Top

ತಲ್ವಾರ್‌ನಿಂದ ಕೇಕ್ ಕತ್ತರಿಸಿ ವಿವಾದಕ್ಕೀಡಾದ ಬಿಜೆಪಿ ಕಾರ್ಯಕರ್ತ

ತಲ್ವಾರ್‌ನಿಂದ ಕೇಕ್ ಕತ್ತರಿಸಿ ವಿವಾದಕ್ಕೀಡಾದ ಬಿಜೆಪಿ ಕಾರ್ಯಕರ್ತ
X

ವಿಜಯಪುರ: ಇತ್ತೀಚೆಗೆ ತಲ್ವಾರ್‌ನಿಂದ ಕೇಕ್ ಕತ್ತರಿಸುವುದು ಟ್ರೆಂಡ್ ಆಗಿಬಿಟ್ಟಂತೆ ಕಾಣ್ತಿದೆ. ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಪುಡಿರೌಡಿಯೊಬ್ಬ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಹೋಗಿ, ತಲವಾರ್‌ನಿಂದ ಕೇಕ್ ಕತ್ತರಿಸಿ, ಶಿಕ್ಷೆಗೆ ಒಳಗಾಗಿದ್ದ. ಇದೀಗ ತಲ್ವಾರ್‌ನಿಂದ ಕೇಕ್‌ ಕತ್ತರಿಸಿ, ವಿಜಯಪುರ ನಗರ ಘಟಕದ ಬಿಜೆಪಿ ಅಧ್ಯಕ್ಷ ಶಿವರುದ್ರ ಬಾಗಲಕೋಟ್ ಎಂಬುವವರು ಅವಾಂತರ ಸೃಷ್ಟಿಸಿದ್ದಾರೆ. ತಮ್ಮ ಕಾರ್ಯದಿಂದ ಮಾದರಿಯಾಗಬೇಕಿದ್ದ ರಾಜಕಾರಣಿಯೇ ಈ ರೀತಿ ಮಾಡಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಜೂನ್ 29ರಂದು ಶಿವರುದ್ರ ಬಾಗಲಕೋಟ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಚಾಕುವಿನಿಂದ ಕೇಕ್ ಕಟ್ ಮಾಡುವುದು ಬಿಟ್ಟು, ತಲವಾರ್‌ನಿಂದ ಕೇಕ್ ಕಟ್ ಮಾಡಿದ್ದಾರೆ.ಅಲ್ಲದೇ ಈ ಫೋಟೋವನ್ನ ವಾಟ್ಸಾಪ್‌ ಸ್ಟೇಟಸ್‌ಗೆ ಹಾಕಿದ್ದಾರೆ.ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಇಲಾಖೆ ಇಂಥವರಿಗೆ ತಿಳುವಳಿಕೆ ಮತ್ತು ಎಚ್ಚರಿಕೆ ನೀಡಿ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ. ಇನ್ನು ಇದು ಅಪರಾಧವೆಂದು ತಿಳಿದ್ರೂ ಕೂಡ, ವಿಜಯಪುರ ನಗರ ಘಟಕದ ಬಿಜೆಪಿ ಅಧ್ಯಕ್ಷ ಶಿವರುದ್ರ ಬಾಗಲಕೋಟ್ ಈ ರೀತಿ ಕಾನೂನು ಉಲ್ಲಂಘಿಸಿದ್ದಾರೆ.

Next Story

RELATED STORIES