Top

ಮೇವು ಕೊಟ್ಟರೂ ಹಾಲು ಮಾತ್ರ ಕೊಡಲಿಲ್ಲ ಹಸು : ಯಾಕೆ ಗೊತ್ತಾ.?

ಮೇವು ಕೊಟ್ಟರೂ ಹಾಲು ಮಾತ್ರ ಕೊಡಲಿಲ್ಲ ಹಸು : ಯಾಕೆ ಗೊತ್ತಾ.?
X

ತುಮಕೂರು : ಜಿಲ್ಲೆಯ ಕೆಸ್ತೂರಿನಲ್ಲಿ ಹಸುವಿಗೆ ಹಗಲು ರಾತ್ರಿ ಎನ್ನದೇ ಹೈನುಗಾರಿಕೆಗಾಗಿ ಸಾಕಿಕೊಂಡ ಹಸುಗಳಿಗೆ ಮೇವು ಕೊಡ್ತಾರೆ. ರೈತ ಮೇವು ಕೊಟ್ಟ ಅಂತ ಬೆಳಿಗ್ಗೆ ಹಸು ಸಾಕಷ್ಟು ಹಾಲು ಕೊಡ್ಬೇಕು ಅಲ್ವಾ.? ಆದ್ರೇ, ಹಸುವಿನ ಕೆಚ್ಚಲು ಹಿಡಿದು ಹಾಲು ಕರೆಯೋಕೆ ಹೋದ್ರೇ, ಹಾಲೇ ಬರೋದಿಲ್ಲ. ಇದೇನಪ್ಪ ಅಂತ ಆಶ್ಚರ್ಯದಿಂದ ರೈತ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಹೌದು ಇಂತಹ ಸ್ಥಿತಿಯಲ್ಲಿ ಕೆಸ್ತೂರಿನ ನಿವಾಸಿ ರೈತ ಮಹಿಳೆ ಮಂಜುಳಾ ದಿನವೂ ಅನುಭವಿಸ್ತಾ ಇದ್ದರು. ಹಸುವಿಗೆ ಏನೋ ರೋಗ ತಗುಲಿರಬಹುದು. ಹೀಗಾಗಿ ಹಾಲು ಕೊಡ್ತಾ ಇಲ್ಲ ಅಂತ ಪಶು ವೈದ್ಯರನ್ನು ಕರೆಸಿ, ಚಿಕಿತ್ಸೆ ಕೂಡ ಕೊಡಿಸಿದ್ದಾರೆ. ಆದ್ರೇ, ಬೆಳಿಗ್ಗೆ ಎದ್ದು ಹಾಲು ಕರೆಯೋಕೆ ಹೋದ್ರೇ, ಹಸು ಹಾಲೇ ಕರೆದಿಲ್ಲ.

ಇಂಹತ ಪರಿಸ್ಥಿತಿ ಕಳೆದ ಹಲವು ದಿನಗಳಿಂದ ಅನುಭವಿಸಿದ ಮಹಿಳೆ, ಏನ್ ಆಗಿರಬಹುದು ಅಂತ ಕಳೆದ ನಿನ್ನೆ ಕಾವಲು ಕಾದು ನೋಡಿದ್ದಾರೆ. ಆಗ ತಿಳಿದಿದ್ದೇ, ಹಸುವಿನ ಕೆಚ್ಚಲಿಗೆ ಕನ್ನಹಾಕಿ, ಹಾಲು ಕದ್ದು ಕರೆದೊಯ್ಯುವ ಕಳ್ಳನ ಕರಾಮತ್ತು. ಹೀಗೆ ರಾತ್ರೋ ರಾತ್ರಿ ಹಾಲು ಕರೆದು, ಕಳ್ಳ ತನ ಮಾಡುತ್ತಿದ್ದ ಐನಾತಿ ಕಳ್ಳ ಬೇರೆ ಯಾರೂ ಅಲ್ಲ. ಆತನೇ ಮಂಜುಳಾ ಮನೆಯ ಪಕ್ಕದಲ್ಲೇ ಇದ್ದ, ಪಕ್ಕದ ಮನೆಯ ರಾಜಣ್ಣ.

ಪಕ್ಕದ ಮನೆಯ ರಾಜಣ್ಣ, ಸತತ ಮೂರು ವರ್ಷಗಳಿಂದ ಇದೇ ಕೆಲಸದಲ್ಲಿ ನಿರತನಾಗಿದ್ದನಂತೆ. ಪ್ರತಿ ನಿತ್ಯ 5 ಲೀಟರ್ ಹಾಲನ್ನು ಮಂಜುಳಾ ಸಾಕಿದ್ದ ಹಸುವಿನಿಂದ ಕರೆಯೋದು, ಕದ್ದು ಮಾರಾಟ ಮಾಡೋದು ಮಾಡಿದ್ದನಂತೆ. ಇಂತಹ ರಾಜಣ್ಣನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾದು, ಕಂಡು ಹಿಡಿದಿದ್ದಾರೆ.

ಈ ಬಗ್ಗೆ ಕೋರಾ ಪೊಲೀಸರಿಗೆ ದೂರು ನೀಡಿರು ಮಂಜುಳಾ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಇಷ್ಟು ದಿನದ ವರೆಗೆ ಹಾಲು ಕದ್ದು ಮಾರಾಟ ಮಾಡುತ್ತಿದ್ದ ರಾಜಣ್ಣನಿಂದ ನಷ್ಟವನ್ನು ತುಂಬಿಕೊಡಿಸುವಂತೆ ಇದೀಗ ದೂರು ನೀಡಿದ್ದಾರೆ. ಈ ಬಗ್ಗೆ ದೂರು ಸ್ವೀಕರಿಸಿರುವ ಪೊಲೀಸರು ರಾಜಣ್ಣನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.

ಅದೇನೇ ಆಗಲಿ, ಇದುವರೆಗೆ ಕಳ್ಳರು ಚಿನ್ನಾಭರಣಕ್ಕೆ ಕೈ ಹಾಕಿ, ಚೋರತನ ನಡೆಸ್ತಾ ಇದ್ದರು. ಇದೀಗ ಹಸುವನಿ ಕೆಚ್ಚಲಿಗೆ ಕೈ ಹಾಕಿ, ಹಾಲು ಕರೆದು, ಕದ್ದ ಹಾಲಿನಲ್ಲಿ ಜೀವನ ನಡೆಸ್ತಾ ಇರೋದು ವಿಪರ್ಯಾಸವೇ ಸರಿ. ಇನ್ನಾದರೂ ಇಂತಹ ಕೃತ್ಯ ನಿಲ್ಲಿಸಿ, ನೊಂದ ಮಹಿಳೆ ಮಂಜುಳಾ ಕಷ್ಟ ಬಗೆ ಹರಿಯಲಿ ಎಂಬುದು ಕೆಸ್ತೂರು ಗ್ರಾಮಸ್ಥರ ಒಕ್ಕೊರಲಿನ ಅಭಿಪ್ರಾಯವಾಗಿದೆ.

ವರದಿ : ಟಿ.ಯೋಗೀಶ್, ಟಿವಿ5, ತುಮಕೂರು

Next Story

RELATED STORIES