Top

EXCLUSIVE VIDEO: ಇಲಿ ಮೇಲೆ ಹಲ್ಲೆ: ಎಂಥಾ ದೌರ್ಜನ್ಯ.. ಛೀ!

EXCLUSIVE VIDEO: ಇಲಿ ಮೇಲೆ ಹಲ್ಲೆ: ಎಂಥಾ ದೌರ್ಜನ್ಯ.. ಛೀ!
X

ಮಾನವ ಗುಣ ಇರುವುದಕ್ಕೆ ಮನುಷ್ಯ ಅಂತ ಹೇಳುತ್ತಾರೆ. ಆದರೆ ಮನುಷ್ಯತ್ವವನ್ನೇ ಕಳೆದುಕೊಂಡು ಇಲಿಯಂಥ ಚಿಕ್ಕ ಜೀವಿಯ ಮೇಲೆ ಮೃಗೀಯ ವರ್ತನೆ ತೋರುವವರಿಗೆ ಏನನ್ನಬೇಕು?

ಇಲಿಯೊಂದನ್ನು ಖಾಲಿ ವಾಟರ್ ಬಾಟಲ್​ಗೆ ಕಟ್ಟಿಹಾಕಿ ಅಮಾನುಷವಾಗಿ ಚಿತ್ರಹಿಂಸೆ ನೀಡಿರುವ ವೀಡಿಯೋವೊಂದು ಮಂಡ್ಯದಲ್ಲಿ ವೈರಲ್ ಆಗಿದೆ.

ಇಲಿಯೊಂದನ್ನು ವಾಟರ್ ಬಾಟಲ್ ಗೆ ದಾರದಿಂದ ಕಟ್ಟಿ ಹಾಕಿ ಅದಕ್ಕೆ ಕೋಲಿನಲ್ಲಿ ಒಡೆಯೋ ಮೂಲಕ ಚಿತ್ರಹಿಂಸೆ ನೀಡಿದ್ದಾರೆ ದುರುಳರು. ಮೂಕ ಪ್ರಾಣಿ ಎಂಬುದನ್ನು ಕಾಣದೇ ಅದಕ್ಕೆ ಮನಬಂದಂತೆ ಥಳಿಸಿದ್ದಾರೆ. ಇಲಿಗಳು ಸಾಮಾನ್ಯವಾಗಿ ಮನೆಗಳಲ್ಲಿ ಬಿಲ ಅಥವಾ ಅಕ್ಕಿ ಮೂಟೆಗಳಲ್ಲಿ ಅಡಗಿ ಮನೆ ಸಾಮಾಗ್ರಿಗಳನ್ನು ತಿನ್ನುತ್ತವೆ. ಆದರೆ ಅವುಗಳನ್ನು ಬೋನ್ ಅಥವಾ ಇಲಿ ಔಷಧಿ ಸಿಂಪಡಿಸಿ ಕೊಲ್ಲಲಾಗುತ್ತದೆ.

ಆದರೆ ಇಲ್ಲೊಬ್ಬ ಭೂಪ ಇಲಿಯೊಂದನ್ನು ಹಿಡಿದು ಅದನ್ನು ಕಟ್ಟಿಹಾಕಿ ಮನಬಂದಂತೆ ಥಳಿಸಿ ಅದನ್ನು ವೀಡಿಯೋ ಮಾಡಿ ಫೇಸ್ ಬುಕ್, ವಾಟ್ಸಾಪ್ ಗೆ ಅಪ್ ಲೋಡ್ ಮಾಡಿದ್ದು, ಇದು ಪ್ರಾಣಿಪ್ರಿಯರ ಆಕ್ರೋಶಕ್ಕೂ ಕಾರಣವಾಗಿದೆ.

Next Story

RELATED STORIES