Top

ಬುಕ್ ತೆರೆಯಲು ಬ್ಯಾಗ್‌ಗೆ ಕೈ ಇಟ್ಟಾಗ ಬುಸ್ ಗುಟ್ಟಿದ ಹಾವು.!!

ಬುಕ್ ತೆರೆಯಲು ಬ್ಯಾಗ್‌ಗೆ ಕೈ ಇಟ್ಟಾಗ ಬುಸ್ ಗುಟ್ಟಿದ ಹಾವು.!!
X

ಆನೇಕಲ್ : ರಾಜ್ಯದ ಗಡಿಭಾಗಲ್ಲಿ ಬುಸ್‌ ಬುಸ್‌ ನಾಗಪ್ಪ, ಶಾಲಾ ಮಕ್ಕಳ ಬ್ಯಾಗ್‌ ನೊಳಗೆ ಸೇರಿಕೊಂಡು ಶಾಲೆಗೆ ಹೊರಟಿದ್ದ. ಇಂತಹ ಹಾವಿನ ಒದ್ದಾಟ ಬೆನ್ನಿಗೆ ಬ್ಯಾಗ್‌ ಹಾಕೊಂಡು ತೆರಳುತ್ತಾ ಇದ್ದ ವಿದ್ಯಾರ್ಥಿಗೆ ಅನುಭಕ್ಕೆ ಬಂದಿದ್ದೇ ತಡ, ಬ್ಯಾಗ್‌ ಬಿಸಾಕಿ ದೂರ ಓಡಿದ ಘಟನೆ ನಡೆದಿದೆ.

https://www.youtube.com/watch?v=j49RjZiuAXc

ತಮಿಳುನಾಡಿದನ ಗಡಿಭಾಗವಾದ, ಕಾಮರಾಜನಗರದ 9ನೇ ತರಗತಿಯ ವಿದ್ಯಾರ್ಥಿಯ ಬ್ಯಾಗ್‌ನಲ್ಲಿದೇ ಹಾವು ಕಾಣಿಸಿಕೊಂಡಿದೆ. ಈ ಹಾವು ಹೇಗೆ ಬ್ಯಾಗ್‌ನಲ್ಲಿ ಸೇರಿಕೊಂಡಿತ್ತೋ ಗೊತ್ತಿಲ್ಲ. ಪಾಪ ಹಾವು ಬ್ಯಾಗ್‌ನಲ್ಲಿ ಇರೋದನ್ನು ಕಾಣದ ವಿದ್ಯಾರ್ಥಿ 1 ಕಿಲೋಮೀಟರ್‌ ವರೆಗೆ ಹಾವಿನ ಬ್ಯಾಗ್‌ ಹೊತ್ತು ಸಾಗಿದ್ದಾನೆ.

ದಾರಿ ಮಧ್ಯೆ ಯಾಕೋ ಬ್ಯಾಗ್‌ನಲ್ಲಿ ಏನೋ ಇರುವ ಅನುಭವ ಆಗಿದೆ. ಬ್ಯಾಗ್‌ನ್ನು ಬಿಸಾಕಿ, ಅದರಲ್ಲಿದ್ದ ಒಂದೊಂದೇ ಪುಸ್ತಕಗಳನ್ನು ತೆರೆದು ನೋಡಿದ್ರೇ, ಬ್ಯಾಗ್‌ನಲ್ಲಿ ಹಾವು ಇರೋದು ಕಂಡು ಬಂದಿದೆ. ಕೊನೆಗೆ ಹಾವು ಬ್ಯಾಗ್‌ನಿಂದ ಹೊರಬಂದಿದ್ದೇ ತಡ, ಹೊಡೆದು ಸಾಯಿಸಿದ್ದಾರೆ.

Next Story

RELATED STORIES