Top

"ಬೆಂಗಳೂರು ಕವಿವೃಕ್ಷ ಬಳಗ"ದಿಂದ ಉದಯೋನ್ಮುಖ ಲೇಖಕರ ಪುಸ್ತಕ ಬಿಡಗಡೆ

ಬೆಂಗಳೂರು ಕವಿವೃಕ್ಷ ಬಳಗದಿಂದ ಉದಯೋನ್ಮುಖ ಲೇಖಕರ ಪುಸ್ತಕ ಬಿಡಗಡೆ
X

ಬೆಂಗಳೂರು :- ಬೆಂಗಳೂರು ಕವಿವೃಕ್ಷ ಬಳಗವು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪುಸ್ತಕ ಬಿಡುಗಡೆ ಮತ್ತು ರಾಜ್ಯ ಮಟ್ಟದ ಕವಿಗೊಷ್ಟಿಯನ್ನು ಆಯೋಜಿಸಲಾಗಿತ್ತು. ಬೆಂಗಳೂರು ಕವಿವೃಕ್ಷ ಬಳಗವು ರಾಜ್ಯದ ವಿವಿಧ ಭಾಗಗಳಲ್ಲಿರುವ ಉದಯೋನ್ಮುಖ ಲೇಖಕರನ್ನು ಗುರುತಿಸಿ ಅವರ ಕೃತಿಗಳ ಲೋಕಾರ್ಪಣೆಗೆ ವೇದಿಕೆಯನ್ನು ಕಲ್ಪಿಸಿ ಎಲ್ಲಾ ಲೇಖಕರಿಗೆ ಗೌರವ ಪ್ರಶಸ್ತಿಗಳೊಡನೆ ಸನ್ಮಾನಿಸಲಾಯಿತು.

ಒಟ್ಟು ಹದಿನೇಳು ಕೃತಿಗಳು ಲೋಕಾರ್ಪಣೆಗೊಂಡಿದ್ದು ಈ ಕಾರ್ಯಕ್ರಮದ ವಿಶೇಷ. ಹಿರಿಯ ಸಾಹಿತಿಗಳಾದ ಪ್ರೊ.ದೊಡ್ಡರಂಗೇ ಗೌಡರು ಮತ್ತು ದೂರದರ್ಶನದ ಹಾಸ್ಯ ವಾಗ್ಮಿಗಳಾದ ಎಂ.ಎಸ್. ನರಸಿಂಹ ಮೂರ್ತಿಗಳಂತಹ ಸಾಹಿತ್ಯ ದಿಗ್ಗಜರುಗಳ ಸಮ್ಮುಖದಲ್ಲಿ ಈ ಹದಿನೈದು ಕೃತಿಗಳು ಲೋಕಾರ್ಪಣೆಯಾದವು.

ಎನ್.ಶಂಕರ ರಾವ್‌ರವರ ಭಾವ ಸಂಗಮ (ಕವನ ಸಂಕಲನ), ಶೈಲಾ ಜಯ ಕುಮಾರ್‌ರವರ ಅಹಲ್ಯಾಂತರಂಗ (ಕವನ ಸಂಕಲನ), ಪ್ರಕಾಶ್ ಎನ್ ಜಿಂಗಾಡೆ ಅವರ ಇಬ್ಬನಿಯಲಿ ಅವಳ ಕಂಡಾಗ (ಕಥಾ ಸಂಕಲನ), ಲಾವಣ್ಯ ಸಿದ್ಧೇಶ್ವರ್ ಅವರ ಕಪ್ಪು ಚುಕ್ಕಿ (ಕಥಾ ಸಂಕಲನ), ಸುಮಿತ್ರ ಎಸ್ ಮನಸ್ವಿನಿರವರ ಮನಸುಗಳ ಮದುವೆ (ಕಾದಂಬರಿ), ಸುರೇಶ್ ನೇರ್ಲಿಗಿರವರ ಭಾವ ಕೇತನ (ಕವನ ಸಂಕಲನ), ಮಾನಸ ಎನ್ ಗೋವರ್ಧನ್ ಮನ್ವಂತರಂಗ (ಕವನ ಸಂಕಲನ), ಪಕ್ಕೀರಪ್ಪ ತಾಳಗುಂದರವರ ದಿಬ್ಬಣ (ಕವನ ಸಂಕಲನ) ಬಿಡುಗಡೆಯಾದವು.

ಅಲ್ಲದೇ., ಕೆ,ಪಿ ಸತ್ಯ ನಾರಾಯಣ - ಚುರುಮುರಿ (ಹಾಸ್ಯ ಲೇಖನ) ಕೋಠೋಜಿ ರಾವ್ಕ ದಳಿದ ಕರ್ಪೂರ (ಕವನ ಸಂಕಲನ) ನಾಗೇಶ್ ಮೈಸೂರು ಮನದಿಂಗಿತಗಳ ಸ್ವಗತ ಮತ್ತು ಅರ್ಧ ರಾತ್ರಿಯ ಆಲಾಪಗಳು (ಕವನ ಸಂಕಲನಗಳು), ಪ್ರಶಾಂತ (ಪ್ರಭು) ಗೊಂಧಳಿ ಮನದಲಿ ಮೂಡಿ ಬಂದ (ಕವನ ಸಂಕಲನ), ಕಿಶೋರ್ ಕುಮಾರ್ ತಾವೂರ್ ರವರ ಭಾವದ ಬನದಲ್ಲಿ (ಕವನ ಸಂಕಲನ), ಎನ್ ಮುರುಳಿಧರ್ ಸ್ವಯಂಕೃತ ಅಪರಾಧ (ಕಥಾ ಸಂಕಲನ) ಮತ್ತು ಪ್ರೀತಿಯ ಸುತ್ತ (ಕಾದಂಬರಿ), ಪ್ರಕಾಶ್ ಜಿಂಗಾಡೆಯವರ ಸಂಪಾದನೆಯಲ್ಲಿ ಕವಿವೃಕ್ಷ ಬಳಗದ ವಿವಿದ ಲೇಖಕರು ಬರೆದ ಕವಿ ಮನದ ಕುಸುಮಗಳು ಮತ್ತು ಕಥಾ ವೃಕ್ಷ ಕೃತಿಗಳು ಲೋಕಾರ್ಪಣೆಯಾದವು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಾಹಿತಿಗಳಾದ ದೊಡ್ಡ ರಂಗೇ ಗೌಡರು ಕನ್ನಡ ಭಾಷೆಯ ಬಗ್ಗೆ ತಾವು ಮಾಡಿದ ಸಂಶೋದನೆಯನ್ನು ಕುರಿತು ಮಾತನಾಡಿದರು. ಕ್ರಿ,ಪೂ, ಮೂರನೇ ಶತಮಾನದಲ್ಲೇ ಈಜಿಫ್ಟಿನ ನೈಲ್ ನದಿಯ ಪ್ರದೇಶದಲ್ಲಿ ಕನ್ನಡದ ಮೂಲ ಲಿಪಿ ಇರುವುದನ್ನು ಪತ್ತೆ ಹಚ್ಚಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಟ್ಟ ಅನುಭವವನ್ನು ಹಂಚಿಕೊಂಡರು.

ಸಾಹಿತಿಗಳು ಮತ್ತು ದೂರದರ್ಶನದ ಹಾಸ್ಯ ವಾಗ್ಮಿಗಳೆಂದೇ ಹೆಸರಾದ ಎಂ.ಎಸ್.ನರಸಿಂಹಮೂರ್ತಿಯವರು ಸರ್ಕಾರ ಮಾಡಬೇಕಾದ ಈ ಕೆಲಸವನ್ನು ಬಳಗ ಮಾಡುತ್ತಿದೆ ಎಂದು ಹೇಳಿ, ಬೆಂಗಳೂರು ಕವಿವೃಕ್ಷ ಬಳಗದ ಅಪರೂಪದ ಸಾಹಿತ್ಯ ಸಂಘಟನೆಯನ್ನು ಹೊಗಳಿದರು. ತಮ್ಮ ಹಾಸ್ಯ ಮಾತುಗಳಿಂದಲೇ ಸಭಿಕರನ್ನು ರಂಜಿಸಿದರು.

ಬೆಂಗಳೂರು ಕವಿ ವೃಕ್ಷ ಬಳಗದ ಅಧ್ಯಕ್ಷರಾದ ಪ್ರಕಾಶ್ ಎನ್ ಜಿಂಗಾಡೆಯವರು ಪ್ರತಿಭಾವಂತ ಲೇಖಕರ ಶೋಧ ಮತ್ತು ಪುರಸ್ಕಾರವೇ ನಮ್ಮ ಬಳಗದ ಉದ್ದೇಶ ಎಂದು ಪ್ರೋತ್ಸಾಹದ ಮಾತುಗಳನ್ನು ಆಡಿದರು. ಗೌರವಾಧ್ಯಕ್ಷರಾದ ಶಶಿಕಾಂತ್‌ ಬಳಗದ ಆಶಯವನ್ನು ಹೇಳಿ ಎಲ್ಲಾ ಲೇಖಕರ ಪ್ರತಿಭೆಯನ್ನು ಶ್ಲಾಘಿಸಿದರು. ರಾಜ್ಯಾಧ್ಯಕ್ಷರಾದ ವೀರೇಶ್ ಹಿತ್ತಲಮನಿಯವರು ಸಾಹಿತ್ಯ ಸಂಘಟನೆಗಳ ಸಾಧಕ ಭಾಧಕಗಳ ಬಗ್ಗೆ ಮಾತನಾಡಿದರು. ವೇದಿಕೆಯ ಮೇಲಿರುವ ಎಲ್ಲಾ ಅತಿಥಿಗಳು ಪುಸ್ತಕಗಳ ವಿಮರ್ಶೆ ಮಾಡಿದರು. ಅತಿಥಿಗಳಾದ ಸುಶಿಲೇಂದ್ರ ಕುಂದರಗಿ, ಹರಿ ಪ್ರಸಾದ್, ಸಂತೋಷ್ ಕುಮಾರ್ ಮೆಹಂದಳೆ, ನಿತಿನ್ ನೀಲಕಂಠೆ, ಆರ್ ಸತೀಶ್, ಮೂರ್ತಿ ಬಿ.ಎನ್, ಅಕ್ಷಯ್ ಬಾಳೆಗೆರೆ, ಉದಾಂತ ಶಿವಕುಮಾರ್, ಚಾಂದ್ ಪಾಶ, ಡಾಕೇಶ್ ತಾಳಗುಂದ, ಮುದಲ್ ವಿಜಯ್, ಕುಮಾರ ಸ್ವಾಮಿ, ಅಜಯ್ ಕುಮಾರ್ ಪಾಲ್ಗೊಂಡು ಪುಸ್ತಕ ಪರಿಚಯದ ಜೊತೆಗೆ ಕನ್ನಡ ಸಾಹಿತ್ಯದ ಬೆಳವಣಿಗೆಯ ಬಗ್ಗೆ ತಿಳಿಸಿಕೊಟ್ಟರು.

ಇದೇ ವೇಳೆ ಲೋಕಾರ್ಪಣೆಯ ಜೊತೆ ಜೊತೆಗೆ ರಾಜ್ಯಮಟ್ಟದ ಕವಿಗೋಷ್ಟಿಯ ಕಾರ್ಯಕ್ರಮವು ನಡೆಯಿತು. ಕರ್ನಾಟಕದ ಮೂಲೆ ಮೂಲೆಯಿಂದ ಉದಯೋನ್ಮುಖ ಕವಿಗಳು ಸಾಹಿತ್ಯ ಪರಿಷತ್ತಿನಲ್ಲಿರುವ ಈ ಕಾರ್ಯಕ್ರಮಕ್ಕೆ ಬಂದು ತಮ್ಮ ಪ್ರತಿಭೆಯನ್ನು ಕವನ ವಾಚನದ ಮೂಲಕ ತೋರಿಸಿಕೊಟ್ಟರು. ಕವಿಗೋಷ್ಟಿಯ ತೀರ್ಪುಗಾರರಾದ ಬೊಮ್ಮಣ್ಣ ದಿಬ್ಬೂರು, ಖುಷಿ ಕೃಷ್ಣ, ಚಂದ್ರ ಶೇಖರ ಮಾಡಲಗೆರಿ, ಉತ್ತಮ ಕವನ ವಾಚನಕ್ಕೆ ಬಹುಮಾನ ನೀಡಿ ಗೌರವಿಸಿದರು. ಎಲ್ಲಾ ಉಗಯೋನ್ಮುಖ ಲೇಖಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Next Story

RELATED STORIES