Top

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ : ಮುಖ್ಯಾಂಶಗಳು ಹೀಗಿವೆ..

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ : ಮುಖ್ಯಾಂಶಗಳು ಹೀಗಿವೆ..
X

ಬೆಂಗಳೂರು : ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯ ಬಳಿಕ ಮೊದಲ ಅಧಿವೇಶನ ಇಂದು ಆರಂಭಗೊಂಡಿದೆ. ಈ ಜಂಟಿ ಅಧಿವೇಶನಕ್ಕೆ, ಸಾರೋಟು ಮೂಲಕ ಆಗಮಿಸಿದ ರಾಜ್ಯಪಾಲ ವಜೂಬಾಯಿ ವಾಲಾ, ಪೊಲೀಸ್‌ ಬ್ಯಾಂಡ್‌ನಿಂದ ಗೌರವ ವಂದನೆ ಸ್ಪೀಕರಿಸಿದರ ಬಳಿಕ ಸದನಕ್ಕೆ ಆಗಮಿಸಿದರು. ಈ ವೇಳೆ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ವಜೂಬಾಯಿ ವಾಲಾ ಅವರ ಭಾಷಣದ ಮುಖ್ಯಾಂಶಗಳು ಕೆಳಗಿನಂತಿವೆ..

ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು

 • ಕೃಷಿ ಕ್ಷೇತ್ರದಲ್ಲಿ ಇಸ್ತ್ರೇಲ್‌ ಮಾದರಿ ಪದ್ದತಿ ಅಳವಡಿಕೆ
 • ರೈತರ ಬೆಳೆಗೆ ನ್ಯಾಯಯುತ ಬೆಲೆಗೆ ಒತ್ತು
 • ಆಧುನಿಕ ಕೃಷಿ ತಂತ್ರಜ್ಞಾನ ಅಳವಡಿಕೆಗೆ ಪ್ರೋತ್ಸಾಹ
 • ಅಪರಾಧ ಕೃತ್ಯಗಳನ್ನು ತಡೆಯುವ ವಿನೂತನ ವ್ಯವಸ್ಥೆ ಜಾರಿಗೆ ಒತ್ತು
 • ಮುಖ್ಯಪೇದೆ, ಪೇದೆಗಳಿಗೆ ಸರಹದ್ದು ನಿಗದಿಗೆ ಕ್ರಮ
 • ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಳ
 • ನಾಡಕಚೇರಿ, ಆರ್‌ಟಿಓ ಮೊಬೈಲ್‌ ವ್ಯಾಪ್ತಿಗೆ, ಮೊಬೈಲ್ ಮೂಲಕ ಎಲ್ಲಾ ಸೇವೆ
 • ಸಾರಿಗೆ ಕಚೇರಿಗಳಲ್ಲಿ ಡಿಜಿ ಲಾಕ್‌ ವ್ಯವಸ್ಥೆ
 • ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ
 • ಮೇವು ಭದ್ರತಾ ನೀತಿ ಜಾರಿಗೆ ತರಲು ಚಿಂತನೆ
 • ಚರ್ಮ ಸಂರಕ್ಷಣೆ ಹದ ಮಾಡುವ ಕೇಂದ್ರ ಸ್ಥಾಪನೆಗೆ ಒತ್ತು
 • ವನ್ಯಜೀವಿಗಳಿಂದಾಗುವ ಬೆಳೆಹಾನಿಗೆ ದುಪ್ಪಟ್ಟು ಪರಿಹಾರ
 • ಮಾಲಿನ್ಯ ಮೇಲ್ವಿಚಾರಣೆಗೆ ಸಂಚಾರಿ ವಾಹನ ವ್ಯವಸ್ಥೆ
 • ಪ್ಲಾಸ್ಟಿಕ್‌ ನಿಷೇಧವನ್ನು ಕಟ್ಟು ನಿಟ್ಟು ಜಾರಿಗೆ ಒತ್ತು
 • ಗರ್ಭಿಣಿಯರ, ಬಾಣಂತಿಯರ ಅಪೌಷ್ಠಿಕತೆ ನಿವಾರಣೆ, ಇದಕ್ಕಾಗಿ ಹೊಸ ಯೋಜನೆ ಬಜೆಟ್‌ನಲ್ಲಿ ಘೋಷಣೆ
 • ಮಹಿಳೆರು, ಮಕ್ಕಳಿಗಾಗಿ ಹೆಚ್ಚುವರಿ ವಿಶೇಷ ಘಟಕ
 • 2020ಕ್ಕೆ ಬಾಲಕಾರ್ಮಿಕ ಮುಕ್ತ ರಾಜ್ಯ ಘೋಷಣೆ
 • ಹಳೆಯ ಆರೋಗ್ಯ ಕರ್ನಾಟಕ ಯೋಜನೆ ಸಂಪೂರ್ಣ ಜಾರಿ
 • ಮೀನುಗಾರರ ಅಭಿವೃದ್ದಿಗಾಗಿ ಹೊಸ ಯೋಜನೆ
 • ನೀಲಿಕ್ರಾಂತಿ ಹೆಸರಡಿ ಯೋಜನೆ
 • ಬೆಂಗಳೂರಿನಲ್ಲಿ ಪ್ರತ್ಯೇಕ ಸೈಕಲ್ ಪಥ ಕಟ್ಟುನಿಟ್ಟಿನಿಂದ ಜಾರಿ
 • ಬೆಂಗಳೂರಿನಲ್ಲಿ ಸೈಕಲ್ ಬಾಡಿಗೆ ವ್ಯವಸ್ಥೆ
 • ಬಸ್ ಪ್ರಯಾಣಿಕರಿಗೆ ಉಚಿತ ವೈಫೈ ಸೌಲಭ್ಯಕ್ಕೆ ಚಿಂತನೆ
 • 2021 ಮಾರ್ಚ್‌ ಹೊತ್ತಿಗೆ ನಮ್ಮ ಮೆಟ್ರೋ 118 ಕಿಮೀ ಮಾರ್ಗ ಪೂರ್ಣ
 • ಮೈಸೂರು ಮಾದರಿಯಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಸೈಕಲ್ ಕಾರ್ಯಕ್ರಮ ಜಾರಿ
 • ಬೆಂಗಳೂರಿನಲ್ಲಿ ಸಮರ್ಥ ಸಾರಿಗೆ ವ್ಯವಸ್ಥೆ ಜಾರಿಗೆ ಯೋಜನೆ
 • ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಬಸ್‌ಗಳಲ್ಲಿ ಸಿಸಿಟಿವಿ ಅಳವಡಿಕೆ
 • ಪ್ಯಾನಿಕ್‌ ಅಲರಾಂ ವ್ಯವಸ್ಥೆ ಜಾರಿ

ಈ ಮೊದಲಾದ ಮುಖ್ಯ ಅಂಶಗಳನ್ನು ಒಳಗೊಂಡಂತೆ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ಮಾಡುವ ನಿಟ್ಟಿನಲ್ಲಿ, ಇಂದು ರಾಜ್ಯಪಾಲರು ಮಾಡಿದ ಭಾಷಣದಲ್ಲಿ ಮುಖ್ಯಾಂಶಗಳಾಗಿವೆ.

Next Story

RELATED STORIES