Top

ಅಧಿವೇಶನದಲ್ಲೂ ಶಾಸಕರನ್ನು ಬಿಡದ ಮೊಬೈಲ್ ಗೀಳು

ಅಧಿವೇಶನದಲ್ಲೂ ಶಾಸಕರನ್ನು ಬಿಡದ ಮೊಬೈಲ್ ಗೀಳು
X

ಬೆಂಗಳೂರು : ಇಂದು ಸದನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಬಿಸಿ ಬಿಸಿ ಚರ್ಚೆ ಮಾಡ್ತಾ ಇದ್ರೇ, ನೂತನವಾಗಿ ಆಯ್ಕೆಯಾಗಿದ್ದ ಶಾಸಕರು ಅಧಿವೇಶನದಲ್ಲೂ ಮೊಬೈಲ್ ಗೀಳಿಗೆ ಇಳಿದಿದ್ದರು.

ನೂತನವಾಗಿ ವರುಣಾ ಕ್ಷೇತ್ರದಿಂದ ಆಯ್ಕೆಯಾಗಿ ಸದನಕ್ಕೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಡಾ.ಯತೀಂದ್ರ, ಮೊಬೈಲ್ ಹಿಡಿದು ವಾಟ್ಸ್‌ಆಪ್‌ನಲ್ಲಿ ಮುಳುದಿದ್ದರು. ನಂತ್ರ, ವಿಧಾನಸಭೆಯಲ್ಲಿ ಬಿ ಎಸ್‌ ಯಡಿಯೂರಪ್ಪ ಅವರ ಗಂಭೀರ ಚರ್ಚೆಯಿಂದ ನಿದ್ದೆಯಿದ್ದ ಎದ್ದವರಂತೆ ಎಚ್ಚೆತ್ತರು. ಆನಂತ್ರವೂ ಕೆಲವೊತ್ತು ಚರ್ಚೆಯಲ್ಲಿ ತೊಡಗಿಸಿಕೊಂಡು, ಮರಳಿ ಅದೇ ಹಾದಿ ಹಿಡಿದು ಮೊಬೈಲ್‌ನಲ್ಲಿ ತಲ್ಲೀನರಾಗಿದ್ದು ಕಂಡುಬಂತು.

ಇನ್ನೂ ಮತ್ತೊಂದೆಡೆ, ಬಿಎಸ್‌ವೈ ಗಂಭೀರ ಚರ್ಚೆ ನಡೆಸುತ್ತಿದ್ದಾಗಲೇ, ಯಾದಗಿರಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್‌ ಮೊಬೈಲ್‌ ಬಳಸಿಕೊಂಡು ಸದನದಲ್ಲಿ ಕುಳಿತಿದ್ದರು. ಮೊಬೈಲ್‌ನಲ್ಲಿ ಅದೂ ಇದೂ ಸರ್ಚಿಂಗ್‌ಗೆ ಇಳಿದಿದ್ದ ಶಾಸಕರು, ಸದನದ ಚರ್ಚೆಯಲ್ಲಿ ಭಾಗವಹಿಸಿದ್ದಕ್ಕಿಂತ, ಮೊಬೈಲ್‌ ನೋಡುತ್ತಿದ್ದದ್ದೇ ಹೆಚ್ಚು..

ಮತ್ತೊಂದೆಡೆ ಸದನ ಆರಂಭವಾಗುತ್ತಿದ್ದಂತೆ ರಾಜ್ಯಪಾಲ ಭಾಷಣದ ಮೇಲೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಗಂಭೀರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದವು. ಈ ವೇಳೆ ನಿಯಮ ಉಲ್ಲಂಖಿಸಿ ಬಿ ಸಿ ಪಾಟೀಲ್‌ ಮೊಬೈಲ್‌ ಬಳಸುತ್ತಿದ್ದದ್ದು ಕಂಡು ಬಂತು. ಸದನದಲ್ಲಿ ರಾಜ್ಯಪಾಲ ಭಾಷಣದ ಮೇಲೆ ಚರ್ಚೆ ನಡೆಯುತ್ತಿದ್ದರೇ, ಬಿ ಸಿ ಪಾಟೀಲ್‌ ತಮಗೂ ಅದಕ್ಕೂ ಸಂಬಂಧ ಇಲ್ಲದಂತೆ ಮೊಬೈಲ್‌ನಲ್ಲಿ ಮಸೇಜ್‌ ನೋಡೋದ್ರಲ್ಲಿ ನಿರತರಾಗಿದ್ದರು.

ಒಟ್ಟಾರೇ ನೂತನ ಶಾಸಕರಾಗಿ ಸದನಕ್ಕೆ ಬಂದ ಶಾಸಕರು, ಇಂದು ಅಧಿವೇಶನದಲ್ಲಿ ಬಿಸಿಬಿಸಿ ಚರ್ಚೆಯಿಂದ ದೂರ ಉಳಿದಿದ್ದರು. ಸದನದ ನಿಯಮ ಮೀರಿ ಮೊಬೈಲ್‌ನಲ್ಲಿ ನಿರತರಾಗಿದ್ದರು. ರಾಜ್ಯದ ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕಿದ್ದ ಶಾಸಕರ ಇಂತಹ ನಡೆ ನಿಜಕ್ಕೂ ಖೇದಕರ..

Next Story

RELATED STORIES