Top

ಸೋಲಿನ ನಂತರವೂ ಮೈದಾನ ಸ್ವಚ್ಛಗೊಳಿಸಿದ ಜಪಾನ್ ಅಭಿಮಾನಿಗಳು!

ಸೋಲಿನ ನಂತರವೂ ಮೈದಾನ ಸ್ವಚ್ಛಗೊಳಿಸಿದ ಜಪಾನ್ ಅಭಿಮಾನಿಗಳು!
X

ಊರು ಸ್ವಚ್ಛ ಮಾಡುವುದಿರಲಿ ನಿಮ್ಮ ಮನೆಯ ಸುತ್ತ ಸ್ವಚ್ಛವಾಗಿಟ್ಟುಕೊಳ್ಳಿ ಅಂದರೆ ನಮ್ಮವರು ನಮ್ಮ ಮನೆಯ ಕಸವನ್ನು ಮತ್ತೊಬ್ಬರ ಮನೆಯ ಮುಂದೆ ಹಾಕಿಬಿಡುತ್ತಾರೆ. ಎಲ್ಲೆಂದರಲ್ಲಿ ಉಗಿಯೋದು, ಕಸ ಎಸೆಯೋದು ಸಾಮಾನ್ಯ. ಅದರಲ್ಲೂ ಕ್ರೀಡಾಂಗಣಕ್ಕೆ ಹೋದಾಗ ತಮ್ಮ ನೆಚ್ಚಿನ ತಂಡ ಸೋತರೆ ನೀರಿನ ಬಾಟಲಿ ಸೇರಿದಂತೆ ಕೈಯಲ್ಲಿದ್ದ ವಸ್ತುಗಳನ್ನು ಕ್ರೀಡಾಂಗಣಕ್ಕೆ ಎಸೆಯೋದು, ಬೆಂಕಿ ಹಚ್ಚೋದು ಮಾಡ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಜಪಾನ್ ಜನರ ನಡತೆ.

ಹೌದು, ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯ ವೇಳೆ ಜಪಾನ್ ಅಭಿಮಾನಿಗಳು ತಂಡ ಸೋತು ಟೂರ್ನಿಯಿಂದ ಹೊರಬಿದ್ದ ಆಘಾತದ ಹೊರತಾಗಿಯೂ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ.

ಸೋಮವಾರ ನಡೆದ ಪ್ರೀಕ್ವಾರ್ಟರ್ ಫೈನಲ್​ನಲ್ಲಿ ಬೆಲ್ಜಿಯಂ ವಿರುದ್ಧ ಜಪಾನ್ 2-3 ಗೋಲುಗಳಿಂದ ಸೋಲುಂಡಿತು. ಅಭಿಮಾನಿಗಳು ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದರೆ, ಆಟಗಾರರು ಡ್ರೆಸ್ಸಿಂಗ್ ಕೊಠಡಿಯನ್ನು ಸ್ವಚ್ಛಗೊಳಿಸಿದ್ದೂ ಅಲ್ಲದೇ ಕೊಠಡಿಯಲ್ಲಿ 'ಧನ್ಯವಾದಗಳು' ಎಂಬ ಪತ್ರ ಇಟ್ಟು ತವರಿಗೆ ಮರಳಿದ್ದಾರೆ.

Next Story

RELATED STORIES