Top

ಅಪ್ಪ ಬೈಯ್ದರು ಅಂತ 2 ಕೆಜಿ ಕಾಂಕ್ರೀಟ್ ತಿಂದು ಆತ್ಮಹತ್ಯೆಗೆ ಯುವಕ ಯತ್ನ!

ಅಪ್ಪ ಬೈಯ್ದರು ಅಂತ 2 ಕೆಜಿ ಕಾಂಕ್ರೀಟ್ ತಿಂದು ಆತ್ಮಹತ್ಯೆಗೆ ಯುವಕ ಯತ್ನ!
X

ತಂದೆ ಬೈದಿದಕ್ಕೆ 19 ವರ್ಷದ ಯುವಕನೊಬ್ಬ 2 ಕೆಜಿ ಕಾಂಕ್ರೀಟ್ ಸೀಮೆಂಟ್ ತಿಂದು ಆತ್ಮಹತ್ಯೆಗೆ ಯತ್ನಿಸಿದ ವಿಚಿತ್ರ ಘಟನೆ ಜಾರ್ಖಂಡ್‌ನ ಪಾಕೂರ್‌ ಜಿಲ್ಲೆಯ ಬಹುದಹ ಎಂಬಲ್ಲಿ ನಡೆದಿದೆ.

ಊರಿನ ಖ್ಯಾತ ಕಂಬಾರ ಪುತ್ರ ಭೀಮಲ್ ಕಾಂಕ್ರೀಟ್ ತಿಂದು ಆಸ್ಪತ್ರೆ ಸೇರಿದ್ದು, ವೈದ್ಯರು ಹೊಟ್ಟೆಯಿಂದ 2 ಕೆಜಿ ಕಾಂಕ್ರೀಟ್ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಗ ಬೀಮಾಲ್‌ ತಂದೆ ಜತೆ ಮಡಿಕೆಗಳು, ಮೂರ್ತಿಗಳನ್ನು ಮಾಡುವ ಕೆಲಸಕ್ಕೆ ಕೈ ಜೋಡಿಸುತ್ತಿದ್ದ. ಮಗನಿಗೆ ಕೊಟ್ಟ ಕೆಲಸ ಸರಿಯಾಗಿ ಮಾಡದಿದ್ದಾಗ ತಂದೆಗೆ ಸಿಟ್ಟು ಬಂದು ಬೈದರು. ಅದಕ್ಕೆ ಬೇಜಾರು ಮಾಡಿಕೊಂಡ ಬೀಮಾಲ್‌ ಕಲೆಸಿ ಇಟ್ಟಿದ್ದ ಸಿಮೆಂಟ್ ಕಾಂಕ್ರೀಟ್ ತಿಂದು ಆತ್ಮಹತ್ಯೆಗೆ ಯತ್ನಿಸಿದ.

ಸಿಮೆಂಟ್ ಹೊಟ್ಟೆ ಸೇರಿದ ಮೇಲೆ ಆತನಿಗೆ ಅಸಾಧ್ಯವಾದ ಹೊಟ್ಟೆ ನೋವು ಕಂಡುಬಂತು, ಮೊದಲಿಗೆ ವೈದ್ಯರ ಬಳಿ ಬರಲೊಪ್ಪದ ಆತನನ್ನು ಮನೆಯವರು ವರ್ಧಮಾನ್‌ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು.

ಪರೀಕ್ಷೆ ಮಾಡಿದ ವೈದ್ಯರು ಆತನ ಹೊಟ್ಟೆಯಲ್ಲಿದ್ದ 2 ಕೆಜಿ ಕಾಂಕ್ರೀಟ್ ಅನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಮಾತನಾಡಿದ ಸರ್ಜನ್‌ ಡಾ. ಸ್ನೇಹಾಂಶು ಪಾನ್‌ 'ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಬಂದಾಗ ಪಶ್ಚಿಮ ಬಂಗಾಳದ ಆಸ್ಪತ್ರೆಗಳು ರೋಗಿಗಳನ್ನು ಕೋಲ್ಕತ್ತಾ ಅಥವಾ ದಕ್ಷಿಣ ಭಾರತಕ್ಕೆ ಕಳುಹಿಸುತ್ತಾರೆ. ಆದರೆ ನಮ್ಮಲ್ಲಿಯೂ ಪರಿಣಿತ ವೈದ್ಯರಿದ್ದಾರೆ ಎಂಬುವುದನ್ನು ಈ ಶಸ್ತ್ರ ಚಿಕಿತ್ಸೆ ಮೂಲಕ ಸಾಬೀತಾಗಿದೆ' ಎಂದಿದ್ದಾರೆ.

Next Story

RELATED STORIES