Top

ಹಲಸಿನ ಹಣ್ಣಿಗೆ ಮನಸೋತ ಗಜರಾಜ : ಮಾಡಿದ್ದೇನು ಗೊತ್ತಾ.?

ಹಲಸಿನ ಹಣ್ಣಿಗೆ ಮನಸೋತ ಗಜರಾಜ : ಮಾಡಿದ್ದೇನು ಗೊತ್ತಾ.?
X

ಚಿಕ್ಕಮಗಳೂರು : ಮಲೆನಾಡಿನಲ್ಲಿ ಹಣ್ಣುಗಳಿಗೆ ಬರವಿಲ್ಲ. ಬಗೆ ಬಗೆಯ ಹಣ್ಣುಗಳು, ತರಾವರಿ ರುಚಿಯಲ್ಲಿ ಎಲ್ಲರಿಗೂ ಇಷ್ಟ ಆಗಿ ಬಿಡ್ತಾವೆ. ಅದರಲ್ಲೂ ಮಲೆನಾಡಿನ ಮಾವು, ಹಲಸಂತೂ ವಾ... ಎಷ್ಟು ರುಚಿ ಅಂತೀರಾ.? ಒಮ್ಮೆ ಕಾಫಿನಾಡು ಚಿಕ್ಕಮಗಳೂರಿಗೋ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೊ ಹೋದಾಗ ತಿನ್ನಲೇ ಬೇಕು ನೀವು. ತಿಂದು ರುಚಿಯನ್ನು ಸವಿಯಲೇ ಬೇಕು. ಅಷ್ಟು ರುಚಿ. ಇಂತಹ ರುಚಿಗೆ ಮನಸೋತ ಗಜರಾಜ, ಹಲಸಿಗಾಗಿ ಮರಕ್ಕೇ ಕಾಲು ಹಾಕಿ, ಮೇಕೆ ತರ ಬಾಯಿ ಚಾಚಿ ತಿಂದ ಅಪರೂಪದ ದೃಶ್ಯವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಆಹಾರ ಹರಸಿ ಕಾಡಿನಿಂದ ನಾಡಿಗೆ ಬಂದ ಗಜರಾಜ ತೋಟ ಒಂದರಲ್ಲಿ ಹಲಸಿನ ವಾಸನೆಗೆ ಮನಸೋತಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಬೋಗಸೆ ಗ್ರಾಮದ ತೋಟವೊಂದಕ್ಕೆ ನುಗ್ಗಿದ ಆನೆ ಹಲಸಿನ ಹಣ್ಣನ್ನು ಕೀಳಲು ಮರವೇರಿ ತಿನ್ನುತ್ತಿರುವ ದೃಶ್ಯ ಗಮನಸೆಳೆದಿದೆ.

https://www.youtube.com/watch?v=v01wLQvFjxA

ಮೈ ತುಂಬಾ ಮುಳ್ಳು ತುಂಬಿಕೊಂಡಿದ್ದರೂ ಘಮ ಘಮಿಸುವ ಸುವಾಸನೆಯಿಂದ ಹಲಸಿನ ಹಣ್ಣು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಹಲಸಿನ ಹಣ್ಣಿನ ಘಮಕ್ಕೆ ಮನಸೋಲದವರೆ ಇಲ್ಲ. ಮಂಗನಿಂದ ಮಾನವನವರೆಗೆ ಎಲ್ಲರೂ ಹಲಸಿನ ಮರವೇರಿ ಹಣ್ಣು ತಿನ್ನುವುದನ್ನು ನೋಡಿರುತ್ತೀರಿ. ಆದರೆ ಭಾರಿ ಗಾತ್ರದ ಆನೆಯೂ ಕೂಡ ಪ್ರಿಯವಾದ ಹಲಸು ತಿನ್ನಲು ಮರವನ್ನೇರುತ್ತದೆ ದೃಶ್ಯ ಮನಮೋಹಕ.

ಮರಕ್ಕೆ ಮುಂಗಾಲು ಹಾಕಿ, ಬಾಯಿಂದ ಕಿತ್ತು ಒಮ್ಮೆಗೆ ಹಲಸಿನ ಹಣ್ಣುನ್ನು ಬಾಯಿಗೆ ಗುಳುಂ ಅಂತ ಹಾಕಿಕೊಳ್ಳುವ ಗಜರಾಜ, ಹಲಸಿನ ಹಣ್ಣಿನ ರುಚಿಗೆ ಮನಸೋತಿದ್ದಾನೆ ಅನಿಸುತ್ತದೆ. ಇದಕ್ಕೆ ಇರಬೇಕು ಕಾಡಿನಿಂದ ನಾಡಿಗೆ ಬಂದು ತೋಟಕ್ಕೆ ನುಗ್ಗಿದ ಆನೆ, ಹಲಸಿನ ಹಣ್ಣನ್ನು ಕಂಡು ಬಾಯಿ ಹಾಕಿ ಕಿತ್ತು ತಿಂದಿದ್ದಾನೆ.

Next Story

RELATED STORIES