Top

ಗೋಲ್ಡನ್ ಸ್ಟಾರ್‌ ಬರ್ತ್‌ಡೇಗೆ ಶಿಲ್ಪ ಗಣೇಶ್ ಕೊಟ್ಟ ಗಿಫ್ಟ್ ಏನು ಗೊತ್ತಾ?

ಗೋಲ್ಡನ್ ಸ್ಟಾರ್‌ ಬರ್ತ್‌ಡೇಗೆ ಶಿಲ್ಪ ಗಣೇಶ್ ಕೊಟ್ಟ ಗಿಫ್ಟ್ ಏನು ಗೊತ್ತಾ?
X

ಬೆಂಗಳೂರು: ಸ್ಯಾಂಡಲ್ ವುಡ್ ನ ಗೋಲ್ಡನ್ ಸ್ಟಾರ್ ಗಣೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 38ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಬರ್ತಡೇಯನ್ನ ಅಪಾರ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ತಮ್ಮ ನೆಚ್ಚಿನ ಸ್ಟಾರ್ ನ ಬರ್ತಡೇಯನ್ನ ಸೆಲೆಬ್ರೇಟ್ ಮಾಡಲು ಮಧ್ಯರಾತ್ರಿಯೇ ಆರ್ ಆರ್ ನಗರದ ನಟ ಗಣೇಶ್ ಮನೆ ಮುಂದೆ ಅಪಾರ ಅಭಿಮಾನಿಗಳು ಜಮಾಯಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಟ ಗಣೇಶ್ ತಮ್ಮ ಅಭಿಮಾನಿಗಳಗೊಂದಿಗೆ ಕೇಕ್ ಕತ್ತರಿಸಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡರು.

ನಂತರ ಮಾತನಾಡಿದ ಗಣೇಶ್ ಮಧ್ಯರಾತ್ರಿಯೂ ನಮ್ಮ ಮನೆ ಬಳಿ ಬಂದೂ ನನ್ನ ಬರ್ತಡೇ ಸೆಲೆಬ್ರೇಟ್ ಮಾಡ್ತಿರೋ ನನ್ನ ಅಭಿಮಾನಿಗಳಿಗೆ ಚಿರಋುಣಿ. ಬರ್ತ್‌ಡೇ ಪ್ರಯುಕ್ತ ನನ್ನ ಹೊಸ ಸಿನಿಮಾ ಆರೆಂಜ್ ಚಿತ್ರದ ಟೀಸರ್ ನ್ನ ನಾಳೆ ಬೆಳಗ್ಗೆ ರೀಲಿಸ್ ಮಾಡ್ತೀವಿ ಅಂದರು. ಇನ್ನು ಇದೇ ವೇಳೆ ಈ ವರ್ಷದ ಬರ್ತಡೇಗೆ ನನ್ನ ಪತ್ನಿ ಶಿಲ್ಪ ಯಾವುದೇ ಗೀಫ್ಟ್ ನೀಡಿಲ್ಲ ಅಂತ ಪತ್ನಿಯ ಕಾಲೆಳೆದರು. ಗಣೇಶ್ ಮಾತಿಗೆ ನಗುನಗುತ ಪ್ರತಿಕ್ರಿಯಿಸಿದ ಶೀಲ್ಪಗಣೇಶ್ ಈ ವರ್ಷದ ಬರ್ತಡೇಗೆ ತಮ್ಮ ಹೋಮ್ ಬ್ಯಾನರ್ ನಲ್ಲಿ ಬರ್ತಿರೋ 'ಗೀತಾ ' ಸಿನಿಮಾವೇ ಗಣೇಶ್ ಗೆ ಗಿಫ್ಟ್ ಎಂದರು.

Next Story

RELATED STORIES