡಿ ಜಿಲ್ಲೆ ಚಾಮರಾಜನಗರದ ಸಮೀಪವೇ ಇರುವ ಚಿಕ್ಕೊಳೆ ಎಂಬ ಗ್ರಾಮದಲ್ಲಿ ಇಂಥಾ ಘಟನೆ ನಡೆದಿದೆ.

ಗ್ರಾಮ ದೇವತೆ ಹಬ್ಬಕ್ಕಾಗಿ ಹಂದಿ, ಕುರಿ, ಮೇಕೆಗಳನ್ನು ಕತ್ತರಿಸಿ ಬಿಸಿ ರಕ್ತವನ್ನೇ ಹೀರುವ ವಿಕೃತ ಭೀಭತ್ಸ ಘಟನೆ ನಡೆದಿದೆ. ಚಿಕ್ಕೊಳೆ ಗ್ರಾಮದಲ್ಲಿ ಬಂದು ನೆಲೆಸಿರುವ ತಮಿಳುನಾಡಿನ ಮೂಲದ ಪೌರಕಾರ್ಮಿಕರ ಸಮೂದಾಯ ಈ ಮೌಢ್ಯತೆಯ ಅಂಧಾಕಾರದಲ್ಲಿ ಬಿದ್ದಿದ್ದಾರೆ.

ತಮಿಳುನಾಡಿನ ಚಿರುಚ್ಚಿ ಜಿಲ್ಲೆಯಲ್ಲಿ ಅನಾಧಿಕಾಲದಿಂದ ನಡೆದುಕೊಂಡು ಬಂದಿರುವ ಈ ಸಂಪ್ರಾಧಾಯವನ್ನು ಇಲ್ಲಿಯೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ತಾತಾ ಮುತ್ತಾತನ ಕಾಲದಲ್ಲಿ ಇಲ್ಲಿಗೆ ಬಂದು ನೆಲೆಸಿರುವ ತಮಿಳುನಾಡಿನ ಪೌರಕಾರ್ಮಿಕರ ಸಮುದಾಯ ಇಲ್ಲಿ ಪ್ರತಿ 5 ವರ್ಷಗಳಿಗೊಮ್ಮೆ ಇಂತಹ ಹಬ್ಬವನ್ನು ಆಚರಿಸುತ್ತಾರೆ.

ಈ ಬಗ್ಗೆ ಆಚರಣೆ ನಿರತರನ್ನು ಕೇಳಿದ್ರೇ, ನಾಡಿನಲ್ಲಿ ಉತ್ತಮ ಮಳೆ ಬೆಳೆ ಆಗಲಿ ಎಂಬ ಕಾರಣಕ್ಕಾಗಿ ಈ ಹಬ್ಬವನ್ನು ಆಚರಿಸುತ್ತೇವೆ. ಇದು ತಲತಲಾಂತದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇದನ್ನು ಬಿಡುವುದ್ದಕ್ಕೂ ಆಗಲ್ಲ ಆಗಾಗಿ ನಾವು ಈ ಕಾರ್ಯ ನಡೆಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ.

ಒಟ್ಟಾರೆ ಈ ಹೇಯ ಕೃತ್ಯಕ್ಕೆ ಸ್ಥಳಿಯವಾಗಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ಜಿಲ್ಲಾಡಳಿ ಮತ್ತು ಪೋಲಿಸ್ ಇಲಾಖೆ ಎಲ್ಲೋಗಿದೆ ಎಂದು ಪ್ರಗತಿಪರ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Next Story

RELATED STORIES