Top

ಒಂದು ದೇಶ, ಒಂದೇ ಚುನಾವಣೆ: ಸರ್ವಪಕ್ಷ ಸಭೆ ಕರೆದ ಕೇಂದ್ರ

ಒಂದು ದೇಶ, ಒಂದೇ ಚುನಾವಣೆ: ಸರ್ವಪಕ್ಷ ಸಭೆ ಕರೆದ ಕೇಂದ್ರ
X

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಒಂದು ದೇಶ, ಒಂದೇ ಚುನಾವಣೆಗೆ ಕೇಂದ್ರ ಸರಕಾರ ತಯಾರಿ ನಡೆಸಿದ್ದು, ಸರ್ವಪಕ್ಷ ಸಭೆ ಕರೆದಿದೆ.

ಕೇಂದ್ರ ಕಾನೂನು ಸಚಿವಾಲಯ, ಚುನಾವಣಾ ಆಯೋಗಕ್ಕೆ ಪತ್ರ ಬರೆದು ನಿಗದಿತ ಒಂದು ವರ್ಷದಲ್ಲಿ ಅಥವಾ ಒಂದೇ ಸಮಯದಲ್ಲಿ ದೇಶದ ಎಲ್ಲಾ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡೆಸಲು ಸಾಧ್ಯವೇ? ಎಂಬುದು ಸೇರಿದಂತೆ 20 ಪ್ರಶ್ನೆಗಳನ್ನು ಮುಂದಿಟ್ಟಿದೆ.

ಚುನಾವಣಾ ಆಯೋಗದ ಅಭಿಪ್ರಾಯ ಪಡೆಯುವ ಪ್ರಯತ್ನ ಒಂದು ಕಡೆ ನಡೆಯುತ್ತಿದ್ದಂತೆ ಸರ್ವಪಕ್ಷ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿದ ನಂತರ ಅಂತಿಮ ವರದಿ ರಚಿಸಲು ಕಾನೂನು ಸಚಿವಾಲಯ ಸಿದ್ಧತೆ ನಡೆಸಿದೆ.

ಈ ಎರಡೂ ಬೆಳವಣಿಗೆಗಳು ದಿಢೀರನೆ ನಡೆದಿದ್ದು, ದೇಶದ ಪಾಲಿಗೆ ಅತ್ಯಂತ ಮಹತ್ವದ್ದು ಎಂದು ಹೇಳಲಾದ ಒಂದು ದೇಶ, ಒಂದೇ ಚುನಾವಣೆಗೆ ವೇದಿಕೆ ಸಜ್ಜಾಗಲಿದೆ. ಚುನಾವಣಾ ವೆಚ್ಚದಲ್ಲಿ ಕಡಿತ ಹಾಗೂ ಸರಕಾರಿ ಸಿಬ್ಬಂದಿಗಳ ಬಳಕೆ ಹಾಗೂ ಯೋಧರ ಬಳಕೆ ಮುಂತಾದ ಹಲವು ಸಮಸ್ಯೆಗಳಿಗೆ ಇದು ಪರಿಹಾರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

Next Story

RELATED STORIES