ಸ್ವೀಡನ್ ಕ್ವಾರ್ಟರ್ಗೆ : ಸ್ವಿಜರ್ಲೆಂಡ್ ನಿರ್ಗಮನ

X
TV5 Kannada3 July 2018 4:15 PM GMT
ಜಿದ್ದಾಜಿದ್ದಿನ ಕಾಳಗದಲ್ಲಿ ಏಕೈಕ ಗೋಲು ಬಾರಿಸಿ ರೋಚಕ ಗೆಲುವಿನೊಂದಿಗೆ ಸ್ವೀಡನ್ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ಗೆ ಜಿಗಿಯಿತು. ಸ್ವಿಜರ್ಲೆಂಡ್ ವೀರೋಚಿತ ಗೆಲುವಿನೊಂದಿಗೆ ನಿರ್ಗಮಿಸಿತು.
ಸೇಂಟ್ ಪೀಟರ್ಸ್ಬರ್ಗ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರೀಕ್ವಾರ್ಟರ್ ಫೈನಲ್ನಲ್ಲಿ ಸ್ವೀಡನ್ ತಂಡದ ಪರ ಎಮಿಲಿ ಫೋರ್ಸ್ಬರ್ಗ್ 66ನೇ ನಿಮಿಷದಲ್ಲಿ ಪಂದ್ಯದ ಏಕೈಕ ಗೋಲು ಸಿಡಿಸಿದರು. ಸ್ವಿಜರ್ಲೆಂಡ್ ಗೋಲಿನ ಖಾತೆ ತೆರೆಯಲು ವಿಫಲವಾಗಿ ಕನಿಷ್ಠ ಸಮಬಲ ಸಾಧಿಸುವಲ್ಲಿ ವಿಫಲವಾಯಿತು.
ಈ ಗೆಲುವಿನೊಂದಿಗೆ ಸ್ವೀಡನ್ 1994ರ ನಂತರ ಇದೇ ಮೊದಲ ಬಾರಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತು. ಸ್ವಿಜರ್ಲೆಂಡ್ ಸತತ 7ನೇ ಬಾರಿ ನಾಕೌಟ್ ಹಂತದಲ್ಲಿ ಸೋಲುಂಡಿತು. ಇದರೊಂದಿಗೆ ಸ್ವಿಜರ್ಲೆಂಡ್ ನಾಕೌಟ್ ಹಂತದಲ್ಲಿ ಒಂದೂ ಪಂದ್ಯ ಗೆಲ್ಲದ ತನ್ನ ಕಳಪೆ ಸಾಧನೆ ಮುಂದುವರಿಸಿತು.
Next Story