Top

ಉಪ್ಪಿ ಬರ್ತ್​ ಡೇಗೆ ‘ಅಧಿರ’ ಗ್ರ್ಯಾಂಡ್ ಲಾಂಚ್

ಉಪ್ಪಿ ಬರ್ತ್​ ಡೇಗೆ ‘ಅಧಿರ’ ಗ್ರ್ಯಾಂಡ್ ಲಾಂಚ್
X

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5

ಇತ್ತೀಚೆಗೆ ಸ್ಯಾಂಡಲ್​ವುಡ್​ನ ಬಿಗ್ ಸ್ಟಾರ್ಸ್​ ಐತಿಹಾಸಿಕ ಸಿನಿಮಾಗಳತ್ತ ಮುಖ ಮಾಡ್ತಿದ್ದಾರೆ. ರೊಟೀನ್ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಈ ರೀತಿ ವೆರೈಟಿ ಕಥಾನಕಗಳಲ್ಲೂ ನಟಿಸೋ ಮೂಲಕ ಮೊನಾಟನಸ್ ಬ್ರೇಕ್ ಮಾಡ್ತಿದ್ದಾರೆ. ಸದ್ಯ ದರ್ಶನ್ ಕುರುಕ್ಷೇತ್ರದ ಬೆನ್ನಲ್ಲೇ ಕನ್ನಡದಲ್ಲಿ ಮತ್ತೊಂದು ಮಹಾ ದೃಶ್ಯಕಾವ್ಯಕ್ಕೆ ಸಕಲ ಸಿದ್ದತೆ ನಡೀತಿದೆ. ಇಷ್ಟಕ್ಕೂ ಯಾವುದಾ ಸಿನಿಮಾ..? ಹೀರೋ ಯಾರು ಅಂತೀರಾ..? ಮುಂದೆ ಓದಿ..

ಪೀರಿಯಾಡಿಕ್ ಚಿತ್ರಗಳತ್ತ ಸ್ಯಾಂಡಲ್​ವುಡ್ ಸ್ಟಾರ್ಸ್​..!!

ಪಕ್ಕದ ಟಾಲಿವುಡ್ ಅಂಗಳದಲ್ಲಿ ಬಾಹುಬಲಿ ಸಿನಿಮಾ ಮಾಡಿದ ಮೇನಿಯಾಗೆ ವಿಶ್ವ ಸಿನಿದುನಿಯಾ ಸ್ಟನ್ ಆಗಿದೆ. ಇದೀಗ ಆ ಸಿನಿಮಾ ಅಂತಹದ್ದೇ ಪೀರಿಯಾಡಿಕ್ ಮತ್ತು ಹಿಸ್ಟಾರಿಕಲ್ ಸಿನಿಮಾಗಳ ನಿರ್ಮಾಣಕ್ಕೆ ಸ್ಫೂರ್ತಿಯ ಸೆಲೆ ಆಗಿ ಪರಿಣಮಿಸಿದೆ.

ಮಹಾ ದೃಶ್ಯಕಾವ್ಯ ಕುರುಕ್ಷೇತ್ರ ದರ್ಶನ್ 50ನೇ ಚಿತ್ರ..!

ಸದ್ಯ ಕನ್ನಡದಲ್ಲೂ ಸಹ ಆ ಟ್ರೆಂಡ್ ಶುರು ಆಗ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್​ರ 50ನೇ ಸಿನಿಮಾ, ಹಸ್ತಿನಾಪುರದ ಅಧಿಕಾರಕ್ಕಾಗಿ ನಡೆದ ಕೌರವ ಮತ್ತು ಪಾಂಡವರ ನಡುವಿನ ಕುರುಕ್ಷೇತ್ರ. ಯೆಸ್, ಬಹುಕೋಟಿ ವೆಚ್ಚದಲ್ಲಿ ತಯಾರಾಗ್ತಿರೋ ಕುರುಕ್ಷೇತ್ರ, ಸ್ಯಾಂಡಲ್​ವುಡ್ ಅಂಗಳದಲ್ಲಿ ಸಾರ್ವಕಾಲಿಕ ದಾಖಲೆ ಬರೆಯೋ ಧಾವಂತದಲ್ಲಿದೆ.

ದರ್ಶನ್ ಹಾದಿ ಹಿಡಿದ ಉಪೇಂದ್ರ ಮಾಡಿದ್ದೇನು..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ರೀತಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಇದೀಗ ಪೀರಿಯಾಡಿಕ್ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಹೌದು, ಉಪ್ಪಿ ಬಹುನಿರೀಕ್ಷಿತ 50ನೇ ಸಿನಿಮಾ ಇದಾಗಲಿದ್ದು, ಸದ್ದಿಲ್ಲದೆ ಅದ್ರ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿವೆ.

ಸದ್ದಿಲ್ಲದೆ ನಡೀತಿದೆ ಉಪ್ಪಿ 50ನೇ ಚಿತ್ರದ ತಯಾರಿ..!

ಸದ್ಯ ಐ ಲವ್ ಯು ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇರೋ ಉಪೇಂದ್ರ, ಸಂತು ಅನ್ನೋ ಹೊಸ ಪ್ರತಿಭೆಯಿಂದ ಅಧಿರ ಅನ್ನೋ ಕಥೆ ಕೇಳಿದ್ದಾರೆ. ಅಷ್ಟೇ ಅಲ್ಲ, ಅಧಿರ ಅಂತ ಒಂದು ಟೀಸರ್ ಮಾಡಿಕೊಂಡಿದ್ದ ಸಂತು, ಅದನ್ನ ಉಪ್ಪಿಗೆ ತೋರಿಸಿದಾಗ ಉಪೇಂದ್ರ ಅಕ್ಷರಶಃ ಥ್ರಿಲ್ ಆಗಿಬಿಟ್ಟಿದ್ದಾರೆ.

‘ಅಧಿರ’ ಬಹದ್ದೂರ್ ನಿರ್ಮಾಪಕರಿಂದ ಅದ್ಧೂರಿ ನಿರ್ಮಾಣ

ಯೆಸ್... ಸಿನಿಮಾಗೆ ಅಧಿರ ಅಂತ ಟೈಟಲ್ ಇಟ್ಟಿರೋ ಚಿತ್ರತಂಡ, ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಅಧಿರ ಅಂದ್ರೆ ಮಿಂಚು ಎಂದರ್ಥ. ಮಿಂಚಿನಂತಹ ತರುಣನೊಬ್ಬನ ಕಥೆ ಆಧಾರಿತ ಚಿತ್ರ ಇದಾಗಿದ್ದು, ಉಪ್ಪಿ ಇಲ್ಲಿ ಅಧಿರನಾಗಿ ಕಮಾಲ್ ಮಾಡಲಿದ್ದಾರೆ.

ದನಕಾಯೋನು, ಬಹದ್ದೂರ್ ಸಿನಿಮಾಗಳ ನಿರ್ಮಾಪಕ ಕನಕಪುರ ಶ್ರೀನಿವಾಸ್ ಈ ಸಿನಿಮಾನ ನಿರ್ಮಾಣ ಮಾಡ್ತಿದ್ದು, ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಅಧಿರ ತಯಾರಾಗಲಿದೆ. ಅಂದಹಾಗೆ ಉಪೇಂದ್ರ ಈ ಹಿಂದೆ ಇದೇ ಕನಕಪುರ ಶ್ರೀನಿವಾಸ್ ಜೊತೆ ಟೋಪಿವಾಲ ಸಿನಿಮಾ ಮಾಡಿದ್ರು. ಇದೀಗ ಮತ್ತೊಮ್ಮೆ ಈ ಜೋಡಿ ಒಂದಾಗ್ತಿದ್ದು, ಮೋಡಿ ಮಾಡೋ ಸೂಚನೆ ಕೊಟ್ಟಿದೆ.

ಮುಹೂರ್ತದ ದಿನವೇ ಉಪ್ಪಿಗೆ ಟೀಸರ್ ಗಿಫ್ಟ್

ಸೆಪ್ಟೆಂಬರ್ 18ರಂದು ನಡೆಯಲಿರೋ ಉಪೇಂದ್ರ ಬರ್ತ್​ ಡೇ ದಿನ ಅಧಿರ ಸಿನಿಮಾ ಗ್ರ್ಯಾಂಡ್ ಲಾಂಚ್ ಆಗಲಿದೆ. ಇನ್ನು ಅದೇ ದಿನವೇ ಸಿನಿಮಾದ ಟೀಸರ್ ಕೂಡ ರಿವೀಲ್ ಮಾಡಲಿದೆಯಂತೆ ಚಿತ್ರತಂಡ. ಅದಕ್ಕೆ ಅಂತಲೇ ಟೀಂ ಅಧಿರ, ಇದೇ ತಿಂಗಳಾಂತ್ಯಕ್ಕೆ ಟೀಸರ್​ಗಾಗಿ ಒಂದಷ್ಟು ದಿನ ಶೂಟಿಂಗ್ ಕೂಡ ಮಾಡಲಿದಯಂತೆ.

ಕಠಾರಿ ವೀರ ಸುರ ಸುಂದರಾಂಗಿ ಸಿನಿಮಾ ಮೂಲಕ ಪೀರಿಯಾಡಿಕ್ ಪಾತ್ರಗಳಿಗೂ ಸೈ ಅನಿಸಿಕೊಂಡಿದ್ದ ಉಪೇಂದ್ರ, ಇದೀಗ 50ನೇ ಸಿನಿಮಾಗಾಗಿ ಸಜ್ಜಾಗ್ತಿದ್ದಾರೆ. ಅದೇನೇ ಇರಲಿ, ಸಿನಿಮಾದಿಂದ ದೂರ ಆಗಿ ಪ್ರಜಾಕೀಯ ಮಾಡ್ತೀನಿ ಅಂತಿದ್ದ ಉಪ್ಪಿ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಕಮಿಟ್ ಆಗ್ತಿರೋದು ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ.

Next Story

RELATED STORIES