Top

ದಯಾಮರಣ ಕೋರಿ ಆರು ರೈತರಿಂದ ಸಾಮೂಹಿಕ ಅರ್ಜಿ

ದಯಾಮರಣ ಕೋರಿ ಆರು ರೈತರಿಂದ ಸಾಮೂಹಿಕ ಅರ್ಜಿ
X

ಬೆಳಗಾವಿ : ಸಚಿವರ ಒಡೆತನದ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಾಕಿ ಹಣ ನೀಡದ್ದರಿಂದ ಬೇಸತ್ತಿರುವ ಆರು ರೈತರು, ದಯಾಮರಣ ಕೋರಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಜಿಲ್ಲೆಯ ದೇವಲಗತ್ತಿ ಗ್ರಾಮದ ರಮೇಶ್ ಅಕ್ಕಿ, ಉಮೇಶ್‌ ದೇಶನೂರ, ಪುಂಡಲೀಕ, ಪುಂಡಲೀಕ ಇಟಗಿ, ರುದ್ರಪ್ಪ ಮತ್ತು ಮಹದೇವ ಎಂಬ ರೈತರೇ ಜಿಲ್ಲಾಧಿಕಾರಿಗಳಿಗೆ ದಯಾಮರಕ್ಕಾಗಿ ಪತ್ರ ಬರೆದಿರುವ ರೈತರಾಗಿದ್ದಾರೆ. ಈ ರೈತರು, ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಿದ್ದರು. ಹೀಗೆ ಮಾರಾಟವಾದ ಕಬ್ಬಿನ ಬಾಕಿ ಬಿಲ್‌ ಬಾರಾದ ಹಿನ್ನಲೆಯಲ್ಲಿ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ದಯಾಮರಣ ಅರ್ಜಿ ಸಲ್ಲಿಸಿದ್ದಾರೆ.

ಅಂದಹಾಗೇ ಕಳೆದ ಎರಡು ವಾರಗಳ ಹಿಂದಷ್ಟೇ ಖಾನಾಪುರ ಲಿಂಗನಮಠ ಗ್ರಾಮದ ರೈತ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಪತ್ರ ಬರೆದಿತ್ತು. ಇದಾದ ಬಳಿಕ ಇದೀಗ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ದೇವಲಗತ್ತಿ ಗ್ರಾಮದ ರೈತರು ಇದೇ ಹಾದಿಯನ್ನು ಹಿಡಿದಿದ್ದಾರೆ. ಈ ಮೂಲಕ ತಮ್ಮ ಕಬ್ಬಿನ ಬಾಕಿ ಹಣವನ್ನು ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ.

Next Story

RELATED STORIES