Top

ಮೈಸೂರಿನಲ್ಲಿ ಹಂದಿ ದಾಳಿಗೆ ಮೆಕ್ಕೆಜೋಳ ನಾಶ

ಮೈಸೂರಿನಲ್ಲಿ ಹಂದಿ ದಾಳಿಗೆ ಮೆಕ್ಕೆಜೋಳ ನಾಶ
X

ಮೈಸೂರು : ಜಿಲ್ಲೆಯ ಮೆಕ್ಕೆಜೋಳ ಹೊಲಕ್ಕೆ ಲಗ್ಗೆ ಹಿಟ್ಟಿರುವ ಹಂದಿಯೊಂದು, ಲಕ್ಷಾಂತರ ರೂಪಾಯಿ ಮೌಲ್ಯ ಬೆಳೆ ನಾಶ ಮಾಡಿರುವ ಘಟನೆ ನಡೆದಿದೆ.

ಜಿಲ್ಲೆಯ ಎಚ್‌ ಡಿ ಕೋಟೆ ತಾಲ್ಲೂಕಿನ ಚೆನ್ನಿಪುರ ಗ್ರಾಮದ, ರೈತ ನಾಗರಾಜ್‌ ಎಂಬುವರು ಎರಡು ಎಕರೆಗೆ ಮೆಕ್ಕೆಜೋಳ ಹಾಕಿದ್ದರು. ಈ ಹೊಲಕ್ಕೆ ನುಗ್ಗಿರುವ ಹಂದಿಗಳು, ಲಕ್ಷಾಂತರ ಮೌಲ್ಯದ ಬೆಳೆದು ನಿಂತಿದ್ದ ಮೆಕ್ಕೆಜೋಳವನ್ನು ನಾಶ ಪಡಿಸಿವೆ.

ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿರುವ ರೈತ ನಾಗರಾಜ್, ಬೆಳೆ ನಾಶಕ್ಕೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆದರೇ ನಾಗರಾಜ್‌ ದೂರು ನೀಡಿದರು, ಸ್ಥಳಕ್ಕೆ ಬಂದು ಪರಿಶೀಲನೆ ಮಾಡಬೇಕಾದ ಆಧಿಕಾರಿಗಳು ಇದುವರೆಗೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಹಂದಿ ದಾಳಿಯಿಂದ ನಾಶವಾದ ಬೆಳೆಗೆ ಪರಿಹಾರ ಕೊಡಲು ಬರೋದಿಲ್ಲ ಎಂದು ಹೇಳಿದ್ದಾರಂತೆ.

ಇದೀಗ ಎರಡು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ನಾಶದಿಂದಾಗಿ, ಕಂಗಾಲಾಗಿರುವ ರೈತ ನಾಗರಾಜ್‌, ಕಣ್ಣೀರಿಡುತ್ತಿದ್ದಾರೆ. ಪರಿಹಾರದ ನಿರೀಕ್ಷೆಯಲ್ಲಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ರೈತನ ಕಷ್ಟಕ್ಕೆ ಸ್ಪಂದಿಸುತ್ತಾರಾ ಎಂದು ಕಾದು ನೋಡಬೇಕಿದೆ.

Next Story

RELATED STORIES