Top

ಗಾಯಕನ ತಂದೆಗೆ ಹೊಡೆದ ಕ್ರಿಕೆಟಿಗನ ಪತ್ನಿ..!

ಗಾಯಕನ ತಂದೆಗೆ ಹೊಡೆದ ಕ್ರಿಕೆಟಿಗನ ಪತ್ನಿ..!
X

ಮುಂಬೈ: ಬಾಲಿವುಡ್ ಗಾಯಕ ಅಂಕಿತ್ ತಿವಾರಿ ತಂದೆಯ ಮೇಲೆ, ಕ್ರಿಕೆಟಿಗ ವಿನೋದ್ ಕಾಂಬ್ಳೆ ಪತ್ನಿ ಹಲ್ಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಅಂಕಿತ್ ತಿವಾರಿ ತಂದೆ ರಾಜೇಂದ್ರ ಕುಮಾರ್ ತಿವಾರಿ(50) ತಮ್ಮ ಮೊಮ್ಮಗಳೊಂದಿಗೆ ಮುಂಬೈನ ಗುರ್‌ಗಾಂವ್‌ನಲ್ಲಿರುವ ಮಾಲ್‌ವೊಂದಕ್ಕೆ ಭೇಟಿ ನೀಡಿದ್ದರು. ಇದೇ ಮಾಲ್‌ಗೆ ವಿನೋದ್ ಕಾಂಬ್ಳೆ ಪತ್ನಿ ಸಹ ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದರು. ಈ ವೇಳೆ ರಾಜೇಂದ್ರ ತಿವಾರಿ ಮುಖಕ್ಕೆ ಕಾಂಬ್ಳೆ ಪತ್ನಿ ಹಲ್ಲೆ ನಡೆಸಿದ್ದಾರೆ. ಸರಿಯಾಗಿ ನೋಡಿಕೊಂಡು ನಡಿಯಲಿಕ್ಕೆ ಆಗುವುದಿಲ್ಲವಾ ಎಂದು ಸಿಟ್ಟಾಗಿದ್ದಾರೆ. ಈ ವೇಳೆ ತಿವಾರಿ ಮರುಮಾತನಾಡದೇ ತಮ್ಮ ಮಗ ಅಂಕುರ್ ತಿವಾರಿ ಜೊತೆ ಬಂಗೂರ್ ನಗರ ಪೊಲೀಸ್ ಠಾಣೆಗೆ ಹೋಗಿ ಕಾಂಬ್ಳೆ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ.

ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಬಗ್ಗೆ ತನಿಖೆ ನಡೆಸಿದಾಗ, ಹಲ್ಲೆ ನಡೆಸಿದ್ದು ಕ್ರಿಕೆಟಿಗ ಕಾಂಬ್ಳೆ ಪತ್ನಿ ಎಂದು ತಿಳಿದು ಬಂದಿದೆ. ಇನ್ನು ಆಕೆಗೆ ಈ ಬಗ್ಗೆ ವಿಚಾರಿಸಿದಾಗ, ತಿವಾರಿ ನನ್ನ ಅಂಗಾಂಗ ಅವರಿಗೆ ತಾಕುವಂತೆ ನಡೆದುಕೊಂಡು ಹೋದರು, ಆದ್ದರಿಂದ ನಾನು ಸಿಟ್ಟಿಗೆದ್ದು ಆ ರೀತಿ ಹಲ್ಲೆ ಮಾಡಿದೆ ಎಂದು ಹೇಳಿದ್ದಾರೆ. ಇನ್ನು ಈ ಘಟನೆ ಮಾಲ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನಾಧರಿಸಿ ತನಿಖೆ ನಡೆಸುತ್ತಿದ್ದಾರೆ.

Next Story

RELATED STORIES