ಮಧುಗಿರಿ ಬಳಿ ಭೀಕರ ಅಪಘಾತ: ಸ್ನೇಹಿತನ ನಿಶ್ಚಿತಾರ್ಥಕ್ಕೆ ಹೊರಟ್ಟಿದ್ದ ಐವರ ಸಾವು

ಸ್ನೇಹಿತನ ಎಂಗೇಜ್​ಮೆಂಟ್​ಗೆ ತೆರಳುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದು ಐವರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಕೆರೆಗಳಪಾಳ್ಯದ ಗ್ರಾಮದಲ್ಲಿ ಸಂಭವಿಸಿದೆ.

ಜೆನ್ ಕಾರು‌ ಮತ್ತು ಸಿಮೆಂಟ್ ತುಂಬಿದ ಲಾರಿಯ ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಐದು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಕ್ರೈನ್ ಮೂಲಕ ತೆಗೆಯಲು ಪೊಲೀಸರು ಮತ್ತು ಸಾವ೯ಜನಿಕರು ಹರಹಾಸಪಟ್ಟರು.

ಮಧುಗರಿ ಸಿಪಿಐ ಅಂಬರೀಶ್ ಮತ್ತು ಸಿಬ್ಬಂದಿ ಯವರಿಂದ ತುರ್ತು ಕಾರ್ಯಾಚರಣೆ ನಡೆಸಲಾಯಿತು. ಅಪಘಾತದಲ್ಲಿ ಮುರುಳಿ‌ (24), ಮಂಜುನಾಥ್ (20), ರಾಮ್​ಮೋಹನ್ (22) ಶಿವಪ್ರಸಾದ್ (23) ಮತ್ತು
ದಿನೇಶ್ (26) ಮೃತಪಟ್ಟಿದ್ದು, ಇವರೆಲ್ಲರೂ ಬೆಂಗಳೂರಿನ ಬೈಯಪ್ಪನಹಳ್ಳಿ ನಿವಾಸಿಗಳಾಗಿದ್ದಾರೆ.

ಪಾವಗಡದಲ್ಲಿ ಸ್ನೇಹಿತ ಮಂಜುನಾಥ್ ನಿಶ್ಚಿತಾರ್ಥಕ್ಕೆ ತೆರಳುತ್ತಿರಬೇಕಾದಾಗ ನಡೆದ ದುರ್ಘಟನೆ ಇದಾಗಿದೆ.  ಕಾರಿನಲ್ಲಿ ಐವರು ಹಾಗೂ ಬೈಕ್ ನಲ್ಲಿ ನಾಲ್ವರು ಸ್ನೇಹಿತರು ತೆರಳುತಿದ್ದರು.