Top

ಪೊಲೀಸರ ಮನೆಯನ್ನೆ ನಂದು ಅಂದ್ರು ಮಹಿಳೆಯರು.!!

ಪೊಲೀಸರ ಮನೆಯನ್ನೆ ನಂದು ಅಂದ್ರು ಮಹಿಳೆಯರು.!!
X

ಮೈಸೂರು : ನಿಮಗೆ ಮನೆ ಅಲಟ್ ಆಗಿದ್ರೆ, ಆಗಾಗ, ಒಮ್ಮೊಮ್ಮೆ ಹೋಗಿ ನಿಮ್ಮ ಮನೆ ನೋಡ್ಕೊಂಡು ಬನ್ನಿ. ಇಲ್ಲ ಅಂದ್ರೆ ಬೇರೆ ಅವ್ರು ನಿಮ್ಮ ಮನೆಗೆ ಬಂದು ಇದು ನಮ್ದೆ ಮನೆ ಅಂತ ಜಾಂಡಾ ಹೂಡ್ತಾರೆ. ಅರೆ ಹೌದಾ ಅಂತ ಹುಬ್ಬೇರಿಸ್ಬೇಡಿ. ಯಾಕಂದ್ರೆ ಮೈಸೂರಿನಲ್ಲಿ ಪೊಲೀಸರಿಗೆ ಅಲಟ್ ಆಗಿದ್ದ ಮನೆಗೆ ನುಗ್ಗಿ ಮಹಿಳೆಯರು ಈ ಮನೆ ನಮ್ದು ಎಂದಿದ್ದಾರೆ.

ಹೌದು, ನಿನ್ನೆ ಸಂಜೆ ಏಕಾಏಕಿ ಮೈಸೂರಿನ ಹೂಟಗಳ್ಳಿಯ ಪೊಲೀಸ್ ಕ್ವಾಟ್ರಸ್ಗೆ ಐದಾರು ಮಹಿಳೆಯರು ಬಂದಿದ್ದಾರೆ. ಬಂದ ಕೂಡಲೇ ಈ ಮನೆ ನನ್ನದೆಂದು ಹೇಳಿಕೊಂಡು ಸಾರಿಸಿ-ಗೂಡಿಸಿ ಕ್ಲೀನ್ ಮಾಡಿಕೊಂಡು ಕರ್ಟನ್ಗಳನ್ನ ಹಾಕಿಕೊಂಡು ತಮ್ಮ ಸ್ವಂತ ಮನೆಯಂತೆ ಫಿಲ್ ಮಾಡಿದ್ದಾರೆ. ಆದ್ರೆ, ಈ ಮನೆಗಳು ಪೊಲೀಸ್ರಿಗೆ ನೀಡಿರುವ ಮನೆಗಳಾಗಿವೆ.

ಈ ವೇಳೆ ಅಕ್ಕಪಕ್ಕದ ನಿವಾಸಿಗಳು ಯಾರೆಂದು ಕೇಳಿದಾಗ ಬಾಲಣ್ಣ ರೇವಣ್ಣ ನಮಗೆ ಈ ಮನೆಯನ್ನ ಅಲಟ್ ಮಾಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸ್ಥಳೀಯರಿಗೆ ಅನುಮಾನ ಬಂದು ವಿಜಯನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದು ವಿಚಾರಿಸಿದ ಪೊಲೀಸ್ರಿಗೆ ಇದು ನಮ್ಮ ಮನೆ, ನಾವು ಇಲ್ಲೇ ಇರುತ್ತೇವೆ ಎಂದು ಹಠ ಹಿಡಿದಿದ್ದಾರೆ. ಎಷ್ಟೇ ಹೇಳಿದ್ರು ಕೇಳದಿದ್ದಾಗ ಬಾಲು, ನಾಗರಾಜ್, ರೇವಣ್ಣ ಸೇರಿದಂತೆ ಅತಿಕ್ರಮ ಪ್ರವೇಶ ಮಾಡಿದ ಮಹಿಳೆಯರನ್ನು ಪೊಲೀಸ್ರು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಇನ್ನೂ ಈ ಬಾಲು ಹಾಗೂ ಸಹಚರರು, ಹಲವು ವರ್ಷಗಳಿಂದ ಮಹಿಳೆಯರಿಗೆ ಮನೆ ಕೊಡಿಸುವುದಾಗಿ ವಂಚಿಸುತ್ತ ತಿರುಗಾಡುತ್ತಿದ್ರು. ಹೀಗೆ ಒಮ್ಮೆ ಹೂಟಗಳ್ಳಿಗೂ ಬಂದ ವೇಳೆ ಮನೆಗಳು ಪಾಳು ಬಿದ್ದಿರುವ ಪೊಲೀಸ್‌ರ ಮನೆಗಳನ್ನು ನೋಡಿದ್ದಾರೆ. ಹೀಗೆ ನೋಡಿದ ಭೂಪರು, ಪೊಲೀಸರ ಮನೆಗಳನ್ನೆ ಮಹಿಳೆಯರಿಗೆ ಕೊಡಿಸಬಹುದೆಂದು, ಮಹಿಳೆಯರನ್ನ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ.

ಆದ್ರೆ, ಪೊಲೀಸರಿಗೆ ನೀಡಲು ಇದ್ದ ಮನೆಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸದ ಹಿನ್ನಲೆಯಲ್ಲಿ ಹಂಚಿಕೆ ಮಾಡಿದ್ರು ಕೂಡ ಪೊಲೀಸ್ರು, ಇಲ್ಲಿಗೆ ಆಗಮಿಸಲು ಹಿಂದೇಟು ಹಾಕ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಿಕ್ಕ-ಸಿಕ್ಕವರು ಬಂದು ಇದು ನಮ್ಮ ಮನೆ, ನಮ್ಮ ಮನೆ ಎಂದು ಮನೆಗಳನ್ನ ಅತಿಕ್ರಮ ಪ್ರವೇಶ ಮಾಡ್ತಿದ್ದಾರೆ ಅನ್ನೋದು ಸ್ಥಳೀಯ ಮಾತು..

ಸದ್ಯ ಮಹಿಳೆಯರಿಗೆ ಮನೆ ಕೊಡಿಸ್ತೀನಿ ಅಂತ ಬಂದವ್ರು ಇದೀಗಾ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಮನೆ ಖಾಲಿ ಇದೆ ಅಂತ ಗೊತ್ತಾದ್ರೆ, ಇಂತಹ ಖದೀಮರು ನಿಮ್ಮ ಖಾಲಿ ಮನೆಗೂ ಬಂದು ಬಿಟ್ಟರೂ ಅಚ್ಚರಿ ಇಲ್ಲ. ಸೋ ನಿಮಗೆ ಅಲಟ್ ಆಗಿರೋ ಮನೆ ಬಗ್ಗೆ ನೀವೂ ಅಲರ್ಟ್‌ ಆಗಿರಿ.

ವರದಿ : ಸುರೇಶ್, ಟಿವಿ5 ಮೈಸೂರು

Next Story

RELATED STORIES