Top

ಓಲೈಕೆ ರಾಜಕಾರಣ ಮಾಡೋಕೆ ಶುರು ಮಾಡಿದ್ರಾ ಸಿದ್ದರಾಮಯ್ಯ.?

ಓಲೈಕೆ ರಾಜಕಾರಣ ಮಾಡೋಕೆ ಶುರು ಮಾಡಿದ್ರಾ ಸಿದ್ದರಾಮಯ್ಯ.?
X

ಬಾಗಲಕೋಟೆ : ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಪತ್ರ ಬರೆಯೋದು ಕಾಮನ್. ಹಾಗೆ ಮಾಜಿ ಸಿದ್ದರಾಮಯ್ಯ ಸ್ವಕ್ಷೇತ್ರದ ಅಭಿವೃದ್ಧಿಗಾಗಿ 12 ದಿನದೊಳಗೆ ಬರೋಬ್ಬರಿ 3 ಪತ್ರ ಬರೆದಿದ್ದಾರೆ. ಆದ್ರೆ ಸಿದ್ದರಾಮಯ್ಯನವರ ಪತ್ರಗಳ ವಿಚಾರ ಕ್ಷೇತ್ರದಲ್ಲಿ ಒಂದು ಕಡೆ ಖುಷಿ ಕೊಟ್ಟಿದ್ರೆ, ಮತ್ತೋಂದು ಕಡೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ. ಅರೆ ಅದ್ಯಾಕಪ್ಪ ಅಂತೀರಾ? ಹಾಗಾದ್ರೆ ಇಲ್ಲಿದೆ ನೋಡಿ ಮಾಜಿ ಸಿಎಂ ಅವ್ರ ಪತ್ರ ಸಮರದ ಕಂಪ್ಲೀಟ್ ದಿಡೈಲ್ಸ್ ಮುಂದೆ ಓದಿ..

ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವ್ರಗೆ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಪತ್ರದ ಮೇಲೆ ಪತ್ರ... ಸಿದ್ದರಾಮಯ್ಯ ಓಲೈಕೆ ರಾಜಕಾಣಕ್ಕೆ ಮಾಡ್ತಿದ್ದಾರೆ ಎಂದು ಆರೋಪ. ಕೇತ್ರದ ಒಂದೇ ಭಾಗದ ಹೆಚ್ಚು ಒತ್ತು ಕೊಟ್ಟಿದ್ದೇಕೆ ಮಾಜಿ ಮುಖ್ಯಮಂತ್ರಿಗಳು.

ಹೌದು, ಮಾಜಿ ಸಿಎಂ ಹಾಗೂ ಬಾದಾಮಿ ಕ್ಷೇತ್ರದ ಹಾಲಿ ಶಾಸಕ ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿ ಸಂಬಂಧ ಸತತವಾಗಿ ಸಿಎಂಗೆ ಪತ್ರ ಬರೆದಿರೋದೇನೋ ಖುಷಿ ವಿಚಾರ. ಆದ್ರೆ ಇದೇ ವಿಚಾರ ಕೇತ್ರದ ಕೆಲವು ಭಾಗಗಳ ಜನರ ಅಸಮಾದಾನಕ್ಕೂ ಕಾರಣವಾಗಿದೆ. ಯಾಕಂದ್ರೆ, ಕಳೆದ ಜೂನ್ 20 ರಂದು ಗುಳೇದಗುಡ್ಡ ಭಾಗದ ಕೆರೆಗೆ ನೀರು ತುಂಬಿಸುವದು ಹಾಗೂ ಜೂನ್ 25 ರಂದು ಜವಳಿಪಾರ್ಕ್ ಸ್ಥಾಪನೆ ಕುರಿತು ಬಾದಾಮಿ ಶಾಸಕ ಸಿದ್ದರಾಮಯ್ಯ ಧರ್ಮಸ್ಥಳದ ಶಾಂತಿವನದಿಂದಲೇ ಸಿಎಂ ಎಚ್ ಡಿ ಕುಮಾರ ಸ್ವಾಮಿಗೆ ಪತ್ರ ಬರೆದಿದ್ರು.

ಈ ವೇಳೆ ಸಿದ್ದರಾಮಯ್ಯ ಎಚ್ ಡಿ ಕುಮಾರಸ್ವಾಮಿ ಮೇಲೆ ಪತ್ರದ ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇದರ ಬೆನ್ನಲೇ ಜುಲೈ 2 ರಂದು ಗುಳೇದಗುಡ್ಡ ಪಟ್ಟಣಕ್ಕೆ 24*7 ನೀರು ಸರಬರಾಜು ಸಂಬಂಧ 2017-18 ನೇ ಸಾಲಿನಲ್ಲಿ 29 ಕೋಟಿ 98 ಲಕ್ಷ. ದಷ್ಟು ಕ್ರಿಯಾಯೋಜನೆ ತಯಾರಿಸಲಾಗಿದ್ದು, ಇದರಲ್ಲಿ 14.ಲಕ್ಷ 97 ಸಾವಿರ ಕೂಡಲೇ ಬಿಡುಗಡೆ ಮಾಡಬೇಕೆಂದು ಎಂದು ಮೂರನೇ ಪತ್ರ ಬರೆದಿದ್ದಾರೆ. ಹೀಗಾಗಿ ಕೇವಲ ಗುಳೆದಗುಡ್ಡ ಭಾಗಕ್ಕೆ ಮಾತ್ರ ಒತ್ತುಕೊಟ್ಟು, ಸಿದ್ದರಾಮಯ್ಯ ಒಲೈಕೆ ರಾಜಕಾರಣಕ್ಕೆ ಮುಂದಾಗಿದ್ದಾರೆ ಎನ್ನೋ ಆರೋಪ ಕೇಳಿಬರುತ್ತಿದೆ. ಅಲ್ಲದೇ ಕೇವಲ ಗುಳೇದಗುಡ್ಡ ಹೋಬಳಿ ಅಭಿವೃದ್ಧಿಗಾಗಿ ಮಾತ್ರ ದೃಷ್ಟಿ ನೆಟ್ಟಿರೋದಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ವಿಷಯದಲ್ಲಿ ಸಿದ್ದರಾಮಯ್ಯ ತಾರತಮ್ಯ ಮಾಡ್ತಿದ್ದಾರೆ ಅಸಮಾಧಾನ ವ್ಯಕ್ತವಾಗುತ್ತಿದೆ.

ಇನ್ನು ಕಳೆದ ವಿಧಾನ ಸಭೆ ಚುನಾವಣೆ ಯಲ್ಲಿ ಗುಳೇದಗುಡ್ಡ ಪಟ್ಟಣದಲ್ಲಿ ಸಿದ್ದರಾಮಯ್ಯ ಕಡಿಮೆ ಮತಗಳು ಪಡೆಯೋ ಮೂಲಕ ಮೂರನೆ ಸ್ಥಾನಕ್ಕೆ ತೃಪ್ತಿ ಪಟ್ಟಿಕೊಂಡಿದ್ರು. ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ 7073 ,ಬಿಜೆಪಿ ಅಭ್ಯರ್ಥಿ ರಾಮುಲು 6292 ಹಾಗೂ ಸಿದ್ದರಾಮಯ್ಯ 5281 ಮತಗಳು ಪಡೆದಿದ್ರು.ಹಾಗಾಗಿ ಈ ಭಾಗದ ಜನರ ಓಲೈಕೆಗಾಗಿ ಪತ್ರ ಬರೆದಿದ್ದಾರೆ ಎನ್ನಲಾಗ್ತಿದೆ.

ಇನ್ನು ಸಿದ್ದರಾಮಯ್ಯ ಐತಿಹಾಸಿಕ ಬಾದಾಮಿ ಅಭಿವೃದ್ಧಿ ಕುರಿತು ಇಲ್ಲಿಯವರೆಗೂ ಯಾವುದೇ ಪತ್ರ ಬರೆದಿಲ್ಲ. ಜೊತೆಗೆ ಕೆರೂರ, ಹಾಗೂ ಕುಳಗೇರಿ ಹೋಬಳಿ ಭಾಗದ ಜನರ ಬೇಡಿಕೆಗಳಿಗೆ ಮನ್ನಣೆ ನೀಡಿಲ್ಲ. ಹೀಗಾಗಿ ಸಿದ್ದರಾಮಯ್ಯ ಕ್ಷೇತ್ರದ ಬಗ್ಗೆ ತಾರತಮ್ಯ ನೀತಿ ತಾಳಿದ್ರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿವೆ. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಗೋಂಡ ಬಳಿಕ, ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಕೆರೂರು, ಬಾದಾಮಿ, ಗುಳೇದಗುಡ್ಡ, ಭಾಗದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಹಾಗೂ ಪಟ್ಟದಕಲ್ಲು, ಮಹಾಕೂಟ, ಬನಶಂಕರಿ ಐತಿಹಾಸಿಕ ಸ್ಥಳದಲ್ಲಿ ಮೂಲಸೌಕರ್ಯ ಕಲ್ಪಿಸೋವಂತೆ ಕೆ.ಜೆ.ಜಾರ್ಜ್ ಸೇರಿದಂತೆ ಇಬ್ಬರು ಸಚಿವರಿಗೂ ಪತ್ರ ಬರೆದಿದ್ದಾರೆ. ಇನ್ನು ಸಿದ್ದರಾಮಯ್ಯ ನಡೆಯನ್ನು ಕಾಂಗ್ರೆಸ್ ಮುಖಂಡರು ಈ ರೀತಿ ಸಮರ್ಥಿಸಿಕೊಂಡಿದ್ದಾರೆ.

ಒಟ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಸಮರದ ಹಿಂದೆ ಅನುಮಾನ ವ್ಯಕ್ತವಾಗ್ತಿದೆ.ಸ್ವತಃ ಸಿದ್ದರಾಮಯ್ಯರೇ ಪತ್ರ ಬರೆಯುತ್ತಿದ್ದಾರಾ ಅಥವಾ ಯಾರಾದ್ರೂ ಬರೆಸುತ್ತಿದ್ದಾರಾ ಎನ್ನುವ ಮಾತುಗಳು ಕೇಳಿಬರ್ತಿದ್ದು, ಪತ್ರ ಸಮರ ಮುಂದೆ ಯಾವ ಸ್ವರೂಪ ಪಡೆಯುತ್ತೆ ಕಾದುನೋಡಬೇಕು.

ವರದಿ : ಮಂಜುನಾಥ ತಳವಾರ, ಟಿವಿ5 ಬಾಗಲಕೋಟೆ

Next Story

RELATED STORIES