Top

ಭೀಮಾತೀರದ ಹತ್ಯೆ ಪ್ರಕರಣ : ಭೈರಗೊಂಡ ಶರಣಾಗುವ ಸಾಧ್ಯತೆ

ವಿಜಯಪುರ : ಭೀಮಾತೀರದ ಹಂತಕ ಗಂಗಾಧರ ಚಡಚಣ ನಿಗೂಡ ಹತ್ಯೆಯ ಪ್ರಮುಖ ಆರೋಪಿ ಮಹಾದೇವ ಬೈರಗೊಂಡ ಇಂದು‌ ಇಂಡಿ ಕೋರ್ಟಗೆ ಶರಣಾಗುವ‌ ಸಾಧ್ಯತೆ ಇದೆ ಎನ್ನಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗಂಗಾಧರ ಚಡಚಣ ನಾಪತ್ತೆ ಪ್ರಕರಣ ಕ್ಕೆ ಸಂಬಂಧಿಸಿದಂತೆ ಸಿಐಡಿ ಪೋಲಿಸರ ತನಿಖೆ ನಡೆಸುತ್ತಿದ್ದಾರೆ.

ಇಲ್ಲಿಯವರೆಗೆ ಒಂಬತ್ತು ಆರೋಪಿಗಳು ಬಂಧನವಾಗಿದೆ. ಆದರೆ ಭೈರಗೊಂಡ ಮಾತ್ರ‌ ಪರಾರಿಯಾಗಿದ್ದು. ವಿಜಯಪುರ ಜಿಲ್ಲಾ ಕೊರ್ಟನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ನಿನ್ನೆ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು.. ಈ ಹಿನ್ನಲೆ ಸಿಐಡಿ ಪೋಲಿಸರು ಭೈರಗೊಂಡ ಬಂಧನಕ್ಕೆ ಬಲೆ ಬಿಸಿದ್ದಾರೆ. ಇಂಡಿ ಕೋರ್ಟಗೆ ಶರಣಾಗುವ ಹಿನ್ನಲೆ ಕೊರ್ಟ ಸುತ್ತಮುತ್ತ ಭಿಗಿ ಪೋಲಿಸ್ ಬಂದೊಬಸ್ತ್ ಮಾಡಲಾಗಿದೆ.

Next Story

RELATED STORIES