ನೈಜಿರಿಯಾ ಫುಟ್ಬಾಲ್ ತಂಡದ ನಾಯಕದ ತಂದೆ ಕಿಡ್ನಾಪ್

X
TV5 Kannada3 July 2018 3:03 PM GMT
ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನೈಜೀರಿಯಾ ಫುಟ್ಬಾಲ್ ತಂಡವನ್ನು ಮುನ್ನಡೆಸುತ್ತಿರುವ ಜಾನ್ ಮೈಕಲ್ ಓಬಿ ಅವರ ತಂದೆಯನ್ನು ಕಿಡ್ನಾಪ್ ಮಾಡಲಾಗಿದ್ದು, ಅಪಹರಣಕಾರರು ಹಣ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.
ಇನಗು ಎಂಬ ಪ್ರದೇಶದಿಂದ ಜಾನ್ ಮೈಕಲ್ ಓಬಿ ಅವರ ತಂದೆ ಓಬಿ ಅವರನ್ನು ಅಪಹರಣಕಾರರು ಬಂದೂಕು ತೋರಿಸಿ ಅಪಹರಿಸಿದ್ದರು. ಮಳೆಯ ನಡುವೆ ಬರಿಗಾಲಲ್ಲಿ ಸುಮಾರು 5 ಕಿ.ಮೀ. ನಡೆಸಿದ್ದರು. ಅದನ್ನು ಹೊರತುಪಡಿಸಿದರೆ ಯಾವುದೇ ದೈಹಿಕ ಅಥವಾ ಮಾನಸಿಕ ಹಿಂಸೆ ಮಾಡಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸುಮಾರು 60 ವರ್ಷದ ತಂದೆಯನ್ನು 10 ದಶಲಕ್ಷ ನೈರಾ (28 ಸಾವಿರ ಡಾಲರ್) ನೀಡಿ ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಅಂದರೆ 2011ರಲ್ಲಿ ಕೂಡ ಓಬಿ ಅವರನ್ನು ಅಪಹರಿಸಲಾಗಿತ್ತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
Next Story