Top

ಮಾನಸ ಸರೋವರ ಯಾತ್ರಾರ್ಥಿಗಳು ಸಂಕಷ್ಟ : ತುರ್ತು ರಕ್ಷಣಾ ಕಾರ್ಯಕ್ಕೆ ಸಿಎಂ ಸೂಚನೆ

ಮಾನಸ ಸರೋವರ ಯಾತ್ರಾರ್ಥಿಗಳು ಸಂಕಷ್ಟ : ತುರ್ತು ರಕ್ಷಣಾ ಕಾರ್ಯಕ್ಕೆ ಸಿಎಂ ಸೂಚನೆ
X

ಬೆಂಗಳೂರು : ಕರ್ನಾಟಕದಿಂದ ಕಠ್ಮಂಡುವಿನಲ್ಲಿರು ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ 200ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ, ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ, ರಾಜ್ಯದ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ.

ಈ ಕುರಿತು ಕಷ್ಟದಲ್ಲಿ ಸಿಲುಕಿರುವ ಯಾತ್ರಾರ್ಥಿಗಳೇ, ಈ ಬಗ್ಗೆ ಮಾಹಿತಿ ಹಂಚಿಕೊಂಡ ಪರಿಣಾಮ, ಸಂಕಷ್ಟಕ್ಕೀಡಾದ ಯಾತ್ರಾರ್ಥಿಗಳ ನೆರವಿಗೆ, ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಧಾವಿಸಿದ್ದಾರೆ. ಈ ಕುರಿತು ಕಳೆದ ನಿನ್ನೆ ತುರ್ತು ಕ್ರಮ ಕೈಗೊಳ್ಳಲು ಸೂಚಿಸಿರುವ ಸಿಎಂ, ಈ ಸಂಬಂಧ ಎಲ್ಲಾ ಅಗತ್ಯ ತುರ್ತು ಕ್ರಮ ಕೈಗೊಳ್ಳುವಂತೆ ದೆಹಲಿಯ ಕರ್ನಾಟಕ ಭವನದಲ್ಲಿರುವ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಸಿಎಂ ನಿರ್ದೇಶನದಂತೆ ಸ್ಥಾನಿಕ ಆಯುಕ್ತರು ನೇಪಾಳ ಸರ್ಕಾರ ಭಾರತ ರಾಯಭಾರಿ ಕಛೇರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸೂಕ್ತ ರಕ್ಷಣಾ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ದೆಹಲಿಯ ಸ್ಥಾನಿಕ ಅಧಿಕಾರಿಗಳು, ನೇಪಾಳದ ಭಾರತದ ರಾಯಭಾರಿ ಕಛೇರಿ ಅಧಿಕಾರಿಗಳು ನಮ್ಮ ಮನವಿಗೆ ತಕ್ಷಣ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾಗಿ ಹೇಳಿದ್ದಾರೆ.

ಅಂದಹಾಗೇ ಮಾನಸ ಸರೋವರ ಯಾತ್ರೆಗೆ ಬೆಂಗಳೂರು, ಧಾರವಾಡ, ಗುಲ್ಪರ್ಗಾ ಮತ್ತು ಹಾಸನದ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಯಾತ್ರಾರ್ಥಿಗಳು ತೆರಳಿದ್ದರು. ಈ ಯಾತ್ರಾರ್ಥಿಗಳು ಅಮರನಾಥ, ಕೈಲಾಸ, ಮಾನಸ ಸರೋವರ ಪ್ರವಾಸ ಮುಗಿಸಿಕೊಂಡು ರಾಜ್ಯಕ್ಕೆ ಮರಳುವವರಿದ್ದರು. ಆದ್ರೇ ಕಠ್ಮಂಡುವಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ, ಭೂ ಕುಸಿತ ಉಂಟಾಗಿ, ಸಂಕಷ್ಟಕ್ಕೆ ಈಡಾಗಿದ್ದರು.

ಇಂತಹ ಸಂಕಷ್ಟಕ್ಕೆ ಈಡಾಗಿರುವ ಯಾತ್ರಾರ್ಥಿಗಳ ರಕ್ಷಣೆಗೆ ಸಿಎಂ ತುರ್ತು ನಿರ್ದೇಶನ ನೀಡದ ಹಿನ್ನಲೆಯಲ್ಲಿ, ನೇಪಾಳ ಮತ್ತು ಟಿಬೆಟ್ ರಾಯಭಾರ ಕಚೇರಿ ಅಧಿಕಾರಿಗಳು ಇದೀಗ ನೆರವಿಗೆ ಬಂದಿದ್ದಾರೆ. ಇನ್ನೂ ರಾಜ್ಯದ ಪ್ರವಾಸಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ಗೃಹ ಇಲಾಖೆಗೆ ಮನವಿ ಮಾಡಿದೆ.

ಈ ಹಿನ್ನಲೆಯಿಂದಲೂ ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳಿಗೆ ಇದೀಗ ಸಮರೋಪಾದಿಯ ರಕ್ಷಣಾ ನೆರವು ದೊರೆತಿದೆ. ನೀರು, ಆಹಾರ ಮತ್ತು ಸಂಚಾರ ವ್ಯವಸ್ಥೆ ಮಾಡಿರುವ ಅಧಿಕಾರಿಗಳು, ಬೇರೆ ಬೇರೆ ಮಾರ್ಗದಿಂದ ಪ್ರವಾಸಿಗರನ್ನು ಕರೆತರುವ ಕಾರ್ಯದಲ್ಲಿ ನಿರತರಾಗಿದ್ದು, ಹೆಲಿಕ್ಯಾಪ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ಕರೆತರುವ ಪ್ರಯತ್ನ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಪತ್ತು ನಿರ್ವಹಣಾ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಂಗರಾಮ್‌ ಬಡೇರಿಯಾ, ರಾಜ್ಯ ಸರ್ಕಾರ ನೇಪಾಳದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದೆ. ಕರ್ನಾಟಕದ ಯಾತ್ರಿಗಳೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

Next Story

RELATED STORIES