Top

ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಮಂಡ್ಯದ 35 ಜನರು ಸುರಕ್ಷಿತ

ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಮಂಡ್ಯದ 35 ಜನರು ಸುರಕ್ಷಿತ
X

ಮಂಡ್ಯ : ಕಳೆದ ನಿನ್ನೆಯಷ್ಟೇ ಮಾನಸ ಸರೋವರ ಯಾತ್ರೆಯಲ್ಲಿ ರಾಜ್ಯದ 200ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈ ಬಗ್ಗೆ ರಾತ್ರೋರಾತ್ರಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ, ತುರ್ತು ಕ್ರಮಕ್ಕಾಗಿ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಮಂಡ್ಯದ 35ಕ್ಕೂ ಹೆಚ್ಚು ಜನರು ಸುರಕ್ಷಿತರಾಗಿರುವುದಾಗಿ ತಿಳಿದು ಬಂದಿದೆ.

ಮಂಡ್ಯ ಜಿಲ್ಲೆಯಿಂದ ಸುಮಾರು 35ಕ್ಕೂ ಹೆಚ್ಚು ಜನರು ಈ ಬಾರಿ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದರು. ಅವರಲ್ಲಿ ಶಿವಸ್ವಾಮಿ, ಗೀತಾ, ಮಂಜುನಾಥ್ ಸ್ವಾಮಿ, ಪೂರ್ಣಿಮಾ ಸೇರಿದಂತೆ 35ಕ್ಕೂ ಹೆಚ್ಚು ಮಳವಳ್ಳಿ ಭಾಗದ ಯಾತ್ರಾರ್ಥಿಗಳು ಸುರಕ್ಷಿತರಾಗಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಸ್ವತಹ ಯಾತ್ರೆಯಲ್ಲಿರುವ ಮಂಜುನಾಥ್‌ ಸ್ವಾಮಿ ಸ್ನೇಹಿತ ಅನಿಲ್‌ಗೆ ಕರೆಮಾಡಿ ಈ ಮಾಹಿತಿ ತಿಳಿಸಿದ್ದಾರೆ. ಈ ಮೂಲಕ ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ತೆರಳಿದ್ದ ರಾಜ್ಯ 35ಕ್ಕೂ ಹೆಚ್ಚು ಯಾತ್ರಾರ್ಥಿಗಳು ಮಾನಸ ಸರೋವರದಲ್ಲಿ ಸುರಕ್ಷಿತರಾಗಿರುವುದಾಗಿ ತಿಳಿದು ಬಂದಿದೆ. ಇನ್ನೂ ಹೆಚ್ಚಿನ ಯಾತ್ರಾರ್ಥಿಗಳ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.

Next Story

RELATED STORIES