Top

ಸುಗ್ಗಿಹಬ್ಬದಲ್ಲಿ ಸಿ.ಟಿ.ರವಿ ಸಖತ್ ಡ್ಯಾನ್ಸ್

ಸುಗ್ಗಿಹಬ್ಬದಲ್ಲಿ ಸಿ.ಟಿ.ರವಿ ಸಖತ್ ಡ್ಯಾನ್ಸ್
X

ಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಸಿ.ಟಿ ರವಿ ಕುಣಿದು ಕುಪ್ಪಳಿಸಿದ್ದಾರೆ. ಇವರ ಜೊತೆ ಗ್ರಾಮಸ್ಥರೂ ಕೂಡ ಸಖತ್ ಸ್ಟೆಪ್ ಹಾಕಿದ್ದಾರೆ. ಪ್ರತಿ ವರ್ಷ ಚಿಕ್ಕಮಗಳೂರಿನ ಇಂದಾವರ ಗ್ರಾಮದಲ್ಲಿ ಅದ್ಧೂರಿಯಾಗಿ ಸುಗ್ಗಿ ಹಬ್ಬವನ್ನು ಆಚರಿಸಲಾಗುತ್ತದೆ.ಈ ವರ್ಷವೂ ಕೂಡ ಸುಗ್ಗಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಈ ಸುಗ್ಗಿಹಬ್ಬದಲ್ಲಿ ಚಿಕ್ಕಮಗಳೂರು ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಶಾಸಕ ಸಿಟಿ ರವಿ ಕುಣಿದು ಕುಪ್ಪಳಿಸಿದ್ದಾರೆ. ತಮ್ಮ ರಾಜಕೀಯದ ಕೆಲಸದ ನಡುವೆಯೂ ಸಮಯ ಮಾಡಿಕೊಂಡು ಬಂದು ಗ್ರಾಮಸ್ಥರನ್ನು ರಂಜಿಸಿದ್ದಾರೆ. ಮಲೆನಾಡ ಪೇಟ ಧರಿಸಿದ ಸಿ.ಟಿ.ರವಿ ವಾದ್ಯಕ್ಕೆ ತಕ್ಕಂತೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಇನ್ನು ಸಿ.ಟಿ.ರವಿಗೆ ಗ್ರಾಮದ ಮುಖಂಡರೂ ಸಾಥ್ ನೀಡಿದ್ದಾರೆ. ರವಿ ಕುಣಿಯಲು ಶುರು ಮಾಡುತ್ತಿದ್ದಂತೆ ಅವರೊಂದಿಗೆ ಗ್ರಾಮಸ್ಥರು ಸ್ಟೆಪ್ಸ್ ಹಾಕಿದ್ದಾರೆ.

Next Story

RELATED STORIES