Top

ಬಾಹುಬಲಿ-2 ದಾಖಲೆ ಮುರಿದ ಸಂಜು

ಬಾಹುಬಲಿ-2 ದಾಖಲೆ ಮುರಿದ ಸಂಜು
X

ನಟ ಸಂಜಯ್​ ದತ್ ಜೀವನ ಆಧರಿಸಿದ ಸಂಜು ಚಿತ್ರ ಬಿಡುಗಡೆಯಾದ ಮೂರೇ ದಿನದಲ್ಲಿ 120 ಕೋಟಿ ರೂ. ಬಾಚಿಕೊಳ್ಳುವ ಮೂಲಕ ಹಲವು ದಾಖಲೆಗಳನ್ನು ಪುಡಿಗಟ್ಟಿದೆ.

ರಣಭೀರ್ ಕಪೂರ್ ಅಭಿನಯದ ಸಂಜು ಚಿತ್ರ ವೀಕೆಂಡ್​ನಲ್ಲಿ ಅಂದರೆ ಬಿಡುಗಡೆಯಾದ ಮೂರೇ ದಿನದಲ್ಲಿ 120 ಕೋಟಿ ರೂ. ಸಂಗ್ರಹಿಸಿದೆ. ಭಾನುವಾರ ಒಂದೇ ದಿನ 46.71 ಕೋಟಿ ರೂ. ಸಂಗ್ರಹಿಸುವ ಮೂಲಕ ಯಾವುದೇ ಹಿಂದಿ ಚಿತ್ರದ ಒಂದು ದಿನದ ಅತ್ಯಧಿಕ ಗಳಿಕೆ ಎಂಬ ದಾಖಲೆ ಬರೆದಿದೆ. ಬಾಹುಬಲಿ-2 ಚಿತ್ರ ಒಂದೇ ದಿನದಲ್ಲಿ 46.50 ಕೋಟಿ ಸಂಗ್ರಹಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ರಣಭೀರ್ ಕಪೂರ್ ಅಭಿನಯದ ಚಿತ್ರವೊಂದಕ್ಕೆ ದೊರೆತ ಅತೀ ದೊಡ್ಡ ಓಪನಿಂಗ್ ಇದಾಗಿದೆ. ಸಂಜು ಚಿತ್ರ 2018ರ ಅತೀ ದೊಡ್ಡ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಾಗಲೇ ರೇಸ್ -3 ಮತ್ತು ಪದ್ಮಾವತ್ ಚಿತ್ರಕ್ಕೆ ದೊರೆತ ಆರಂಭವನ್ನು ಸಂಜು ಹಿಂದಿಕ್ಕಿದೆ.

Next Story

RELATED STORIES