Top

ದ್ರಾವಿಡ್​, ಪಾಂಟಿಂಗ್​ಗೆ ಐಸಿಸಿ ಆಲ್ ಆಫ್ ಫೇಮ್ ಗೌರವ

ದ್ರಾವಿಡ್​, ಪಾಂಟಿಂಗ್​ಗೆ ಐಸಿಸಿ ಆಲ್ ಆಫ್ ಫೇಮ್ ಗೌರವ
X

ಬ್ಯಾಟ್ ಹಿಡಿದು ಬಂದರೆ ಸಾಕು ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರುಬಿಡುತ್ತಿದ್ದರು. ಇನ್ನು ವಿಕೆಟ್ ಪಡೀಬೇಕು ಅಂದರೆ ಬೌಲರ್​ಗಳು ಬೆವರು ಹರಿಸಲೇಬೇಕು ಎಂದು ಖುಷಿಯಾಗುತ್ತಿದ್ದರು. ಹೀಗಾಗಿಯೇ ಅವರಿಗೆ ನಿರಾಯಸವಾಗಿ ಒಲಿದು ಬಂದಿದ್ದು ಗೋಡೆ ಎಂಬ ಖ್ಯಾತಿ. ಈ ಕೀರಿಟಕ್ಕೆ ಈಗ ಮತ್ತೊಂದು ಗರಿ ಸಿಕ್ಕಿದೆ. ಅದುವೇ ಐಸಿಸಿ ಆಲ್ ಆಫ್ ಫೇಮ್ ಗೌರವ!

ಹೌದು, ಭಾರತ ಕ್ರಿಕೆಟ್ ಮಾತ್ರದಲ್ಲ ಜಾಗತಿಕ ಕ್ರಿಕೆಟ್​ನಲ್ಲಿ ಗೋಡೆ ಎಂದೇ ಖ್ಯಾತರಾದ ಕರ್ನಾಟಕದ ರಾಹುಲ್ ದ್ರಾವಿಡ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಇಂಗ್ಲೆಂಡ್​ನ ವಿಕೆಟ್ ಕೀಪರ್ ಕ್ಲಾರ್ ಟೇಲರ್​ಗೆ ಐಸಿಸಿ ಆಲ್ ಆಫ್ ಫೇಮ್ ಪ್ರಶಸ್ತಿ ಪ್ರಕಟಿಸಿದೆ.

ಈ ಪ್ರಶಸ್ತಿಗೆ ಪಾತ್ರರಾದ ಕೇವಲ 5ನೇ ಭಾರತೀಯ ದ್ರಾವಿಡ್. ಪಾಂಟಿಂಗ್ 25ನೇ ಆಸ್ಟ್ರೇಲಿಯನ್​. ಮಹಿಳಾ ಕ್ರಿಕೆಟ್​ನ ಅಭೂತಪೂರ್ವ ಆಟಗಾರ್ತಿ ಟೇಲರ್ ಈ ಪ್ರಶಸ್ತಿಗೆ ಪಾತ್ರರಾದ ವಿಶ್ವದ 7ನೇ ಹಾಗೂ ಇಂಗ್ಲೆಂಡ್​ನ ಮೂರನೇ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಕ್ರಿಕೆಟ್​ಗೆ ಕಾಲಿಟ್ಟಾಗ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಸಾಲಿನಲ್ಲಿ ನಾನು ಕಾಣಿಸಿಕೊಳ್ಳಬೇಕು ಎಂಬುದು ದೊಡ್ಡ ಕನಸಾಗಿತ್ತು. ಈ ಪ್ರಶಸ್ತಿಯೊಂದಿಗೆ ಈ ಗೌರವ ಸಿಕ್ಕಿರುವುದು ಹೆಮ್ಮೆ ಎನಿಸುತ್ತಿದೆ. ಕನಸು ನನಸಾದಂತಹ ಭಾವನೆ ಬರುತ್ತಿದೆ ಎಂದು ಪ್ರಶಸ್ತಿ ಲಭಿಸಿರುವುದಕ್ಕೆ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.

Next Story

RELATED STORIES