Top

TV5 Exclusive impact: ಮೈಸೂರಿನ ಲಕ್ಮ್ಷಮ್ಮನಿಗೆ ಕೊನೆಗೂ ಸಿಕ್ತು ಮನೆಯ ಭರವಸೆ!

TV5 Exclusive impact: ಮೈಸೂರಿನ ಲಕ್ಮ್ಷಮ್ಮನಿಗೆ ಕೊನೆಗೂ ಸಿಕ್ತು ಮನೆಯ ಭರವಸೆ!
X

ಸುರೇಶ್ Tv5 ಮೈಸೂರು

ಶಬರಿ ರಾಮನಿಗಾಗಿ 12 ವರ್ಷಗಳ ಕಾಲ ಕಾಯಬೇಕಾಯಿತು. ಆದರೆ ಮೈಸೂರಿನ ಈ ಶಬರಿ ಮನೆ ಕಟ್ಟಿಸಿ ಕೊಡ್ತೀನಿ ಅಂದ ಕುಮಾರಸ್ವಾಮಿಗಾಗಿ 11 ವರ್ಷ ಕಾದರೂ ಭರವಸೆ ಈಡೇರಿಸುವುದಾಗಲಿ, ದರ್ಶನ ಭಾಗ್ಯವೂ ಇಲ್ಲದೇ ಕಾದು ನಿಂತಿದ್ದಾರೆ. ಮಹಿಳೆಯ ಕೂಗಿಗೆ ಧ್ವನಿಯಾದ Tv5 ವರದಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಸಚಿವ ಜಿ.ಟಿ.ದೇವೇಗೌಡ ಮನೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. Tv5ನ ಆ ಮೆಗಾ Exclusive impactನ ಶಬರಿಯ ಕಹಾನಿ ಇಲ್ಲಿದೆ ನೋಡಿ.

ಹೌದು, 11 ವರ್ಷಗಳ ಕಾಲ ಯಾರಿಂದಲೂ ಆಗದ ಕೆಲಸ ಇವತ್ತು ನಿಮ್ಮ ಟಿವಿ5 ಕೆಲವೇ ಗಂಟೆಗಳಲ್ಲಿ ಮಾಡಿದೆ. ಹೌದು, 2007ರ ಸೆ.02ರಂದು ಸಿಎಂ ಕುಮಾರಸ್ವಾಮಿ ಅವ್ರು ಮೈಸೂರಿನ ಮೇದರ್ ಕೇರಿಯಲ್ಲಿ ಸ್ಲಂ ವಾಸ್ತವ್ಯ ಮಾಡಿದ್ರು. ಈ ವೇಳೆ ಗುಡಿಸಲಿನ ಮನೆಯಲ್ಲೇ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ ಅವ್ರು, ಅಲ್ಲಿಯೇ ಇದ್ದು, ಸೊಪ್ಪಿನ ಸಾರು, ಮುದ್ದೆ ಸವಿದು ಖುಷಿಪಟ್ಟಿದ್ರು. ಈ ವೇಳೆ ಕುಮಾರಸ್ವಾಮಿ ಅವ್ರು ಲಕ್ಷ್ಮಮ್ಮ ಅವ್ರ ಮನೆಯ ಸ್ಥಿತಿ ಕಂಡು, ನಿಮಗೆ ಏನೂ ಬೇಕು ಕೇಳಿ ಎಂದಾಗ ಇದೇ ಶಬರಿ ಲಕ್ಷ್ಮಮ್ಮ ನನಗಿಂತ ಮುಖ್ಯವಾಗಿ ಇಲ್ಲಿರುವ ನಿವಾಸಿಗಳಿಗೆ ಮನೆ ಮಾಡಿಸಿಕೊಡಿ ಎಂದಿದ್ರು. ಸರಿ ಎಂದು ಅಲ್ಲಿಂದ ಬೆಂಗಳೂರಿಗೆ ತೆರಳಿದ್ರು ಕುಮಾರಸ್ವಾಮಿ.

ಬಳಿಕ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾಗಿತ್ತು. ಈ ವೇಳೆ ಈ ವಾಸ್ತವ್ಯ ಹಾಗೂ ಭರವಸೆಗಳು ಹಾಗೆ ಉಳಿದಿದ್ದವು. ಇದೀಗಾ ಮತ್ತೇ ಕುಮಾರಸ್ವಾಮಿ ಅವ್ರೇ ಸಿಎಂ ಆಗಿದ್ದಾರೆ. ಇದ್ರಿಂದ ಜೋಪಾಡಿಯಲ್ಲಿದ್ದ ಲಕ್ಷ್ಮಮ್ಮಳಿಗೆ ಮನೆಯ ಆಸೆ ಚಿಗುರಿದೆ. Tv5 ಜೊತೆ ಮಾತಾಡಿ ಅಂದಿನ ಕ್ಷಣಗಳನ್ನ ಮೆಲುಕು ಹಾಕಿದ ಲಕ್ಷ್ಮಮ್ಮ, ಕುಮಾರಣ್ಣ ಬಂದೇ ಬರ್ತಾರೆ ನಮಗೆ ಮನೆ ಕೊಟ್ಟೆ ಕೊಡ್ತಾರೆ ಎಂಬ ಭರವಸೆಯಲ್ಲೇ ದಿನ ಕಳೆಯುತ್ತಿದ್ದಾರೆ.

ಇನ್ನೂ ಈ ವಿಚಾರ Tvನಲ್ಲಿ ಬಿತ್ತರವಾಗಿದ್ದೆ ತಡ ಹಲವು ಮಾಧ್ಯಮಗಳು ನಮ್ಮನ್ನ ಫಾಲೋ ಮಾಡಲು ಶುರು ಮಾಡಿತ್ತು. ಈ ವೇಳೆಗಾಗಲೇ Tv5 ಸುದ್ದಿ ರಾಜ್ಯದ ಪ್ರತಿಯೊಬ್ಬರ ಮನೆಗಳಿಗೂ ಮನಗಳಿಗೂ ತಲುಪಿತ್ತು. ಅದರ ಜೊತೆ ರಾಜಕೀಯ ಮುಖಂಡರು ಕೂಡ ಟಿವಿ5 ವರದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಕುಮಾರಸ್ವಾಮಿ ಅವ್ರೇ ಬಜೆಟ್ ಕಲಾಪ ಮುಗಿದ ಮೇಲೆ ಈ ಮಹಿಳೆ ಮನೆಗೆ ಭೇಟಿ ಕೊಟ್ಟು ಆಶ್ರಯ ಯೋಜನೆಯಲ್ಲಿ ಇವ್ರಿಗಾಗಿನೆ ಮೀಸಲಿಡಿ ಎಂದು ಬಿಜೆಪಿ ಮುಖಂಡರು Tv5 ಮೂಲಕ ಸರ್ಕಾರಕ್ಕೆ ಸಲಹೆ ಹಾಗೂ ಸೂಚನೆ ಕೊಟ್ಟರು.

ಇನ್ನೂ Tv5ನ ಈ‌ ಸುದ್ದಿ ಮೈಸೂರು ಶಾಸಕ ಹಾಗೂ ಸಚಿವರು ಆಗಿರುವ ಜಿಡಿ ದೇವೇಗೌಡರ ಗಮನಕ್ಕೂ ಬಂದಿತ್ತು. ಈ ವೇಳೆ ಅವ್ರು ಕೂಡ ಲಕ್ಷ್ಮಮ್ಮ ಅವ್ರ ಮನೆಗೆ ಭೇಟಿ ಕೊಟ್ಟು, ಅವ್ರಿಗೆ ಮನೆ ಕೊಡಿಸುವ ಭರವಸೆ ನೀಡಿದ್ದಾರೆ. ಅಲ್ಲದೆ, ಸಿಎಂ ಕುಮಾರಸ್ವಾಮಿ ಅವ್ರು ಕೂಡ ಮೈಸೂರಿನ ನಾನೂ ವಾಸ್ತವ್ಯ ಮಾಡಿಕೊಂಡ ಮನೆಯ ಬಳಿಯ ಚಿತ್ರಣ ಬದಲಾಗಿದೆ ಎಂದಿಕೊಂಡಿದ್ದೇನೆ. ಇಲ್ಲವಾದರೆ ಅದನ್ನ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಅಂತ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ Tv5ಗೆ ನೀಡಿದ್ದಾರೆ.

ಒಟ್ಟಾರೆ, 11 ವರ್ಷದ ತಪ್ಪಸಿಗೆ ಫಲ ಸಿಗುವ ಕಾಲಕ್ಕೆ ಸಾಕ್ಷಿಯಾಗ್ತಿರೋದು ನಿಮ್ಮ Tv5. ಇದು ನಮ್ಮಿಂದ ಆದ ಕೆಲಸ ಅನ್ನೋದಕ್ಕಿಂತ ಹೆಚ್ಚಾಗಿ ನೀವೂ ನಮ್ಮ ಮೇಲಿಟ್ಟ ವಿಶ್ವಾಸವೇ ಈ ಒಳ್ಳೆಯ ಕೆಲಸಕ್ಕೆ ಪ್ರೇರಪಣೆ ಕೊಟ್ಟಿದೆ ಎಂದ್ರೆ ತಪ್ಪಲ್ಲ. ಯಾಕಂದ್ರೆ, Tv5 ಇದು ನಂಬಿಕೆ ಹಾಗೂ ವಿಶ್ವಾಸ ಮಾತ್ರವಲ್ಲ ಕರ್ನಾಟಕದ ಉಸಿರು ಕೂಡ.

Next Story

RELATED STORIES