Top

ಮುಸ್ಲೀಂ ಸಮುದಾಯದ ಮನೆಯಲ್ಲಿ ಅರಳಿ ನಿಂತ "ಬ್ರಹ್ಮ ಕಮಲ"

ಮುಸ್ಲೀಂ ಸಮುದಾಯದ ಮನೆಯಲ್ಲಿ ಅರಳಿ ನಿಂತ ಬ್ರಹ್ಮ ಕಮಲ
X

ಕೊಪ್ಪಳ : ಬ್ರಹ್ಮ ಕಮಲ ರಾತ್ರಿ 11 ಗಂಟೆಯ ಬಳಿಕ ಅರಳಿ ಬೆಳಗಾಗುವುದರ ಒಳಗೆ ಕಮರಿಹೋಗುತ್ತದೆ. ರಾತ್ರಿ ರಾಣಿ ಎನ್ನುವ ಹೂವಿನ ಗಿಡದ ಎಲೆ ಇದು. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ.

ಸೌಂದರ್ಯಕ್ಕಿಂತಲೂ ಧಾರ್ಮಿಕ ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು. ಮಹಿಳೆಯರಿಗೆ ಈ ಹೂವು ಪೂಜ್ಯನೀಯ. ರಾತ್ರಿಯ ವೇಳೆ ಈ ಹೂವು ಬಿಟ್ಟಾಗ ಮನೆಯವರೆಲ್ಲ ಸೇರಿ ಪೂಜೆ ಮಾಡುತ್ತಾರೆ. ಬ್ರಹ್ಮಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ, ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ನಂಬಿಕೆ ಇದೆ.

ಇಂತಹ ಬ್ರಹ್ಮಕಮಲ, ಕೊಪ್ಪಳದ ಮುಸ್ಲೀಂ ಸಮುದಾಯದ ಮನೆಯಲ್ಲಿ ಅರಳಿ ನಿಂತಿದೆ. ಒಂದೇ ಗಿಡದಲ್ಲಿ ಐದು ಹೂಗಳು ಅರಳಿ, ಅಚ್ಚರಿಯನ್ನು ಮೂಡಿಸಿವೆ. ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಮರಳಿಗೆ ಗ್ರಾಮದ ಶೇಖಮ್ಮ ಎಂಬ ಮಹಿಳೆಯ ಮನೆ ಈ ಅಪರೂಪದ ದೃಶಕ್ಕೆ ಸಾಕ್ಷಿಯಾಗಿದೆ.

ಇದೀಗ ಬ್ರಹ್ಮಕಮಲ ನೋಡಲು ರಾತ್ರಿಯಲ್ಲಿ ಬರುವ ಗ್ರಾಮದ ಅನೇಕ ಜನರು, ಪೂಜೆ ಸಲ್ಲಿಸಿ, ಜಾತ್ಯಾತೀತತೆಯನ್ನು ಮೆರೆಯುತ್ತಿದ್ದಾರೆ. ಇವರೊಟ್ಟಿಗೆ ಶೇಖಮ್ಮ ಕೂಡ ಬ್ರಹ್ಮ ಕಮಲ ಪುಷ್ಪಕ್ಕೆ ಪೂಜೆ ಸಲ್ಲಿಸುತ್ತಿದ್ದೂ, ಧಾರ್ಮಿಕ ಭಾವೈಕ್ಯತೆಯನ್ನು ಮೀರಿದ ಪ್ರೀತಿಯನ್ನು ತೋರುತ್ತಿದ್ದಾರೆ.

ಇಂಥ ಅಪರೂಪದ ಹೂವು ಬ್ರಹ್ಮ ಕಮಲದ ಹೂವು ಅರಳ್ಳೋದೂ ಅದೃಷ್ಟದ ಸಂಕೇತ ಎಂಬ ನಂಬಿಕೆ ಜನರಲ್ಲಿದೆ. ಹೀಗಾಗಿ ಈ ಹೂವು ಮೊದಲ ಬಾರಿಗೆ ಅರಳಿದಾಗ 5 ಜನ ಮುತ್ತೆ„ದೆಯರಿಗೆ ಉಡಿತುಂಬಿ ಸತ್ಕರಿಸುವ ಸಂಪ್ರದಾಯ ಕೂಡ ಉತ್ತರ ಕರ್ನಾಟಕದಲ್ಲಿದೆ. ಇದೇ ರೀತಿಯಾಗಿ ಶೇಖಮ್ಮ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜಿಸಲಾಗುತ್ತಿದೆ.

ಅಂದಹಾಗೇ, ಕಮಲನಾಭನಾದ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್‌ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ ಕಮಲಭವ ಅಂದರೆ, ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎನ್ನುವ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ ಬ್ರಹ್ಮಕಮಲ ಎನ್ನುವ ಹೆಸರು ಬಂದಿದೆ. ಕೇವಲ ವರ್ಷಕೊಮ್ಮೆ ಅರಳುವ ಈ ಹೂವು ರಾತ್ರಿ ವೇಳೆ ಅರಳಿ ರಾತ್ರಿಯೇ ಬಾಡಿಹೋಗುತ್ತೆ. ಹೂವುಗಳಲ್ಲೇ ಈ ಥರದ ಸ್ವಭಾವವನ್ನು ತೋರಿಸುವ ಹೂವು ಇದೊಂದೇ.

Next Story

RELATED STORIES