Top

ಗಿರಿಜಾ ಕಲ್ಯಾಣೋತ್ಸವ ಕಣ್ತುಂಬಿಕೊಂಡ ಯದುವೀರ್

ಗಿರಿಜಾ ಕಲ್ಯಾಣೋತ್ಸವ ಕಣ್ತುಂಬಿಕೊಂಡ ಯದುವೀರ್
X

ಮೈಸೂರು: ಮೈಸೂರಿನ ನಂಜನಗೂಡಿನಲ್ಲಿ ನಡೆಯುತ್ತಿರುವ ಗಿರಿಜಾ ಕಲ್ಯಾಣೋತ್ಸವದಲ್ಲಿ ಮೈಸೂರು ಮಹಾರಾಜ ಯದುವೀರ್ ಭಾಗಿಯಾಗಿದ್ದರು. ನಿನ್ನೆಯಿಂದ ಗಿರಿಜಾ ಕಲ್ಯಾಣ ಮಹೋತ್ಸವ ಶುರುವಾಗಿದ್ದು, ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು, ಕಲ್ಯಾಣವನ್ನು ಕಣ್ತುಂಬಿಕೊಂಡರು.

ನಂಜನಗೂಡಿನ ಆಡಳಿತ ಮಂಡಳಿಯಿಂದ ಗಿರಿಜಾ ಕಲ್ಯಾಣ ಆಯೋಜನೆಯಾಗಿದೆ. ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀಕಂಠೇಶ್ವರ ಸ್ವಾಮಿಯ ವಿವಾಹ ಮಹೋತ್ಸವಕ್ಕೆ ಚಾಲನೆ ಸಿಕ್ಕಿದ್ದು, ದೇಗುಲದ ಪ್ರಧಾನ ಅರ್ಚಕ ನಾಗಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ನಡೆಯುತ್ತಿದೆ.ಇಂದು ಸಂಜೆ ಶ್ರೀಕಂಠೇಶ್ವರ ಸ್ವಾಮಿಯ ಕಾಶಿಯಾತ್ರೆ ಸೇರಿ ಧಾರಾ ಮುಹೂರ್ತ ಮುಕ್ತಾಯಗೊಳ್ಳಲಿದ್ದು, ಶ್ರೀಕಂಠೇಶ್ವರ ಸ್ವಾಮಿಯ ಕಲ್ಯಾಣೋತ್ಸವ ಕಣ್ತುಂಬಿಕೊಳ್ಳಲು ಭಕ್ತರು ಕಾತುರರಾಗಿದ್ದಾರೆ.

Next Story

RELATED STORIES