Top

ಬಜೆಟ್​ಗೆ ಸಿಕ್ತು ಗ್ರೀನ್​ ಸಿಗ್ನಲ್​: ನಿಗಮ-ಮಂಡಳಿಗೆ ಕಾಂಗ್ರೆಸ್ ಪಟ್ಟಿ ರೆಡಿ

ಬಜೆಟ್​ಗೆ ಸಿಕ್ತು ಗ್ರೀನ್​ ಸಿಗ್ನಲ್​: ನಿಗಮ-ಮಂಡಳಿಗೆ ಕಾಂಗ್ರೆಸ್ ಪಟ್ಟಿ ರೆಡಿ
X

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್​.ಡಿ.ಕುಮಾರಸ್ವಾಮಿ ನಡುವೆ ಕದನಕ್ಕೆ ಕಾರಣವಾಗಿದ್ದ ಬಜೆಟ್​ ಮಂಡನೆಗೆ ಕೊನೆಗೂ ಕಾಂಗ್ರೆಸ್ ಹಸಿರು ನಿಶಾನೆ ತೋರಿದೆ. ಇದರೊಂದಿಗೆ ಎರಡೂ ಪಕ್ಷಗಳು ಹಾಗೂ ಮುಖಂಡರ ನಡುವಿನ ಭಿನಮತ ಶಮನಗೊಂಡಿದೆ.

ಮತ್ತೊಂದೆಡೆ ಸಚಿವ ಸಂಪುಟ ರಚನೆ ನಂತರ ಭುಗಿಲೆದ್ದ ಬಂಡಾಯ ಶಮನ ಮಾಡುವ ಪ್ರಯತ್ನ ಮಾಡಲಾಗಿದ್ದು, ಬಹುತೇಕ ನಿಗಮ ಮಂಡಳಿಗೆ ಕಾಂಗ್ರೆಸ್ ಸಂಭಾವ್ಯರ ಪಟ್ಟಿ ರೆಡಿಯಾಗಿದೆ.

ಕಾಂಗ್ರೆಸ್​ಗೆ 30 ನಿಗಮ ಮಂಡಳಿ ಸ್ಥಾನದ ಪಾಲು ದೊರೆತಿದ್ದು, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ 20 ಸದಸ್ಯರ ಪಟ್ಟಿ ಸಿದ್ದಪಡಿಸಿಕೊಂಡಿದ್ದರು. ರಾಜ್ಯ ಉಸ್ತುವಾರಿ ಕೆ. ವೇಣುಗೋಪಾಲ್ ಹಾಗೂ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಟ್ಟಿ ಸಿದ್ಧಗೊಂಡಿತು.

ಸಂಭಾವ್ಯ ಪಟ್ಟಿ ಹೀಗಿದೆ.

 • ಎಂಟಿಬಿ ನಾಗರಾಜ್ - ಹೊಸಕೋಟೆ
 • ಎಸ್ ಟಿ ಸೋಮಶೇಖರ್ - ಯಶವಂತ ಪುರ
 • ಭೈರತಿ ಬಸವರಾಜ್ - ಕೆ.ಆರ್ ಪುರಂ
 • ಡಾ.ಸುಧಾಕರ - ಚಿಕ್ಕಬಳ್ಳಾಪುರ
 • ನಾರಯಣ ಸ್ವಾಮಿ - ಬಂಗಾರ ಪೇಟೆ
 • ನಾಗೇಶ್ (ಪಕ್ಷೇತರ) - ಮುಳಬಾಗಿಲು
 • ನರೇಂದ್ರ - ಹನೂರು
 • ರಾಜೇಗೌಡ ಟಿ.ಡಿ - ಶೃಂಗೇರಿ
 • ಬಿ.ಕೆ ಸಂಗಮೇಶ - ಭದ್ರಾವತಿ
 • ಬಿ.ಸಿ ಪಾಟೀಲ್ - ಹಿರೇಕೆರೂರು
 • ಶಿವರಾಮ ಹೆಬ್ಬಾರ - ಯಲ್ಲಾಪುರ
 • ಖನೀಸ್ ಫಾತೀಮಾ ಖಮರುಲ್ ಇಸ್ಲಾಂ
 • ರಾಘವೇಂದ್ರ ಹಿಟ್ನಾಳ - ಕೊಪ್ಪಳ
 • ನಾಗೇಂದ್ರ - ಬಳ್ಳಾರಿ ಗ್ರಾಮೀಣ
 • ಭೀಮನಾಯ್ಕ್ - ಹಗರಿಬೊಮ್ಮನಹಳ್ಳಿ
 • ಅಜಯ್ ಸಿಂಗ್ - ಜೇವರ್ಗಿ
 • ಲಕ್ಷ್ಮೀ ಹೆಬ್ಬಾಳ್ಕರ್ - ಬೆಳಗಾವಿ ಗ್ರಾಮೀಣ
 • ಗಣೇಶ್ ಹುಕ್ಕೇರಿ - ಚಿಕ್ಕೊಡಿ
 • ಅಬ್ಬಾಯ ಪ್ರಸಾದ - ಧಾರವಾಡ ಪೂರ್ವ
 • ರಘುಮೂರ್ತಿ - ಚಳ್ಳಕೆರೆ
 • ರಾಮಪ್ಪ - ಹರಿಹರ
 • ಬಿ.ನಾರಾಯಣ - ಬಸವಕಲ್ಯಾಣ
 • ರಂಗನಾಥ - ಕುಣಿಗಲ್
 • ಅಮರೇಗೌಡ ಬಯ್ಯಾಪುರ - ಕುಷ್ಟಗಿ
 • ರಘು ಆಚಾರ್ - ಪರಿಷತ್ ಸದಸ್ಯ
 • ಪ್ರತಾಪಗೌಡ - ಮಾನ್ವಿ
 • ರಿಜ್ವಾನ್ ಅರ್ಷದ್ - ಪರಿಷತ್ ಸದಸ್ಯ
 • ರಹೀಂ ಖಾನ್ - ಬೀದರ್

Next Story

RELATED STORIES