Top

ಮತ್ತೆ ಬರ್ತಿದೆ ಜಾನಿ-ಅಪ್ಪು ಕಾಂಬಿನೇಷನ್ ಸಾಂಗ್..!

ಮತ್ತೆ ಬರ್ತಿದೆ ಜಾನಿ-ಅಪ್ಪು ಕಾಂಬಿನೇಷನ್ ಸಾಂಗ್..!
X

ನಾಣಿ, ಎಂಟ್ರಟ್ರೈನ್​​ಮೆಂಟ್ ಬ್ಯೂರೊ, ಟಿವಿ5

ಪವರ್ ಸ್ಟಾರ್ ಅಂದ್ರೆ ಡ್ಯಾನ್ಸ್.. ಡ್ಯಾನ್ಸ್ ಅಂದ್ರೆ ಪವರ್ ಸ್ಟಾರ್.. ಕಳೆದ ವರ್ಷವಿಡೀ ಅಪ್ಪು ಡ್ಯಾನ್ಸ್ ನೋಡಿ ಕುಣಿದು ಕುಪ್ಪಳಿಸಿದ್ದ, ಫ್ಯಾನ್ಸ್ ಈ ವರ್ಷ ಮತ್ತೆ ಕುಣಿಯೋಕೆ ರೆಡಿಯಾಗಿ.. ನಟಸಾರ್ವಭೌಮ ಚಿತ್ರದಲ್ಲಿ ಒನ್ಸ್ ಅಗೇನ್ ಅಪ್ಪು ಪವರ್​ಫುಲ್ ಸ್ಟೆಪ್ಸ್​ ಹಾಕಿ ನಿಮ್ಮನ್ನ ಕುಣಿಸೋಕೆ ಬರ್ತಿದ್ದಾರೆ.. ಜಾನಿ ಮಾಸ್ಟರ್​, ಅಪ್ಪು ಕಾಂಬಿನೇಷನ್​​ನ ಈ ಪಾರ್ಟಿ ಸಾಂಗ್​ ಹೇಗಿರುತ್ತೆ ಅನ್ನೋದ್ರ ಬಗ್ಗೆ ಮುಂದೆ ಓದಿ..

ಸ್ಯಾಂಡಲ್​ವುಡ್​ನಲ್ಲಿ ಡ್ಯಾನ್ಸ್ ಅಂದಾಕ್ಷಣ ನೆನಪಾಗೋದು ಪವರ್ ಸ್ಟಾರ್.. ಅಪ್ಪು ಸಿನಿಮಾದಿಂದ ಇಲ್ಲಿವರೆಗೆ ಅದೆಷ್ಟೊ ಹಾಡುಗಳಲ್ಲಿ ತಮ್ಮ ಸ್ಟೆಪ್ಸ್​ನಿಂದ್ಲೇ ನೋಡುಗರನ್ನ ಕುಣಿಸಿರೋ ಡ್ಯಾನ್ಸಿಂಗ್ ಸ್ಟಾರ್ ಪುನೀತ್ ರಾಜ್​ಕುಮಾರ್.. ಅಪ್ಪು ಡ್ಯಾನ್ಸ್​​​ನ ಹೈಲೆಟ್​ ಮಾಡಿ ಅದೆಷ್ಟೋ ಸಾಂಗ್ಸ್ ಬಂದಿವೆ..

ಅಪ್ಪು ಡ್ಯಾನ್ಸ್ ನೋಡಿ ಕುಣಿದಿತ್ತು ಸ್ಯಾಂಡಲ್​ವುಡ್..!

ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ಆದ ಸಿನಿಮಾ ರಾಜಕುಮಾರ.. ವಿ. ಹರಿಕೃಷ್ಣ ಸಂಗೀತ ಎಲ್ಲಾ ಹಾಡುಗಳದ್ದು ಒಂದು ತೂಕವಾದ್ರೆ, ಅಪ್ಪು ಸಾಂಗ್​ನದ್ದು ಮತ್ತೊಂದು ತೂಕ.. ಅದಕ್ಕೆ ಕಾರಣ ಜಾನಿ ಮಾಸ್ಟರ್ ಕೊರಿಯೋಗ್ರಫಿ.. ಅಪ್ಪು ಪವರ್​ಫುಲ್ ಡ್ಯಾನ್ಸ್..

ಪುನೀತ್ ರಾಜ್​ಕುಮಾರ್ ಪುಟಾಣಿಗಳ ಜೊತೆ ಹಾಕಿದ್ದ ಸ್ಟೆಪ್ಸ್​ಗೆ ಥಿಯೇಟರ್ ಟಾಪ್ ಕಿತ್ತೋಗಿತ್ತು.. ಮಕ್ಕಳಿಗಂತೂ ಈ ಹಾಡು ಕೊಟ್ಟ ಕಿಕ್ ಅಷ್ಟಿಷ್ಟಲ್ಲ.. ಅಂತದ್ದೇ ಮತ್ತೊಂದು ಮ್ಯಾಜಿಕ್​ಗೆ ಜಾನಿ ಮಾಸ್ಟರ್-ಪುನೀತ್ ಜೊತೆಯಾಗಿದ್ದಾರೆ.. ನಟಸಾರ್ವಭೌಮ ಚಿತ್ರದಲ್ಲಿ ಪಾರ್ಟಿ ಸಾಂಗ್​ ಬೇಜಾನ್ ಸೌಂಡ್ ಮಾಡ್ತಿದೆ..

ಗ್ರ್ಯಾಂಡ್​​ ಸೆಟ್​​ನಲ್ಲಿ ನಟಸಾರ್ವಭೌಮನ ಪಾರ್ಟಿ ಸಾಂಗ್

ಯೆಸ್..ಪವರ್ ಒಡೆಯರ್ ನಿರ್ದೇಶನದ ಮೋಸ್ಟ್ ಎಕ್ಸ್​ಪೆಕ್ಟೆಡ್ ಸಿನಿಮಾ ನಟಸಾರ್ವಭೌಮ.. ಚಿತ್ರಕ್ಕೆ ಡಿ. ಇಮ್ಮಾನ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಸದ್ಯ ಸಾಂಗ್ ಶೂಟಿಂಗ್​ನಲ್ಲಿ ಬ್ಯುಸಿಯಾಗಿದೆ ಚಿತ್ರತಂಡ.. ಕಥೆಗೆ ತಕ್ಕಂತೆ ಒಂದು ಗ್ರ್ಯಾಂಡ್ ಪಾರ್ಟಿ ಸಾಂಗ್​ನ ಈ ಚಿತ್ರಕ್ಕಾಗಿ ಸೆರೆಹಿಡಿಯಲಾಗ್ತಿದೆ.. ಅದ್ದೂರಿ ಸೆಟ್​​ನಲ್ಲಿ ವಿದೇಶಿ ಕಲಾವಿದರು, ಮುಂಬೈ ಡ್ಯಾನ್ಸರ್ಸ್ ಮತ್ತು ಜ್ಯೂನಿಯರ್ ಆರ್ಟಿಸ್ಟ್​ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ..

ಅಪ್ಪು ಡ್ಯಾನ್ಸ್ ಸಾಂಗ್​​​​​ಗೆ ಪುನೀತ್ ರಾಜ್​ಕುಮಾರ್​ನ ಕುಣಿಸಿದ್ದ ಜಾನಿ ಮಾಸ್ಟರ್ ಈ ಪಾರ್ಟಿ ಸಾಂಗ್ ಸಾರಥ್ಯ ವಹಿಸಿದ್ದಾರೆ.. ಅಪ್ಪು ಬ್ಲ್ಯಾಕ್ ಕಲರ್​ ಫಾರ್ಮಲ್ಸ್​​​ನಲ್ಲಿ ಮಿರಿ ಮಿರಿ ಮಿಂಚಿದ್ದು, ಸಿಕ್ಕಾಪಟ್ಟೆ ಎನರ್ಜಿಟಿಕ್ ಸ್ಟೆಪ್ಸ್ ಹಾಕಿದ್ದಾರೆ..ಸದ್ಯ ಈ ಪಾರ್ಟಿ ಸಾಂಗ್ ಮೇಕಿಂಗ್ ಸ್ಟಿಲ್ಸ್ ಸಖತ್ ಸೌಂಡ್ ಮಾಡ್ತಿದೆ..

ಕ್ಯಾಮರಾಮನ್ ವೈದಿ ಅಂಡ್ ಟೀಮ್ ನಟಸಾರ್ವಭೌಮ ಚಿತ್ರದ ಈ ಡ್ಯಾನ್ಸಿಂಗ್​ ನಂಬರ್​ನ ಸೆರೆಹಿಡಿದಿದೆ.. ಸೆಟ್​​ನಲ್ಲಿ ಪವರ್ ಸ್ಟಾರ್ ಪವರ್​ಫುಲ್ ಡ್ಯಾನ್ಸ್ ಮೂವ್ಸ್ ನೋಡಿ ಚಿತ್ರತಂಡ ಕಳ್ದೋಗಿದೆ.. ಈ ಸ್ಪೆಷಲ್​ ಸಾಂಗ್​ನಿಂದ ನಟಸಾರ್ವಭೌಮ ಚಿತ್ರಕ್ಕೆ ಮತ್ತಷ್ಟು ಪವ್ ಬಂದಂತಾಗಿದೆ..

ಶೂಟಿಂಗ್​ನ ಕೊನೆ ಹಂತಕ್ಕೆ ಬಂದಿರೋ ನಟಸಾರ್ವಭೌಮ ಟೀಮ್​, ಶೀಘ್ರದಲ್ಲೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ಸ್ಟಾರ್ಟ್ ಮಾಡೋ ಲೆಕ್ಕಾಚಾರದಲ್ಲಿದೆ.. ದಸರಾ ಹಬ್ಬಕ್ಕೆ ತೆರೆಮೇಲೆ ಜ್ಯೂನಿಯರ್ ನಟಸಾರ್ವಭೌಮನ ದರ್ಶನವಾಗಲಿದೆ..

Next Story

RELATED STORIES