Top

ಆರ್‌ಟಿಇ ಅಡಿ ಆಯ್ಕೆಯಾದ ವಿದ್ಯಾರ್ಥಿಗಳಿಂದ ಹಣ ಸುಲಿಗೆ

ಆರ್‌ಟಿಇ ಅಡಿ ಆಯ್ಕೆಯಾದ ವಿದ್ಯಾರ್ಥಿಗಳಿಂದ ಹಣ ಸುಲಿಗೆ
X

ಕೊಪ್ಪಳ : ಆರ್. ಟಿ. ಇ ಅಡಿಯಲ್ಲಿ ಆಯ್ಕೆಯಾದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎನ್ನುವ ನಿಯಮ ಇದೆ. ಆದ್ರೆ ಇಲ್ಲೊಂದು ಜಿಲ್ಲೆಯ ಖಾಸಗಿ ಶಾಲೆಗಳು ಪಾಲಕರ ಹತ್ತಿರ ಹಣ ಸುಲಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೌದು ಕೊಪ್ಪಳ ಜಿಲ್ಲೆಯ ಬಹುತೇಕ ಖಾಸಗಿ ಶಾಲೆಗಳು,ಆರ್ ಟಿ ಇ ಅಡಿಯಲ್ಲಿ ಆಯ್ಕೆಯಾದ ಮಕ್ಕಳ ಪಾಲಕರ ಹತ್ತಿರ ನಿಯಮ ಬಾಹೀರವಾಗಿ 1500 ರೂಪಾಯಿಗಳನ್ನು ಪಡೆಯುತ್ತಿದ್ದು, ಪಾಲಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯವರು, ಪಾಲಕರ ಹತ್ತಿರ ಹಣ ಪಡೇಯುತ್ತಿದ್ದು, ಇದ್ರಿಂದ ರೋಷಿ ಹೋಗಿರುವ ಪಾಲಕರು ಹಣ ಕೊಡುವ ದೃಶ್ಯವನ್ನು ಮೋಬೈಲ್‌ನಲ್ಲಿ ಸೇರೆ ಹಿಡಿದ್ದಿದ್ದಾರೆ.

ಇನ್ನು ಇದೊಂದೆ ಶಾಲೆ ಅಲ್ಲ, ಜಿಲ್ಲೆಯಲ್ಲಿ ಬಹುತೇಕ ಖಾಸಗಿ ಶಾಲೆಗಳು ಇದೇ ರೀತಿ ಮಾಡ್ತಾ ಇದ್ದು, ಹಗಲು ದರೋಡೆ ಮಾಡ್ತಾ ಇದ್ದಾರೆ. ಶಿಕ್ಷಣ ಇಲಾಖೆಯ ನಿಯಮ ಪ್ರಕಾರ ಯಾವುದೇ ವಿದ್ಯಾರ್ಥಿಗಳ ಹತ್ತಿರ ಹಣ ಪಡೇಯಬಾರದು ಎಂದು ಆದೇಶ ಹೊರಡಿಸಿದ್ದಾರೆ. ಆದ್ರೆ ಇದನ್ನು ಲೇಕ್ಕಿಸಿದೇ ಹಣ ಪಡೆಯುತ್ತಿರೋದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಮಕ್ಕಳು ಆರ್ ಟಿ ಇ ಅಡಿಯಲ್ಲಿ ಆಯ್ಕೆಯಾಗಿದ್ದು, ಲಕ್ಷಾಂತರ ರೂಪಾಯಿ ಹಣ ಖಾಸಗಿ ಶಾಲೆಯವರು ದೋಚುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ವರದಿ : ನಾಗರಾಜ್ ವೈ, ಟಿವಿ5 ಕೊಪ್ಪಳ

Next Story

RELATED STORIES