Top

‘ಸೀತಾರಾಮ ಕಲ್ಯಾಣ’ ಸೆಟ್​ನಲ್ಲಿ ಸಿಎಂ ಜೊತೆ ತೆಲಂಗಾಣ ಸಚಿವ!

‘ಸೀತಾರಾಮ ಕಲ್ಯಾಣ’ ಸೆಟ್​ನಲ್ಲಿ ಸಿಎಂ ಜೊತೆ ತೆಲಂಗಾಣ ಸಚಿವ!
X

ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ವೃತ್ತಿ ರಾಜಕಾರಣ ಆದರೂ ಪ್ರವೃತ್ತಿ ಸಿನಿಮಾ. ನಿರ್ಮಾಪಕರಾಗಿ ಚಿತ್ರರಂಗಕ್ಕೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ಕೊಟ್ಟಂತಹ ಹೆಚ್​ಡಿಕೆ, ಸಿಎಂ ಆದ್ರೂ ಪ್ರೌವೃತ್ತಿ ಮಾತ್ರ ಬಿಟ್ಟಿಲ್ಲ. ರಾಜ್ಯ ಸರ್ಕಾರದ ಬಜೆಟ್ ಜೊತೆ ಸಿನಿಮಾ ಬಜೆಟ್​ನಲ್ಲೂ ಬ್ಯುಸಿ ಆಗಿರೋ ಕುಮಾರಸ್ವಾಮಿ, ಅಕ್ಕಪಕ್ಕದ ರಾಜ್ಯದ ಮಿನಿಸ್ಟರ್​ಗಳನ್ನ ಅಲ್ಲೇ ಭೇಟಿ ಮಾಡ್ತಿದ್ದಾರೆ. ಏನೀ ಸ್ಪೆಷಲ್ ಖಬರ್ ಅಂತೀರಾ..? ನೀವೇ ನೋಡಿ.

ಹೌದು, ಸದ್ಯ ಕರ್ನಾಟಕದಲ್ಲಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರಿ ಸರ್ಕಾರದ ಎರಡನೇ ಅಧಿವೇಶನ ನಡೀತಿದೆ. ಸಿಎಂ ಕುಮಾರಸ್ವಾಮಿ ರಾಜ್ಯದ ಬಜೆಟ್ ಮಂಡನೆಗೆ ಅಣಿಯಾಗ್ತಿದ್ದಾರೆ. ಆದ್ರೆ ರಾಜ್ಯ ಸರ್ಕಾರದ ಬಜೆಟ್ ಜೊತೆ ಸಿನಿಮಾ ಬಜೆಟ್​ನಲ್ಲೂ ಸಿಎಂ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

ಜಾಗ್ವಾರ್ ನಂತ್ರ ಮತ್ತೊಮ್ಮೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಮ್ಮ ಹೋಮ್ ಬ್ಯಾನರ್ ಚೆನ್ನಾಂಬಿಕ ಫಿಲಂಸ್ ನಡಿ ನಿರ್ಮಾಣ ಮಾಡ್ತಿರೋ ಹೊಚ್ಚ ಹೊಸ ಸಿನಿಮಾ. ಭಜರಂಗಿ, ವಜ್ರಕಾಯಿ ಖ್ಯಾತಿಯ ಹರ್ಷ ನಿರ್ದೇಶನದಲ್ಲಿ ತಯಾರಾಗ್ತಿರೋ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ.

ಹೋಮ್ ಬ್ಯಾನರ್​ನಡಿ ಸಿನಿಮಾ ಮಾಡ್ತಿರುವ ಕುಮಾರಸ್ವಾಮಿ, ಬಜೆಟ್ ಮಧ್ಯೆ ಬಿಡುವು ಮಾಡಿಕೊಂಡು, ಬೆಂಗಳೂರಿನ ಪ್ಯಾಲೆಸ್ ನಲ್ಲಿ ಚಿತ್ರೀಕರಣವಾಗ್ತಿರೋ ಸಿನಿಮಾದ ಶೂಟಿಂಗ್ ಸೆಟ್​ಗೆ ಭೇಟಿ ಕೊಟ್ಟಿದ್ದಾರೆ ಸಿಎಂ. ವಿಶೇಷ ಅಂದ್ರೆ ಪಕ್ಕದ ತೆಲಂಗಾಣ ರಾಜ್ಯದ ಸಚಿವ ಕೆಟಿ ರಾಮರಾವ್ ಕೂಡ ಕುಮಾರಣ್ಣನ ಜೊತೆ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಆಂಧ್ರದಲ್ಲಿ ಜಾಗ್ವಾರ್ ತೆಲುಗು ಅವತರಣಿಕೆ ರಿಲೀಸ್​ಗೆ ಬೆಂಬಲ ಸೂಚಿಸಿದ್ದ ಕೆಟಿಆರ್, ಸದ್ಯ ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾರೆ. ಹೆಚ್​ಡಿಕೆ ಕುಟುಂಬದ ಜೊತೆ ಉತ್ತಮ ಒಡನಾಟ ಹೊಂದಿರೋ ಕೆಟಿಆರ್, ರಾಜಕೀಯ ವಿದ್ಯಾಮಾನಗಳು ಸೇರಿದಂತೆ ಸೀತಾರಾಮ ಕಲ್ಯಾಣ ಚಿತ್ರದ ಬಗ್ಗೆ ಕೂಡ ಸುದೀರ್ಘ ಚರ್ಚೆ ನಡೆಸಿರೋದು ವಿಶೇಷ.

ಡಿಂಪಲ್ ಕ್ವೀನ್ ರಚಿತಾ ರಾಮ್- ನಿಖಿಲ್ ಜೋಡಿಯ ಈ ಸಿನಿಮಾ ಮೇಕಿಂಗ್​ನಿಂದ ಸಖತ್ ಸೌಂಡ್ ಮಾಡ್ತಿದ್ದು, ಆದಷ್ಟು ಬೇಗ ಸಿನಿಮಾನ ತೆರೆಗೆ ತರೋ ಸನ್ನಾಹದಲ್ಲಿದೆ. ಇನ್ನು ಕ್ರಿಯೇಟೀವ್ ಹೆಡ್ ಸುನಿಲ್ ಸಿನಿಮಾ ನಿರ್ಮಾಣದ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಿದ್ದು, ರಿವೀಲ್ ಆಗಿರೋ ನಿಖಿಲ್ ಕಾಸ್ಟ್ಯೂಮ್ಸ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿವೆ.

ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

Next Story

RELATED STORIES