Top

ಫಿಫಾ ವಿಶ್ವಕಪ್​: ಬ್ರೆಜಿಲ್ ಕ್ವಾರ್ಟರ್​ಗೆ, ಮೆಕ್ಸಿಕೊ ಮನೆಗೆ

ಫಿಫಾ ವಿಶ್ವಕಪ್​: ಬ್ರೆಜಿಲ್ ಕ್ವಾರ್ಟರ್​ಗೆ, ಮೆಕ್ಸಿಕೊ ಮನೆಗೆ
X

ಜಿದ್ದಾಜಿದ್ದಿನ ಹೋರಾಟದಲ್ಲಿ 5 ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡ 2-0 ಗೋಲುಗಳಿಂದ ಮೆಕ್ಸಿಕೊ ತಂಡವನ್ನು ಬಗ್ಗುಬಡಿದು ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್​ಗೆ ಲಗ್ಗೆ ಹಾಕಿದೆ.

ಸೋಮವಾರ ನಡೆದ ಪ್ರೀಕ್ವಾರ್ಟರ್ ಫೈನಲ್​ನಲ್ಲಿ ಉಭಯ ತಂಡಗಳು ಮೊದಲ ಅವಧಿಯ ಆಟ ಮುಗಿದಾಗ ಗೋಲು ರಹಿತ ಸಮಬಲ ಸಾಧಿಸಿದ್ದವು. ಆದರೆ ಎರಡನೇ ಅವಧಿಯ ಆಟದಲ್ಲಿ ಬ್ರೆಜಿಲ್ ಪರ ನಾಯಕ ನೇಮರ್ (51ನೇ ನಿಮಿಷ) ಮತ್ತು ರಾಬೆರ್ಟೊ ಫಿರ್ಮಿನೊ (88ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಈ ಗೆಲುವಿನೊಂದಿಗೆ ಪ್ರಬಲ ತಂಡಗಳು ಮುಗ್ಗರಿಸಿದರೂ ಬ್ರೆಜಿಲ್ ತನ್ನ ಘನತೆಗೆ ತಕ್ಕಂತೆ ಆಡಿ ಅಭಿಮಾನಿಗಳಿಗೆ ನಿರಾಸೆ ಆಗದಂತೆ ನೋಡಿಕೊಂಡರು. ಮೆಕ್ಸಿಕೊ ಮೊದಲಾರ್ಧದಲ್ಲಿ ಉತ್ತಮ ಹೋರಾಟ ಸಂಘಟಿಸಿದರೂ ಎರಡನೇ ಅವಧಿಯ ಆಟದಲ್ಲಿ ಎಡವಿತು.

Next Story

RELATED STORIES