Top

ಅರ್ಚಕರಿಗೇ ಮಂಗಳಾರತಿ ಎತ್ತಿದ ರೇವಣ್ಣ-TV5 Exclusive

ಅರ್ಚಕರಿಗೇ ಮಂಗಳಾರತಿ ಎತ್ತಿದ ರೇವಣ್ಣ-TV5 Exclusive
X

ಹಾಸನ: ನಮ್ಮ ರಾಜ್ಯ ಸರ್ಕಾರದಲ್ಲಿ ವಾಸ್ತು ನೋಡಿ ಹೆಜ್ಜೆ ಇಡೋ ಸಚಿವರು ಯಾರೆಂದು ಕೇಳಿದ್ರೆ, ಥಟ್ ಅಂತಾ ನೆನಪಿಗೆ ಬರೋದು ಸಚಿವ ರೇವಣ್ಣ. ಬಹುಮತ ಸಾಬೀತು ಮಾಡುವ ವೇಳೆ, ಬರೀಗಾಲಲ್ಲಿ ಬಂದಿದ್ದ ರೇವಣ್ಣ, ಅಣ್ಣ ಕುಮಾರಸ್ವಾಮಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಮುಹೂರ್ತ ಸರಿಯಿಲ್ಲವೆಂದು, ಸ್ವಲ್ಪ ಲೇಟಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವಂತೆ ಸಲಹೆ ನೀಡಿದ್ರು. ಇದೀಗ ಗುದ್ದಲಿ ಪೂಜೆ ವೇಳೆ ಅರ್ಚಕರು ಸರಿಯಾದ ದಿಕ್ಕಿಗೆ ಪಾಯ ತೆಗೆದಿಲ್ಲವೆಂದು ಅರ್ಚಕರಿಗೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹಾಸನದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ವಿದ್ಯಾರ್ಥಿನಿಯರ ಹಾಸ್ಟೇಲ್ ಶಂಕು ಸ್ಥಾಪನೆ ವೇಳೆ ಅರ್ಚಕರಿಗೇ ಮಹಾಮಂಗಳಾರತಿ ಮಾಡಿದ್ದಾರೆ.ಯಾರು ಈ ಅರ್ಚಕರನ್ನು ಕರೆಸಿದ್ದು, ಗುದ್ದಲಿ ಪೂಜೆ ವೇಳೆ ಯಾವ ದಿಕ್ಕಿಗೆ ಪಾಯ ತೆಗಿಸಬೇಕು ಎಂಬುದೇ ಇವರಿಗೆ ಗೊತ್ತಿಲ್ಲ. ಅನುಭವಿ ಅರ್ಚಕರನ್ನು ಕರೆಸುವುದು ಬಿಟ್ಟು, ಇವರನ್ನು ಯಾಕೆ ಕರೆಸಿದ್ದೀರಿ ಎಂದು ವಾಸ್ತು ಪಾಠ ಮಾಡಿದ್ದಾರೆ. ಕೊನೆಗೆ ರೇವಣ್ಣ ಪೂಜೆ ಮಾಡುವ ದಿಕ್ಕನ್ನೇ ಬದಲಿಸಿದ್ದಾರೆ.

https://www.youtube.com/watch?v=3mvPTRkJ3E8&feature=youtu.be

Next Story

RELATED STORIES