Top

ಆಂಗ್ಲರ ಅಬ್ಬರಕ್ಕೆ ಕೊಲಂಬಿಯಾ ಕಂಗಾಲು

ಆಂಗ್ಲರ ಅಬ್ಬರಕ್ಕೆ ಕೊಲಂಬಿಯಾ ಕಂಗಾಲು
X

ಪ್ರತಿಷ್ಠಿತ 2018ರಲ್ಲಿ ಫಿಫಾ ವಿಶ್ವಕಪ್​​ನ ಕೊನೆಯ ಪ್ರೀಕ್ವಾಟರ್​​ ಫೈನಲ್​​ ಪಂದ್ಯದಲ್ಲಿ ಕೊಲಂಬಿಯಾ ವಿರುದ್ದ ಇಂಗ್ಲೆಂಡ್​​ 4-3 ಅಂತರದ ಪೇನಾಲ್ಟಿ ಗೋಲುಗಳಲ್ಲಿ ಜಯ ಸಾಧಿಸಿದೆ.

ಪಂದ್ಯದ ದ್ವಿತೀಯಾರ್ಧದಲ್ಲಿ ಎರಡು ತಂಡಗಳು 1-1ರ ಸಮಬಲ ಸಾಧಿಸಿದ್ದವು. ಆದರೆ ಪೆನಾಲ್ಟಿ ಶೂಟೌಟ್ ನಲ್ಲಿ ಇಂಗ್ಲೆಂಡ್ ಗೆದ್ದು ಕ್ವಾರ್ಟರ್ ಫೈನಲ್ ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.

ಪಂದ್ಯದ ದ್ವಿತೀಯಾರ್ಧದ 57ನೇ ನಿಮಿಷದಲ್ಲಿ ಇಂಗ್ಲೆಂಡ್ ನಾಯಕ ಹರಿಕೇನ್ ಗೋಲು ಸಿಡಿಸಿ ತಂಡಕ್ಕೆ ಮುನ್ನಡೆ ಕೊಟ್ಟಿದ್ದರು. ಅದಾಗಿ 90+3ನೇ ನಿಮಿಷದಲ್ಲಿ ಕೊಲಂಬಿಯಾದ ಯೆರಿಮಿನಾ ಗೋಲು ಸಿಡಿಸಿ ಅಂಕವನ್ನು 1-1ಕ್ಕೆ ಸರಿದೂಗಿಸಿದ್ದರು. ಹೆಚ್ಚುವರಿ ಕಾಲಾವಧಿ ನೀಡಲಾಯಿತಾದರೂ ಎರಡು ತಂಡಗಳು ಗೋಲು ದಾಖಲಾಗಲಿಲ್ಲ.

ಪಂದ್ಯದ ಸ್ಕೋರ್ ಕಾರ್ಡ್ ಪಂದ್ಯ 1-1ರಲ್ಲೇ ಗಿರಕಿ ಹೊಡೆದಾಗ ಅಂತಿಮವಾಗಿ ಪೆನಾಲ್ಟಿ ಶೂಟೌಟ್ ಗೆ ಅವಕಾಶ ನೀಡಲಾಯ್ತು. ಈ ಸಂದರ್ಭ ಇಂಗ್ಲೆಂಡ್ 4, ಕೊಲಂಬಿಯಾ 3 ಗೋಲ್ ಬಾರಿಸಿ ಜಯ ಗಳಿಸಿದ್ರು.

Next Story

RELATED STORIES